Kamal Haasan: ನಾಯಕನ್, ಇಂಡಿಯನ್ ಸೇರಿ ನಟ ಕಮಲ್ ಹಾಸನ್ ಅವರ ನೋಡಲೇಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ

ನಟ, ನಿರ್ಮಾಪಕ, ರಾಜಕಾರಣಿ ಕಮಲ್ ಹಾಸನ್ ಭಾರತೀಯ ಸಿನಿಮಾ ರಂಗ ಕಂಡ ಒಬ್ಬ ಅಪ್ರತಿಮ ನಟ. ಸಿನಿರಂಗಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲಾ ಭಾಷೆಗಳಲ್ಲಿಯೂ ಕಮಲ್ ಹಾಸನ್ ಗುರುತಿಸಿಕೊಂಡಿದ್ದಾರೆ. ತಮ್ಮ ನಟನಾ ಕೌಶಲ್ಯ ಮತ್ತು ಸಿನಿಮಾಗಳ ಆಯ್ಕೆಯಿಂದ ಪ್ರತ್ಯೇಕ ಫ್ಯಾನ್ ಬೇಸ್ ಇರಿಸಿಕೊಂಡಿದ್ದಾರೆ.

ನವೆಂಬರ್ 7 ರಂದು ನಟ ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದ ಹಲವು ಗಣ್ಯರು, ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಬರ್ತ್‌ಡೇ ಸಂದರ್ಭದಲ್ಲಿ ಕಮಲ್ ಹಾಸನ್ ಅವರ ಹೆಚ್ಚು ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ಕೆಲವನ್ನು ವಿವರಿಸುವ ಕೆಲಸ ಮಾಡಿದ್ದೇವೆ.

kamal-haasan-s-memorable-films

1. ನಾಯಕನ್: ಈ ತಮಿಳು ಕ್ಲಾಸಿಕ್ ಸಿನಿಮಾ, ಬಾಂಬೆ ಭೂಗತ ಲೋಕದ ಡಾನ್ ವರದರಾಜನ್ ಮುದಲಿಯಾರ್‌ನಿಂದ ಪ್ರೇರಿತವಾದ ಪಾತ್ರವಾದ ವೇಲು ನಾಯಕನ್ ಅವರ ಕಥೆಯನ್ನು ಹೇಳುತ್ತದೆ. ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿನಿಮಾಗೆ ಮಣಿರತ್ನಂ ನಿರ್ದೇಶನವಿದೆ.

2. ಸದ್ಮಾ : ಈ ಸಿನಿಮಾವು ಆಘಾತಕಾರಿ ಘಟನೆಯ ನಂತರ ಮುಗ್ಧ ಮಗುವಿನಂತೆ ಆಗುವ ಯುವತಿ ಮತ್ತು ಆಕೆಯನ್ನು ಜೋಪಾನ ಮಾಡುವ ಯುವಕನ ಕಥೆ. ಕಮಲ್ ಹಾಸನ್ ಅವರ ಅದ್ಭುತ ಅಭಿನಯ ಮತ್ತು ಶ್ರೀದೇವಿಯ ಪಾತ್ರ ನಿಮ್ಮನ್ನು ಹಿಡಿದಿಡಲಿದೆ.

3. ಇಂಡಿಯನ್: ಇಂಡಿಯನ್ ಎಂಬುದು ಕಮಲ್ ಹಾಸನ್ ಅಭಿನಯದ ಎಸ್ ಶಂಕರ್ ನಿರ್ದೇಶಿಸಿದ ಆಕ್ಷನ್ ಚಿತ್ರವಾಗಿದೆ. ಸಮಾಜದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧದ ವಿರುದ್ಧ ಹೋರಾಡಲು ಹೊರಡುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಮೇಲೆ ಸಿನಿಮಾ ಕೇಂದ್ರೀಕರಿಸುತ್ತದೆ. ಚಿತ್ರದ ಮುಂದುವರಿದ ಭಾಗವು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

4. ಹೇ ರಾಮ್: ಕಮಲ್ ಹಾಸನ್ ಬರೆದು, ನಿರ್ದೇಶಿಸಿ, ನಿರ್ಮಿಸಿದ 2000 ರ ಸಿನಿಮಾ. ಇದು ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಭಾರತದ ವಿಭಜನೆ ಮತ್ತು ನಾಥುರಾಮ್ ಗೋಡ್ಸೆಯಿಂದ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಚಿತ್ರಿಸುವ ಪ್ರಯತ್ನ. ಈ ಚಿತ್ರವು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದೆ.

kamal-haasan-s-memorable-films

5. ಪುಷ್ಪಕ ವಿಮಾನ: ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಮೂಕಿ ಸಿನಿಮಾ ಷ್ಪಕ ವಿಮಾನ. ಚಿತ್ರದಲ್ಲಿ ಯಾವುದೇ ಸಂಭಾಷಣೆಯಿಲ್ಲ. ಕೇವಲ ನಟನೆ ಮತ್ತು ಹಿನ್ನೆಲೆ ಸಂಗೀತಗಳ ಮೂಲಕ ಭಾವನೆಗಳನ್ನು ತಿಳಿಸುತ್ತದೆ. ಸಿನಿಮಾವು ನಿರುದ್ಯೋಗಿ ಪದವೀಧರನ ಸುತ್ತ ಸುತ್ತುತ್ತದೆ.

6. ಏಕ್ ದುಜೆ ಕೆ ಲಿಯೆ: ಈ ಚಿತ್ರವು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಯುವಕ- ಯುವತಿಯ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಭರ್ಜರಿ ಯಶಸ್ಸು ಕಂಡ ಈ ಸಿನಿಮಾದ ಹಾಡುಗಳು ಇಂಡಿಗೂ ಸೂಪರ್ ಹಿಟ್ ಆಗಿವೆ.

7. ಚಾಚಿ 420: ಚಾಚಿ 420 ಕಮಲ್ ಹಾಸನ್ ನಿರ್ದೇಶನದ ಹಾಸ್ಯ ಚಿತ್ರ. ಇದು ಅಮೇರಿಕನ್ ಚಲನಚಿತ್ರ "ಮಿಸೆಸ್ ಡೌಟ್‌ಫೈರ್" ನ ರೀಮೇಕ್. ತನ್ನ ಮಗಳಿಗೆ ಹತ್ತಿರವಾಗಲು ದಾದಿಯಂತೆ ವೇಷ ಧರಿಸುವ ತಂದೆಯ ಕಥೆಯನ್ನು ತಿಳಿಸುತ್ತದೆ. ಕಮಲ್ ಹಾಸನ್ ಅವರ ದ್ವಿಪಾತ್ರಗಳಲ್ಲಿನ ಅಭಿನಯವು ವಿಮರ್ಶಕರ ಮೆಚ್ಚುಗೆ ಪಡೆದಿದೆ.

8. ಅನ್ಬೆ ಶಿವಂ: ಪ್ರೀತಿಯೇ ದೇವರು ಎಂದು ಹೇಳುವ ಅನ್ಬೆ ಶಿವಂ, ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವಂತಹದ್ದು. ಸುಂದರ್ ಸಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ಅವರೇ ಬರೆದಿದ್ದಾರೆ.

More from Filmibeat

English summary
Actor Kamal Haasan​'s memorable films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X