ಕಾಲಿವುಡ್ ಬಾಹುಬಲಿ 'ಕಂಗುವ' ಹೊಸ ಪೋಸ್ಟರ್ ಔಟ್: ಭೂತ, ವರ್ತಮಾನ, ಭವಿಷ್ಯತ್‌ನಲ್ಲಿ ಸೂರ್ಯ ಆರ್ಭಟ

ತಮಿಳು ನಟ ಸೂರ್ಯ ನಟನೆಯ 'ಕಂಗುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಜಗತ್ತಿನ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಬಹುಕೋಟಿ ವೆಚ್ಚದಲ್ಲಿ ಶಿವ ಈ ಪೀರಿಯಡ್ ಆಕ್ಷನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿದಿದ್ದು ಸಂಕ್ರಾಂತಿ ಸಂಭ್ರಮದಲ್ಲಿ 'ಕಂಗುವ' ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಗಿದೆ. ಚಿತ್ರದಲ್ಲಿ ಕಾಲಿವುಡ್ ನಡಿಪ್ಪಿನ್ ನಾಯಗರ್ ಸೂರ್ಯ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಬ್ಲಾಕ್‌ ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸದ್ಯ 'ಕಂಗುವ' ಚಿತ್ರವನ್ನು ತಮಿಳಿನ ಬಾಹುಬಲಿ ಎಂದೇ ಬಿಂಬಿಸಲಾಗುತ್ತಿದೆ.

 Suriya Starrer Kanguva second poster revealed

'ಬಾಹುಬಲಿ' ರೀತಿಯ ಚಿತ್ರವನ್ನು ಕಾಲಿವುಡ್ ಮಂದಿ ಮಾಡೋಕೆ ಸಾಧ್ಯವಾಗಲಿಲ್ಲ ಎನ್ನುವ ಚರ್ಚೆ ಪದೇ ಪದೆ ನಡೆಯುತ್ತಿರುತ್ತದೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸಿಲ್ವನ್' ಬಂದಾಗ 'ಬಾಹುಬಲಿ'ಯನ್ನು ಮೀರಿಸುತ್ತದೆ ಎನ್ನಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಸಿನಿಮಾ ಚೆನ್ನಾಗಿದೆ ಎನಿಸಿದರೂ ನಿರೀಕ್ಷೆ ತಲುಪುವಲ್ಲಿ, ಬಾಕ್ಸಾಫೀಸ್ ಗಳಿಕೆಯಲ್ಲಿ ಸಿನಿಮಾ ಹಿಂದೆ ಬಿದ್ದಿತ್ತು. ಇದೀಗ 'ಕಂಗುವ' ಚಿತ್ರವನ್ನು ಇದೇ ರೀತಿ ಚಿತ್ರಿಸುವ ಪ್ರಯತ್ನಗಳು ನಡೀತಿದೆ.

'ಕಂಗುವ' ಚಿತ್ರತಂಡ ಕೂಡ ಬಹಳ ಭರವಸೆಯಿಂದ ಸಿನಿಮಾ ನಿರ್ಮಿಸಿದೆ. ಅದ್ಧೂರಿ ಸೆಟ್‌ಗಳಲ್ಲಿ ನಿರ್ಮಿಸಿ ಬಹಳ ರೋಚಕವಾಗಿ ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. 'ಕಂಗುವ' ಆಗಿ ಸೂರ್ಯ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಹಿಂದೆ ಬಂದಿದ್ದ ಸಣ್ಣ ಝಲಕ್ ಸೂಪರ್ ಹಿಟ್ ಆಗಿತ್ತು. ಇದೀಗ ಎರಡನೇ ಪೋಸ್ಟರ್ ಹೊರ ಬಂದಿದೆ. ಪೋಸ್ಟರ್‌ನಲ್ಲಿ ಎರಡು ಬೇರೆ ಬೇರೆ ಲುಕ್‌ನಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿ ಮೂಡಿಸಿದೆ.

 Suriya Starrer Kanguva second poster revealed

ಭೂತಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯತ್ ಕಾಲದ ಕಥೆಯನ್ನು 'ಕಂಗುವ' ಚಿತ್ರದಲ್ಲಿ ಹೇಳುತ್ತಿರುವುದಾಗಿ ಚಿತ್ರತಂಡ ರಿವೀಲ್ ಮಾಡಿದೆ. ಈ ಹಿಂದೆ ಟೀಸರ್‌ನಲ್ಲಿ ರಿವೀಲ್ ಆಗಿದ್ದ ವಾರಿಯರ್ ಪಾತ್ರ ಮಾತ್ರವಲ್ಲದೇ ಆಧುನಿಕ ಕಾಲದ ಸ್ಟೈಲಿಶ್ ಲುಕ್‌ನಲ್ಲಿ ಕೂಡ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದು ಸಹಜವಾಗಿಯೇ ಸಿನಿಮಾ ಕಥೆ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ. ದಿಶಾ ಪಟಾನಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿ ಸೂರ್ಯ ನಟಿಸಿದ್ದಾರೆ. ಈ ಹಿಂದೆ ಬಂದಿದ್ದ 'ಕಂಗುವ' ಟೀಸರ್‌ನಲ್ಲಿ ಹುಲಿ ಉಗುರುಗಳ ಸರ, ಉದ್ದ ಜಟೆ, ವಿಚಿತ್ರ ವೇಷ ಭೂಷಣದಲ್ಲಿ ವಿಭಿನ್ನ ಬುಡಕಟ್ಟು ಸಮುದಾಯದ ನಾಯಕನಾಗಿ ಸೂರ್ಯ ಅಬ್ಬರಿಸಿದ್ದರು. ಜಗತ್ತಿನ 38 ಭಾಷೆಗಳಲ್ಲಿ 'ಕಂಗುವ' ಸಿನಿಮಾ ತೆರೆಗೆ ತರುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಇನ್ನು 2D ಮಾತ್ರವಲ್ಲದೇ 3D ಹಾಗೂ ಐಮ್ಯಾಕ್ಸ್ ವರ್ಷನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಸ್ಟುಡಿಯೋ ಗ್ರೀನ್ ಹಾಗೂ ಯುವಿ ಸಂಸ್ಥೆ 'ಕಂಗುವ' ಸಿನಿಮಾ ನಿರ್ಮಿಸಿದೆ. ಯೋಗಿ ಬಾಬು, ಕೊವೈ ಸರಳ, ಆನಂದ್‌ರಾಜ್, ಜಗಪತಿ ಬಾಬು, ಕೆ. ಎಸ್ ರವಿಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ವೆಟ್ರಿ ಪಳನಿಸ್ವಾಮಿ ಛಾಯಾಗ್ರಹಣ, ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಸೂರ್ಯ ಚಿತ್ರದಲ್ಲಿ 5 ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Siva directional Kanguva new poster goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X