ಸೂರ್ಯ-ಜ್ಯೋತಿಕಾ ವಿಚ್ಛೇದನದ ವದಂತಿ: ಚೆನ್ನೈ ಬಿಟ್ಟು ಮುಂಬೈಗೆ ಹೋಗಲು ಕಾರಣ ತಿಳಿಸಿದ ಜ್ಯೋತಿಕಾ
ಸೆಲಬ್ರಿಟಿ ಜೋಡಿಗಳು ಏನೇ ಮಾಡಿದರೂ ಸುದ್ದಿಯಾಗುತ್ತದೆ. ಅವರು ನಕ್ಕರೂ, ಅತ್ತರೂ, ಒಟ್ಟಿಗೆ ಇದ್ದರು ಓಡಾಡಿದರೂ, ಬೇರೆ ಬೇರೆ ಓಡಾಡಿದರೂ ಚರ್ಚೆಯಾಗುತ್ತದೆ. ಇದಕ್ಕೆ ಕೆಲ ಅನುಮಾನುಗಳು ಸೇರಿಕೊಂಡರೇ ವದಂತಿಯಾಗಿ ಎಲ್ಲರ ಬಾಯಲ್ಲಿಯೂ ಸುತ್ತುತ್ತದೆ. ಇತ್ತೀಚೆಗೆ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇಧನದ ರೂಮರ್ಸ್ ಜಾಸ್ತಿಯಾಗಿತ್ತು. ಈಗ ಸೂರ್ಯ-ಜ್ಯೋತಿಕಾ ವಿಚ್ಛೇದನದ ವದಂತಿ ಸುತ್ತುತ್ತಿದೆ.
ಕೆಲ ದಿನಗಳಿಂದ ಹೆಸರಾಂತ ಸೆಲೆಬ್ರಿಟಿ ದಂಪತಿಯಾದ ಸೂರ್ಯ ಮತ್ತು ಜ್ಯೋತಿಕಾ ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ವ್ಯಾಪಕವಾಗಿ ಹರಡುತ್ತಿವೆ. ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಸೂರ್ಯ ಅವರನ್ನು ಬಿಟ್ಟು ನಟಿ ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದಾರೆ. ಇಬ್ಬರು ಡೈವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿಗಳಿದ್ದು, ಇದಕ್ಕೆ ನಟಿ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ ಡೈವರ್ಸ್ ವದಂತಿ
ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಸೂರ್ಯ ಮತ್ತು ಜ್ಯೋತಿಕಾ ಜೋಡಿ ಸೆಪ್ಟೆಂಬರ್ 11, 2006 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 1999 ರಲ್ಲಿ "ಪೂವೆಲ್ಲಂ ಕೆಟ್ಟುಪ್ಪರ್" ನಿಂದ ಪ್ರಾರಂಭವಾದ ಈ ಜೋಡಿಯ ಸಿನಿಮಾ ಒಟ್ಟು ಏಳು ಚಲನಚಿತ್ರಗಳಿಗೆ ಜೊತಡಯಾಗಿದೆ. ಈ ಜೋಡಿಗೆ 2007 ರಲ್ಲಿ ದಿಯಾ ಎಂಬ ಮಗಳು ಮತ್ತು 2010 ರಲ್ಲಿ ದೇವ್ ಎಂಬ ಮಗ ಜನಿಸಿದ್ದಾರೆ.
ತಮ್ಮ ವೈಯಕ್ತಿಕ ಮತ್ತು ವೃತ್ತಿಜೀವನವನ್ನು ಸಮತೋಲನದಲ್ಲಿಡಲು ಸೂರ್ಯ ಮತ್ತು ಜ್ಯೋತಿಕಾ ಪತ್ರಯತ್ನ ಪಡುತ್ತಿದ್ದಾರೆ. ಇದೇ ವೇಳೆ ಈ ದಂಪತಿ ಮುಂಬೈಗೆ ಸ್ಥಳಾಂತರಗೊಂಡ ನಂತರ ವಿಚ್ಛೇಧನದ ವದಂತಿಗಳು ಹೆಚ್ಚಾಗಲು ಕಾರಣವಾಯಿತು. ನಟಿ ಜ್ಯೋತಿಕಾ ಅವರು ಸ್ವಲ್ಪ ಸಮಯದಿಂದ ಮುಂಬೈನಲ್ಲೇ ವಾಸಿಸುತ್ತಿದ್ದಾರೆ ಎಂಬ ವರದಿಯ ಬೆನ್ನಲ್ಲೇ ವದಂತಿಗೂ ವೇಗ ಸಿಕ್ಕಿತ್ತು.
ವಿಚ್ಛೇಧನ ವದಂತಿಗೆ ಸ್ಪಷ್ಟನೆ ನೀಡಿದ ಜ್ಯೋತಿಕಾ
ನಟಿ ಜ್ಯೋತಿಕಾ ಅವರು ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ಉಳಿಯುತ್ತಿರುವುದು ಇಬ್ಬರ ನಡುವಿನ ಪ್ರತ್ಯೇಕತೆಯನ್ನು ಸೂಚಿಸುತ್ತದೆ ಎಂದು ಹಲವು ವರದಿಗಳು ಪ್ರಕಟವಾದವು. ಕಳೆದೆರಡು ತಿಂಗಳುಗಳ ಈ ಗಾಸಿಪ್‌ಗಳಿಗೆ ಜೋಡಿ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ಇದು ವದಂತಿ ಹೆಚ್ಚಾಗಲು ಅವಕಾಶ ಮಾಡಿಕೊಟ್ಟಿತು. ಆದರೆ, ವಿಚ್ಛೇದನದ ವದಂತಿಗಳಿಗೆ ಮೊದಲ ಬಾರಿಗೆ ಪ್ರತಿಕ್ರಿಯಿಸುವ ಮೂಲಕ ಜ್ಯೋತಿಕಾ ಎಲ್ಲಾ ಅಂತೆ ಕಂತೆಗಳಿಗೆ ಅಂತ್ಯ ಹಾಡಿದ್ದಾರೆ.

ಇತ್ತೀಚೆಗೆ, ಚಲನಚಿತ್ರೋದ್ಯಮದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿಸಿದ್ದು, ಎರಡು ಬಾಲಿವುಡ್ ಪ್ರಾಜೆಕ್ಟ್‌ಗಳು ಸೇರಿದಂತೆ ಹಲವಾರು ಆಫರ್‌ಗಳು ಅವರ ಕೈಯಲ್ಲಿವೆ. ಮುಂಬೈಗೆ ಸ್ಥಳಾಂತರಗೊಂಡಿರುವುದು ಪ್ರಾಥಮಿಕವಾಗಿ ಶೂಟಿಂಗ್ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಎಂದು ಮಾಹಿತಿ ನೀಡಿದ್ದಾರೆ.
ಶೂಟಿಂಗ್ ಮತ್ತು ಮಕ್ಕಳ ಶಿಕ್ಷಣದ ಕಾರಣಗಳಿಗಾಗಿ ಮುಂಬೈಗೆ ಸ್ಥಳಾಂತರಗೊಂಡಿದ್ದೇನೆ. ಈ ಕಮಿಟ್‌ಮೆಂಟ್‌ಗಳನ್ನು ಮುಗಿಸಿದ ನಂತರ ಚೆನ್ನೈಗೆ ವಾಪಸ್ ಹೋಗಲು ಯೋಜಿಸುತ್ತಿದ್ದೇನೆ ಎಂದು ನಟಿ ಜ್ಯೋತಿಕಾ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಗಳು ಅವರ ವಿಚ್ಛೇದನದ ಸುತ್ತಲಿನ ವದಂತಿಗೆ ಫುಲ್ ಸ್ಟಾಪ್ ಹಾಕಿವೆ.
ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ, ನಟಿ ಜ್ಯೋತಿಕಾ ಸತತವಾಗಿ ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಅವರ ಇತ್ತೀಚಿನ ಮಮ್ಮುಟ್ಟಿ ಅವರೊಂದಿಗಿನ ಚಿತ್ರ, 'ಕಥಲ್- ದಿ ಕೋರ್' ಥಿಯೇಟರ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಶಂಸೆ ಗಳಿಸುತ್ತಿದೆ. ಇನ್ನು, ಜ್ಯೋತಿಕಾ ಅವರ 'ಸೈಥಾನ್' ಟೀಸರ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದ್ದು, ಸಕಾರಾತ್ಮಕ ವಿಮರ್ಶೆ ಪಡೆದಿದೆ.


Click it and Unblock the Notifications











