ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ: ನಾಯಕ ಇವರೆ

ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನ ಸಿನಿಮಾ ಆಗಿ ತೆರೆ ಮೇಲೆ ಬರುಲು ಸಿದ್ಧವಾಗಿದೆ. ಕನ್ನಡಿಗರೊಬ್ಬರ ಜೀವನ ತಮಿಳಿನಲ್ಲಿ ಸಿನಿಮಾ ಆಗಿ ತೆರೆ ಬರುತ್ತಿರುವುದು ಹೆಮ್ಮೆಯ ವಿಚಾರ. ಕ್ಯಾಪ್ಟನ್ ಗೋಪಿನಾಥ್ ಆಗಿ ನಟ ಸೂರ್ಯ ಕಾಣಿಸಿಕೊಂಡಿದ್ದಾರೆ. ಸೂರರೈ ಪೊಟ್ರು ಟೈಟಲ್ ನಲ್ಲಿ ಸಿನಿಮಾ ತಯಾರಾಗಿದೆ.

Recommended Video

ಸುಳ್ಳಾಯ್ತು ದರ್ಶನ್ ಅಭಿಮಾನಿಗಳ ಆಸೆ | Darshan starrer Robert Cinema is to be released next year

ತಮಿಳಿನ ಜೊತೆ ಈ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಸಿನಿಮಾ ಬಾಲಿವುಡ್ ನಲ್ಲಿಯೂ ಈ ಸಿನಿಮಾ ಸೆಟ್ಟೇರುತ್ತಿದೆ. ರಿಲೀಗೂ ಮೊದಲೆ ಸೂರರೈ ಪೊಟ್ರು ಸಿನಿಮಾದ ರಿಮೇಕ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಈ ಮೂಲಕ ಬಾಲಿವುಡ್ ನಲ್ಲಿಯೂ ಕ್ಯಾಪ್ಟನ್ ಗೋಪಿನಾಥ್ ಮಿಂಚಲಿದ್ದಾರೆ. ಮುಂದೆ ಓದಿ..

ಕ್ಯಾಪ್ಟನ್ ಗೋಪಿನಾಥ್ ಆಗಿ ಬಣ್ಣ ಹಚ್ತಾರಾ ಶಾಹಿದ್?

ಕ್ಯಾಪ್ಟನ್ ಗೋಪಿನಾಥ್ ಆಗಿ ಬಣ್ಣ ಹಚ್ತಾರಾ ಶಾಹಿದ್?

ಸೂರರೈ ಪೊಟ್ರು ಹಿಂದಿ ರಿಮೇಕ್ ಚಿತ್ರಕ್ಕೆ ನಾಯಕ ಕೂಡ ಆಯ್ಕೆಯಾಗಿದ್ದಾರೆ. ಮೂಲಗಳ ಪ್ರಕಾರ ಕ್ಯಾಪ್ಟನ್ ಗೋಪಿನಾಥ್ ಆಗಿ ಬಾಲಿವುಡ್ ನಟ ಶಾಹಿದ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರಂತೆ. ದಕ್ಷಿಣ ಭಾರತದ ಸಿನಿಮಾಗಳ ರಿಮೇಕ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಾಹಿದ್, ಸದ್ಯ ಕ್ಯಾಪ್ಟನ್ ಗೋಪಿನಾಥ್ ಆಗಿ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಬಣ್ಣಹಚ್ಚುವ ಸಾಧ್ಯತೆ ಇದೆ.

ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾಹಿದ್

ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾಹಿದ್

ದಕ್ಷಿಣ ಭಾರತದಲ್ಲಿ ಸೂಪರ್ ಹಿಟ್ ಆದ ಅರ್ಜುನ್ ರೆಡ್ಡಿ ಮತ್ತು ಜರ್ಸಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶಾಹಿದ್ ಮತ್ತೊಂದು ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ. ಸೂರರೈ ಪೊಟ್ರು ಚಿತ್ರಕ್ಕೆ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿಂದಿಯಲ್ಲಿಯೂ ಸುಧಾ ಕೊಂಗಾರ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರೊನಾ ಹಾವಳಿಯಿಂದ ರಿಲೀಸ್ ಮುಂದಕ್ಕೆ

ಕೊರೊನಾ ಹಾವಳಿಯಿಂದ ರಿಲೀಸ್ ಮುಂದಕ್ಕೆ

ತಮಿಳಿನ ನಿರೀಕ್ಷೆಯ ಸಿನಿಮಾದಲ್ಲಿ ಸೂರರೈ ಪೊಟ್ರು ಸಿನಿಮಾ ಕೂಡ ಒಂದು. ಅಂದುಕೊಂಡಂತೆ ಆಗಿದ್ದರೆ ಈಗಾಗಲೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

ಕ್ಯಾಪ್ಟನ್ ಗೊಪಿನಾಥ್ ಬಗ್ಗೆ

ಕ್ಯಾಪ್ಟನ್ ಗೊಪಿನಾಥ್ ಬಗ್ಗೆ

ಕ್ಯಾಪ್ಟರ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗುತ್ತಾರೆ. ಆ ನಂತರ ಏರ್ ಡೆಕ್ಕರ್ ವಿಮಾನಯಾನ ಸಂಸ್ಥೆಯ ಹುಟ್ಟುಹಾಕುತ್ತಾರೆ. ಕಡಿಮೆ ಹಣದಲ್ಲಿ ವಿಮಾನಯಾನ ಪ್ರಾರಂಭಿಸುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗುತ್ತಾರೆ. ಜಿ.ಆರ್ ಗೋಪಿನಾಥ್ ಅವರ ಜೀವನದ ರೋಚಕ ಕಥೆಯೆ ಸಿನಿಮಾ ರೂಪದಲ್ಲಿ ನೋಡಲು ಪ್ರೇಕ್ಷಕರು ಕಾತರರಾಗಿದ್ದರೆ.

More from Filmibeat

English summary
Tamil Actor Surya Starrer Soorarai Pottru will set remake in Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X