ಎಲ್ಲಾ ದಾಖಲೆ ಉಡೀಸ್ ಮಾಡುತ್ತಿರುವ ಜೈಲರ್‌ಗೆ ತಾಯ್ನಾಡಿನಲ್ಲಿಯೇ ಈ ಸಿನಿಮಾ ಸೋಲಿಸಲು ಸಾಧ್ಯವಿಲ್ಲ!
ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಎರಡನೇ ವಾರದಲ್ಲಿಯೂ ತನ್ನ ನಾಗಾಲೋಟ ಮುಂದುವರೆಸುತ್ತಿದೆ. ಥಿಯೇಟರ್‌ಗಳಲ್ಲಿ ಇನ್ನೂ ಭದ್ರ ಸ್ಥಾನ ಗಿಟ್ಟಿಸಿಕೊಂಡಿರುವ ಆಕ್ಷನ್ ಎಂಟರ್‌ಟೈನರ್ ಜೈಲರ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಟೈಗರ್ ಕಾ ಹುಕುಂ ಎನ್ನುತ್ತಲೇ ರಜನಿಕಾಂತ್ ತಾವಿನ್ನು ಸೂಪರ್ ಸ್ಟಾರ್ ಪಟ್ಟದಿಂದ ಇಳಿದಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದ ಸಿನಿಮಾ ಜೈಲರ್. ಜೈಲರ್ ಕಾಲಿವುಡ್‌ನಲ್ಲಿ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ್ದು, ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಅನೇಕ ದಾಖಲೆಗಳನ್ನು ಮುರಿದುಹಾಕಿದೆ.

ಪೊನ್ನಿಯಿನ್ ಸೆಲ್ವನ್ ದಾಖಲೆ ಮುರಿಯದ ಜೈಲರ್!
ರಜನಿಕಾಂತ್ ಅವರ ಸಕತ್ ಸ್ಕ್ರೀನ್ ಪ್ರೆಸೆನ್ಸ್, ನೆಲ್ಸನ್ ಅವರ ಉತ್ತಮ ನಿರ್ದೇಶನ, ಅನಿರುದ್ಧ್ ರವಿಚಂದರ್ ಅವರ ಕಿಕ್ ಕೊಡುವ ಬಿಜಿಎಂ ಮತ್ತು ಮೋಹನ್ ಲಾಲ್ , ಶಿವರಾಜಕುಮಾರ್, ಜಾಕಿ ಶ್ರಾಫ್ ಅವರ ರೋಮಾಂಚನಕಾರಿ ಅತಿಥಿ ಪಾತ್ರಗಳು ಈ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡುವುಂತೆ ಮಾಡಿದೆ.
ವಿಶ್ವದಾದ್ಯಂತ ಭಾರೀ ಯಶಸ್ಸು, ಇಷ್ಟೆಲ್ಲಾ ದಾಖಲೆಗಳನ್ನು ಮುರಿಯುತ್ತಿರುವ ಜೈಲರ್‌ಗೆ ತನ್ನ ತಾಯ್ನಾಡಿನಲ್ಲಿ, ಅಂದರೆ ತಮಿಳುನಾಡಿನಲ್ಲಿ ಪೊನ್ನಿಯಿನ್ ಸೆಲ್ವನ್ ಮಾಡಿರುವ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತಿಲ್ಲ. ಆಶ್ಚರ್ಯ ಆದೂ ಇದು ಸತ್ಯ. ಜೈಲರ್ ಸಿನಿಮಾ ತನ್ನದೆ ನಾಡಿನಲ್ಲಿ ಪೊನ್ನಿಯಿನ್ ಸೆಲ್ವನ್ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ.
ದೇಶಾದ್ಯಂತ ಸಂಚಲನ ಮೂಡಿಸಿ, ಸಾರ್ವಕಾಲಿಕ ದಾಖಲೆಗಳನ್ನು ಸಾಧಿಸಿದ ಚಿತ್ರ, ತಮಿಳುನಾಡಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿಲ್ಲ. ಏಕೆಂದರೆ ಜೈಲರ್ ತಮಿಳುನಾಡಿನಲ್ಲಿ ಇಲ್ಲಿಯವರೆಗೆ ಸುಮಾರು 155 ಕೋಟಿ ಸಂಗ್ರಹಿಸಿದ್ದು, ತಮಿಳುನಾಡಿನಲ್ಲಿ ಮೂರನೇ ಸ್ಥಾನದಲ್ಲಿದೆ!.

ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಿದೆ ಜೈಲರ್!
ತಮಿಳುನಾಡಿನಲ್ಲಿ ದಾಖಲೆ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ರಜನಿಕಾಂತ್ ಅವರ ಜೈಲರ್ ಸಿನಿಮಾವು ವಿಕ್ರಮ್ ಮತ್ತು ಪೊನ್ನಿಯಿನ್ ಸೆಲ್ವನ್ 1 ಚಿತ್ರಗಳ ನಂತರ 3 ನೇ ಸ್ಥಾನದಲ್ಲಿದೆ. ಈ ಚಿತ್ರವು ಕಮಲ್ ಹಾಸನ್ ಅವರ ವಿಕ್ರಮ್ ಚಿತ್ರದ ದಾಖಲೆ ಮುರಿದು ಟಾಪ್ 2 ಸ್ಥಾನದಲ್ಲಿ ನೆಲೆಸುವ ಸಾಧ್ಯತೆಯಿದೆ. ಆದರೆ ಪೊನ್ನಿಯಿನ್ ಸೆಲ್ವನ್ 1 ರ ದಾಖಲೆ ಮುರಿಯಲಾಗದು.
ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 1 ತಮಿಳುನಾಡಿನಲ್ಲಿ ಸುಮಾರು 230 ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ, ಜೈಲರ್ ಈವರೆಗೆ ಸುಮಾರು 155 ಕೋಟಿ ಕಲೆಕ್ಷನ್ ಮಾಡಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ದಾಖಲೆ ಮುರಿಯಲು ಜೈಲರ್‌ಗೆ ಇನ್ನೂ 75 ಕೋಟಿ ರೂಪಾಯಿಗಳ ಅಗತ್ಯವಿದೆ ಅದು ಈಗ ಅಸಾಧ್ಯವಾದ ಕೆಲಸವಾಗಿದೆ. ಹಾಗಾಗಿ ಪೊನ್ನಿಯಿನ್ ಸೆಲ್ವನ್ 1 ತಮಿಳುನಾಡಿನಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಉಳಿಯುತ್ತದೆ.
ತಮಿಳುನಾಡು ಬಿಟ್ಟರೇ ಭಾರತದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 12 ನೇ ದಿನದಲ್ಲಿ, 'ಜೈಲರ್' ಚಿತ್ರವು 'PS 1 ನ ಒಟ್ಟು ಕಲೆಕ್ಷನ್ ಅನ್ನು ಮೀರಿಸುವ ಮೂಲಕ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಇದು ಈಗ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ. ಈ ಪಟ್ಟಿಯಲ್ಲಿ ಕಮಲ್ ಹಾಸನ್ ಅವರ 'ವಿಕ್ರಮ್' ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಜೈಲರ್ ಆಗಸ್ಟ್ 21 ಸೋಮವಾರದಂದು ಸರಿಸುಮಾರು 7 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 12 ದಿನಗಳ ಕಲೆಕ್ಷನ್ 288.60 ಕೋಟಿ ರೂ. ಪೊನ್ನಿಯಿನ್ ಸೆಲ್ವನ್ 1 ಈವರೆಗೆ ಭಾರತದಲ್ಲಿ 260 ಕೋಟಿ ರೂಪಾಯಿ ಗಳಿಸಿತ್ತು.
ರಜನಿಕಾಂತ್ ಅವರ ಕೊನೆಯ ಸಿನಿಮಾ 'ಅನ್ನಾತೆ' ಸೀಲೊನ ಬಳಿಕ ಈ ಆಕ್ಷನ್ ಎಂಟರ್‌ಟೈನರ್ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಭಾರಿ ಉತ್ಸಾಹ ತುಂಬಿದೆ. ಚಿತ್ರ ಬಿಡುಗಡೆಗೂ ಮುನ್ನವೇ ರಜನಿಕಾಂತ್ ತಮ್ಮ ನೆಚ್ಚಿನ ಸ್ಥಳವಾದ ಹಿಮಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದರು.


Click it and Unblock the Notifications











