For Quick Alerts
  ALLOW NOTIFICATIONS  
  For Daily Alerts

  ತನ್ನ ಬಯೋಪಿಕ್‌ನಲ್ಲಿ ನಟಿಸಲು ಇಬ್ಬರು ಸ್ಟಾರ್ ನಟರ ಹೆಸರು ಸೂಚಿಸಿದ ಸುರೇಶ್ ರೈನಾ

  |

  ಬಯೋಪಿಕ್ ಗಳ ನಿರ್ಮಾಣದಲ್ಲಿ ಬಾಲಿವುಡ್ ಹಿಂದೆ ಬಿದ್ದಿಲ್ಲ. ಈಗಾಗಲೇ ಅನೇಕ ಬಯೋಪಿಕ್ ಗಳು ರಿಲೀಸ್ ಆಗಿವೆ. ಇನ್ನು ಕೆಲವು ಬಯೋಪಿಕ್ ಗಳು ನಿರ್ಮಾಣ ಹಂತದಲ್ಲಿವೆ. ಈ ನಡುವೆ ಮತ್ತೊಂದು ಬಯೋಪಿಕ್ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದು ಮತ್ಯಾರು ಅಲ್ಲ ಕ್ರಿಕೆಟಿಗ ಸುರೇಶ್ ರೈನಾ ಬಯೋಪಿಕ್.

  ಸುರೇಶ್ ರೈನಾ ಸಿನಿಮಾದಲ್ಲಿ ಹೀರೋ ಪಾತ್ರ ಮಾಡೋದ್ಯಾರು | Filmibeat Kannada

  ಈಗಾಗಲೇ ಕೆಲವು ಕ್ರಿಕೆಟ್ ಆಟಗಾರರ ಬಯೋಪಿಕ್ ತಯಾರಾಗಿ ಬಿಡುಗಡೆಯೂ ಆಗಿದೆ. ಸಚಿನ್, ಎಂ.ಎಸ್ ಧೋನಿ ಬಯೋಪಿಕ್ ಈಗಾಗಲೇ ರಿಲೀಸ್ ಆಗಿದೆ. ಇದೀಗ ಸುರೇಶ್ ರೈನಾ ಜೀವನಾಧಾರಿತ ಸಿನಿಮಾ ತೆರೆಮೇಲೆ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.

  ಅಂದಹಾಗೆ ತನ್ನ ಬಯೋಪಿಕ್ ಬಗ್ಗೆ ಇತ್ತೀಚಿಗೆ ಸ್ವತಃ ಸುರೇಶ್ ರೈನಾ ಅವರೇ ಮಾತನಾಡಿದ್ದಾರೆ. ಅಲ್ಲದೇ ಬಯೋಪಿಕ್ ನಲ್ಲಿ ಯಾವ ನಟ ಕಾಣಿಸಿಕೊಳ್ಳಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುರೇಶ್ ರೈನಾ, "ಬಯೋಪಿಕ್ ಮಾಡುವುದಾದರೆ ತಮಿಳು ನಟ ಸೂರ್ಯ ಅಥವಾ ಮಲಯಾಳಂ ನಟಿ ದುಲ್ಕರ್ ಸಲ್ಮಾನ್ ನಟಿಸಬೇಕು" ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  ನಟ ಸೂರ್ಯ ಅಪಾರ ಕ್ರಿಕೆಟ್ ಅಭಿಮಾನಿ. ಅವರು ಪಾತ್ರಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ದುಲ್ಕರ್ ಕೂಡ ಅತ್ಯುತ್ತಮವಾಗಿ ನಿಭಾಯಿಸುತ್ತಾರೆ ಎಂದು ಸುರೇಶ್ ರೈನಾ ಹೇಳಿದ್ದಾರೆ. ರೈನಾ ಮಾತು ಸೂರ್ಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

  ಸೂರ್ಯ ಮತ್ತು ಸುರೇಶ್ ರೈನಾ ನಡುವೆ ಉತ್ತಮ ಬಾಂಧವ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ರೈನಾ ಬೆಂಬಲಿಸಿ ಸೂರ್ಯ ಟ್ವೀಟ್ ಮಾಡುತ್ತಿರುತ್ತಾರೆ. ಅಭಿಮಾನಿಗಳು ಸಹ ರೈನಾ ಬಯೋಪಿಕ್ ನಲ್ಲಿ ಸೂರ್ಯ ನಟಿಸಲಿ ಎನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

  ಒಂದುವೇಳೆ ಸುರೇಶ್ ರೈನಾ ಬಯೋಪಿಕ್ ತೆರೆಮೇಲೆ ಬರುವುದಾದರೆ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಟೀಂ ಇಂಡಿಯಾದ ಪ್ರಸಿದ್ಧ ಆಟಗರರಲ್ಲಿ ಒಬ್ಬರಾಗಿದ್ದ ರೈನಾ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು. ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ರೈನಾ ಪತ್ನಿ ಪ್ರಿಯಾಂಕಾ, ಮತ್ತು ಇಬ್ಬರು ಮುದ್ದಾದ ಮಕ್ಕಳ ಜೊತೆ ಇದ್ದಾರೆ.

  English summary
  Suresh Raina suggests to Surya and Dulquer Salmaan name for in his Biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X