ಸೂರ್ಯ- ಜ್ಯೋತಿಕಾ ಇಬ್ಬರನ್ನು ಒಂದು ಮಾಡಿದ ಅಯೋಗ್ಯ ಹೆಂಗಸು ಈಕೆ; ಸೂರ್ಯ ತಂದೆ ಹೇಳಿಕೆ ವೈರಲ್

ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. 'ಪೂವೆಲ್ಲಾಂ ಕೆಟ್ಟುಪ್ಪರ್' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಸ್ನೇಹ ಮುಂದುವರೆದು 'ಕಾಕ್ಕಾ ಕಾಕ್ಕಾ' ಚಿತ್ರದ ವೇಳೆ ಇಬ್ಬರೂ ಪ್ರೀತಿಸಿ ಮುಂದೆ ಮದುವೆ ಆಗಿದ್ದರು.

ಸೂರ್ಯ ಹಾಗೂ ಜ್ಯೋತಿಕಾ ಪ್ರೀತಿ ಮೊದಲಿಗೆ ನನಗೆ ಇಷ್ಟವಿರಲಿಲ್ಲ ಎಂದು ಸೂರ್ಯ ಅವರ ತಂದೆ ಹಿರಿಯ ನಟ ಶಿವಕುಮಾರ್ ಹೇಳಿದ್ದಾರೆ. ಗಲಾಟ ತಮಿಳ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ರಾಧಿಕಾ ಜೊತೆ ಶಿವಕುಮಾರ್ ಭಾಗಿ ಆಗಿದ್ದಾರೆ. ನಟಿ ಸುಹಾನಿಸಿ ನಿರೂಪಣೆಯಲ್ಲಿ ಸಂದರ್ಶನ ಸಖತ್ ವೈರಲ್ ಆಗ್ತಿದೆ. ತಮ್ಮ ಸಿನಿಜರ್ನಿ ಜೊತೆಜತೆಗೆ ಇಬ್ಬರೂ ವೈಯಕ್ತಿಕ ಜೀವನದ ಸಾಕಷ್ಟು ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಸೂರ್ಯ ಮದುವೆ ವಿಚಾರ ಕೂಡ ಬಂದಿದೆ. ಅವರಿಬ್ಬರು ಒಂದಾಗಲೂ ರಾಧಿಕಾ ಒಂದರ್ಥದಲ್ಲಿ ಕಾರಣ ಎಂದು ಶಿವಕುಮಾರ್ ಹೇಳಿದ್ದಾರೆ.

Suriya Jyothika Love Story Sivakumar Reveals Why He First Opposed Their Romance

ಶಿವಕುಮಾರ್ ಒಂದ್ಕಾಲದಲ್ಲಿ ಹೀರೊ ಆಗಿ ಜನಪ್ರಿಯರಾಗಿದ್ದರು. ರಾಧಿಕಾ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆ ದಿನಗಳನ್ನು ಇಬ್ಬರೂ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಸೂರ್ಯ ಹಾಗೂ ಜ್ಯೋತಿಕಾ ನಟಿಸಿದ್ದ 'ಉಯಿರಿಲೆ ಕಲಂಥತ್ತು' ಚಿತ್ರದಲ್ಲಿ ಶಿವಕುಮಾರ್ ಹಾಗೂ ರಾಧಿಕಾ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಆಗ ಸೂರ್ಯ ಬಹಳ ನಾಚಿಕೆ ಸ್ವಭಾವದ ಹುಡುಗ ಆಗಿದ್ದ ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ.

"ಆಗ ಸೂರ್ಯಗೆ ಬಹಳ ನಾಚಿಕೆ. ಒಂದ್ಕಡೆ ಸುಮ್ನೆ ಕೂತಿರುತ್ತಿದ್ದ. ಸೂರ್ಯ ಹೀಗಿರಬೇಡ. ಧೈರ್ಯವಾಗಿರು, ಚೆನ್ನಾಗಿ ನಗು, ಮುಖ ಊದಿಸಿಕೊಂಡಿರಬೇಡ ಎನ್ನುತ್ತಿದ್ದೆ. ಆ ಜ್ಯೋತಿಕಾ ಕೂಡ ಒಂದು ಮೂಲೆಯಲ್ಲಿ ಸುಮ್ನೆ ಕೂತಿರುತ್ತಿದ್ದಳು. ಹೋಗಿ ಜ್ಯೋತಿಕಾ ಬಳಿ ಮಾತಾಡು ಎನ್ನುತ್ತಿದ್ದೆ" ಎಂದಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಶಿವಕುಮಾರ್ "ಅವರಿಬ್ಬರನ್ನು ಒಂದು ಮಾಡಿದ ಅಯೋಗ್ಯ ಮಹಿಳೆ ಇವಳೇ" ಎಂದು ತಮಾಷೆಯಾಗಿ ಹೇಳಿದ್ದಾರೆ. ರಾಧಿಕಾ, ಸುಹಾಸಿನಿ ಬಿದ್ದು ಬಿದ್ದು ನಕ್ಕಿದ್ದಾರೆ.

ಸೂರ್ಯ ಸುಮ್ಮನೆ ಇರ್ತಿದ್ದ, ಹೋಗಿ ಮಾತಾಡು ಮಾತಾಡು ಎಂದು ಹುರಿದುಂಬಿಸಿ, ಈಗ ಅವನು ಇಬ್ಬರು ಮಕ್ಕಳು ಮಾಡಿಕೊಂಡಿದ್ದಾನೆ ಎಂದು ಶಿವಕುಮಾರ್ ನಗೆಚಟಾಕಿ ಹಾರಿಸಿದ್ದಾರೆ. "ಸೂರ್ಯಗೆ ಬಹಳ ನಾಚಿಕೆ. ಜ್ಯೋತಿಕಾ ಕೂಡ ಹಾಗೆ ಇದ್ಲು, ನಾನೇ ಹೋಗಿ ಮಾತಾಡು ಎಂದು ಹೇಳಿದ್ರು ಕೇಳ್ತಿರಲಿಲ್ಲ" ಎಂದು ರಾಧಿಕಾ ಹೇಳಿದ್ದಾರೆ. ಶಿವಕುಮಾರ್ ಮಾತನಾಡಿ "ಸೂರ್ಯ 30 ಸಿನಿಮಾ ಮಾಡಿರಬಹುದು, ನಟಿಯರ ಜೊತೆ ರೊಮ್ಯಾಂಟಿಕ್ ಆಗಿ ನಟಿಸಿದ್ದೇ ನೋಡಿಲ್ಲ. ಹಾಗ್ ನೋಡಿದ್ರೆ, ನಾನು ಆ ಕಾಲದಲ್ಲೇ ಅಂತಹ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದೆ. ಅದೆಷ್ಟು ನಾಯಕಿಯರ ಜೊತೆ ಉರುಳಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೆ ಎನ್ನುವುದು ಗೊತ್ತಿಲ್ಲ. ಆದರೆ ಸೂರ್ಯ ನಾಯಕಿಯರ ಜೊತೆ ಅಂತಹ ಕಾಯ್ದುಕೊಂಡೇ ನಟಿಸುತ್ತಾನೆ" ಎಂದು ಶಿವಕುಮಾರ್ ಹೇಳಿದ್ದಾರೆ.

ಮೊದಲಿಗೆ ಸೂರ್ಯ ಹಾಗೂ ಜ್ಯೋತಿಕಾ ಲವ್ ಇಷ್ಟ ಇರಲಿಲ್ಲ. ಬಳಿಕ ನನಗೂ ಅರ್ಥ ಆಯ್ತು ಎಂದು ಶಿವಕುಮಾರ್ ತಿಳಿಸಿದ್ದಾರೆ. "ನಾನು 150 ಸಿನಿಮಾಗಳಲ್ಲಿ ಲವ್ ಮಾಡಿ ಮದುವೆ ಆಗಿರುವ ಸನ್ನಿವೇಶಗಳಲ್ಲಿ ನಟಿಸಿದ್ದೀನಿ. ಹಾಗಿರುವಾಗ ನನ್ನ ಮಗ ಒಂದು ಹುಡುಗಿಯನ್ನು ಪ್ರೀತಿಸಿದ್ದೀನಿ ಎಂದಾಗ ಬೇಡ ಎಂದರೆ ಹೇಗೆ, ನಾಳೆ ಅವನು ಕೇಳಬಹುದಲ್ಲ. ಆರಂಭದಲ್ಲಿ ಇಷ್ಟವಿಲ್ಲದೇ ಇದ್ದರೂ ಕೊನೆಗೆ ಎಲ್ಲಾ ಒಪ್ಪಿಕೊಂಡು ಮದುವೆ ಆಯಿತು" ಎಂದು ಸೂರ್ಯ, ಜ್ಯೋತಿಕಾ ಮದುವೆ ಬಗ್ಗೆ ಶಿವಕುಮಾರ್ ಹೇಳಿದ್ದಾರೆ. 2006ರಲ್ಲಿ ಸೂರ್ಯ, ಜ್ಯೋತಿಕಾ ಮದುವೆ ನಡೆದಿತ್ತು. ಸದ್ಯ ಮಕ್ಕಳ ಸಮೇತ ದಂಪತಿ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ.

More from Filmibeat

Read more about: suriya jyothika radhika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X