ಸೂರ್ಯ 'ಕಂಗುವ' ಚಿತ್ರಕ್ಕೆ ಮತ್ತೊಂದು ಪೆಟ್ಟು; ಓಟಿಟಿ ರಿಲೀಸ್‌ಗೂ ಮುನ್ನವೇ...
ತಮಿಳಿನ 'ಕಂಗುವ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಚಿತ್ರಕ್ಕೆ ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದಿತ್ತು. ಅಲ್ಲಿಂದ ಮುಂದೆ ಚಿತ್ರ ಸೋಲಿನ ಹಾದಿ ಹಿಡಿಯಿತು. ಚಿತ್ರತಂಡ ಕೂಡ ಸೈಲೆಂಟ್ ಆಗಿಬಿಡ್ತು. ನವೆಂಬರ್ 15ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಭಾರೀ ನಷ್ಟ ತಂದೊಡ್ಡಿದೆ.
ಶಿವ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಡ್ರಾಮಾ 'ಕಂಗುವ'. ಎರಡು ಬೇರೆ ಬೇರೆ ಕಾಲಘಟ್ಟದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಸೂರ್ಯ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ ಮೋಡಿ ಮಾಡುವ ಪ್ರಯತ್ನ ಮಾಡಿದ್ದರು. ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾದರೂ ಸಿನಿಮಾ ಮಾತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲನಾಗಿದ್ದಾರೆ. ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ.

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ 'ಕಂಗುವ' ಸಿನಿಮಾ ನಿರ್ಮಾಣವಾಗಿದೆ. 17 ದಿನಕ್ಕೆ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ನಿರಾಸೆ ಮೂಡಿಸಿದೆ. ಅಮೇಜಾನ್ ಪ್ರೈಂ ವೀಡಿಯೋಗೆ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ. ಶೀಘ್ರದಲ್ಲೇ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಬೇಕಿದೆ. ಅಷ್ಟರಲ್ಲೇ ಚಿತ್ರಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. HD ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ಹೌದು ಇತ್ತೀಚೆಗೆ ತಮಿಳು ಸಿನಿಮಾಗಳಿಗೆ ಈ ಸಂಕಷ್ಟ ಪದೇ ಪದೆ ಎದುರಾಗುತ್ತಿದೆ. ವಿದೇಶಗಳಲ್ಲಿ ಮೊದಲೇ ಸಿನಿಮಾಗಳು ಓಟಿಟಿಗೆ ಬರುತ್ತವೆ. ಅಲ್ಲಿಂದ ಚಿತ್ರವನ್ನು ಕೆಲ ಕಿಡಿಗೇಡಿಗಳಯ ಲೀಕ್ ಮಾಡುತ್ತಿದ್ದಾರೆ. ಈ ಹಿಂದೆ 'ಜೈಲರ್', 'GOAT' ಚಿತ್ರಗಳಿಗೆ ಇದೇ ಸಮಸ್ಯೆ ಎದುರಾಗಿತ್ತು. ಮೊನ್ನೆ ಮೊನ್ನೆ ಕನ್ನಡದ 'ಮಾರ್ಟಿನ್' ಸಿನಿಮಾ ಕೂಡ ಇದೇ ಹಾದಿ ಹಿಡಿದಿತ್ತು. ಇದೀಗ ಸೂರ್ಯ ನಟನೆಯ 'ಕಂಗುವ' ಚಿತ್ರ ಕೂಡ ಇದೇ ರೀತಿ ಲೀಕ್ ಆಗಿ ಸದ್ದು ಮಾಡ್ತಿದೆ.

'ಕಂಗುವ' ಚಿತ್ರವನ್ನು ತೆರೆಮೇಲೆ ನೋಡಿದಾಗ ಕೆಲವರು ಸಾಕಷ್ಟು ಟೀಕೆ ಮಾಡಿದ್ದರು. ಕೆಲ ಸನ್ನಿವೇಶಗಳ ಬಗ್ಗೆ ಕುಹಕವಾಡಿದ್ದರು. ಇದೀಗ ಸಿನಿಮಾ ಲೀಕ್ ಆಗಿದ್ದು ಸಣ್ಣ ಸಣ್ಣ ವೀಡಿಯೋಗಳನ್ನು ಕಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಚಿತ್ರವನ್ನು ನೋಡಿ ಮೆಚ್ಚಿ ಕೊಂಡಾಡಿದರೆ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.
ಸೂರ್ಯ 'ಕಂಗುವ' ಚಿತ್ರದ ಮೇಲೆ ಬಹಳ ಭರವಸೆಯಿಂದ ಇದ್ದರು. ಇದು ತಮಿಳಿನ 'ಬಾಹುಬಲಿ' ಎನ್ನುವ ರೀತಿ ಪ್ರಚಾರ ಮಾಡುತ್ತಾ ಬಂದಿದ್ದರು. ಆದರೆ ಎಲ್ಲವೂ ವ್ಯರ್ಥವಾಯಿತು. ಮುಂದೆ ಮಾಡಬೇಕಿದ್ದ ಬಹುಕೋಟಿ ವೆಚ್ಚದ ಸಿನಿಮಾವೊಂದು ನಿಂತೇಹೋಗಿದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆಯೂ ಹೊಸ ಚಿತ್ರವನ್ನು ಸೂರ್ಯ ಆರಂಭಿಸಿದ್ದಾರೆ.
ಡಿಸೆಂಬರ್ ಎರಡನೇ ವಾರ 'ಕಂಗುವ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಪ್ಲ್ಯಾನ್ ಮಾಡಲಾಗುತ್ತಿತ್ತು. ಆದರೆ ಈಗ ಲೀಕ್ ಆಗಿರುವುದರಿಂದ ಅದಕ್ಕಿಂತ ಮುಂಚೆ ಸಿನಿಮಾ ಡಿಜಿಟಲ್ ರಿಲೀಸ್ ಆಗುವ ನಿರೀಕ್ಷೆಯಿದೆ. ಇದೇ ಶುಕ್ರವಾರ ಸಿನಿಮಾ ಪ್ರೈಂ ವೀಡಿಯೋಗೆ ಬಂದರೂ ಅಚ್ಚರಿಪಡಬೇಕಿಲ್ಲ. ಒಟ್ಟಾರೆ ಅಮೇಜಾನ್ ಪ್ರೈಂಗೆ ಇದರಿಂದ ಕೊಂಚ ಮಟ್ಟಿಗೆ ನಷ್ಟ ಆಗುವುದು ಖಚಿತ.
ಚಿತ್ರಮಂದಿರಗಳಲ್ಲಿ ನೆಗೆಟಿವ್ ರೆಸ್ಪಾನ್ಸ್ ಪಡೆದ ಚಿತ್ರವನ್ನು ಜನ ಓಟಿಟಿಯಲ್ಲಿ ನೋಡಲು ಕಾಯುತ್ತಾರೆ. ಆದರೆ ಈ ರೀತಿ ಮೊದಲೇ HD ಪ್ರಿಂಟ್ ಬಂದರೆ ನೋಡುವವರ ಸಂಖ್ಯೆ ಕಮ್ಮಿ ಇಲ್ಲ. ಹಾಗಾಗಿ ಸಹಜವಾಗಿಯೇ ಓಟಿಟಿಯಲ್ಲಿ ವೀಕ್ಷಿಸುವವರ ಸಂಖ್ಯೆ ಇಳಿಕೆ ಆಗುತ್ತದೆ. ಎಷ್ಟು ಜನ ಎಷ್ಟು ಹೊತ್ತು ವೀಕ್ಷಿಸುತ್ತಾರೆ ಎನ್ನುವ ಆಧಾರದಲ್ಲೇ ಓಟಿಟಿ ಗಳಿಕೆ ಲೆಕ್ಕಾಚಾರ ಇರುತ್ತದೆ. ಹಾಗಾಗಿ ಲೀಕ್ ಎನ್ನುವುದು ಓಟಿಟಿ ವೀಕ್ಷಣೆಗೆ ಮೇಲೆ ಪ್ರಭಾವ ಬೀರುತ್ತದೆ.


Click it and Unblock the Notifications











