ಶಿವಣ್ಣ, ಮೋಹನ್‌ಲಾಲ್ ಬಳಿಕ ರಜನಿಕಾಂತ್ 'ಜೈಲರ್' ಟೀಮ್ ಸೇರಿದ ತಮನ್ನಾ
ಅಣ್ಣಾತ್ತೆ ಸಿನಿಮಾ ಬಳಿಕ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್ ನಟನೆಯ ಜೈಲರ್ ಚಿತ್ರ ನಿರೀಕ್ಷೆ ಮಟ್ಟವನ್ನು ತಲುಪುವಲ್ಲಿ ವಿಫಲವಾಗಿತ್ತು. ಇತ್ತ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಕೊನೆಯ ಚಿತ್ರ ಬೀಸ್ಟ್ ಕೂಡ ವಿಫಲವಾಗಿತ್ತು. ಹೀಗೆ ತಮ್ಮ ಕೊನೆಯ ಚಿತ್ರಗಳಲ್ಲಿ ಫ್ಲಾಪ್ ಫಲಿತಾಂಶವನ್ನು ಪಡೆದುಕೊಂಡಿರುವ ಈ ನಟ ಹಾಗೂ ನಿರ್ದೇಶಕರು ಒಂದಾಗಿರುವ ಜೈಲರ್ ಪ್ರಾಜೆಕ್ಟ್ ಮೇಲೆ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯೇ ಹುಟ್ಟುಕೊಂಡಿದೆ.
ಬೀಸ್ಟ್ ಚಿತ್ರಕ್ಕೂ ಮುನ್ನ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದ 'ಡಾಕ್ಟರ್' ಹಾಗೂ 'ಕೊಲಮಾವು ಕೋಕಿಲ' ಚಿತ್ರಗಳು ಜೈಲರ್ ಮೇಲೆ ನಿರೀಕ್ಷೆ ಹುಟ್ಟಲು ಕಾರಣವಾದ ಅಂಶಗಳಲ್ಲಿ ಒಂದಾಗಿವೆ. ಹೀಗೆ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನ ಚಿತ್ರ ಎಂಬ ಕಾರಣಕ್ಕೆ ನಿರೀಕ್ಷೆ ಹುಟ್ಟುಹಾಕಿರುವ ಜೈಲರ್ ಚಿತ್ರ ತನ್ನ ಸ್ಟಾರ್ ಕಾಸ್ಟ್ ಕಾರಣದಿಂದಾಗಿಯೂ ಸಹ ನಿರೀಕ್ಷೆಯನ್ನು ದುಪ್ಟಟ್ಟುಗೊಳಿಸುತ್ತಿದೆ.
ಹೌದು, ಜೈಲರ್ ಚಿತ್ರತಂಡಕ್ಕೆ ಮೊದಲು ಕನ್ನಡದ ಸೂಪರ್ ಸ್ಟಾರ್ ನಟ ಶಿವ ರಾಜ್‌ಕುಮಾರ್ ಸೇರ್ಪಡೆಗೊಂಡರು. ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಮಲಯಾಳಂನ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಸಹ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಚಿತ್ರೀಕರಣದ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿತ್ತು. ಹೀಗೆ ಮೊದಲಿಗೆ ಶಿವಣ್ಣ ನಂತರ ಮೋಹನ್ ಲಾಲ್ ರೀತಿಯ ದಿಗ್ಗಜ ನಟರು ಬ್ಯಾಕ್ ಟು ಬ್ಯಾಕ್ ಜೈಲರ್ ಚಿತ್ರತಂಡವನ್ನು ಸೇರಿದ್ದು, ಕುತೂಹಲ ಮೂಡಿಸಿ ನಿರೀಕ್ಷೆ ಹೆಚ್ಚಿಸಿತ್ತು.

ಇನ್ನು ಈ ಸಾಲಿಗೆ ಇದೀಗ ಸ್ಟಾರ್ ನಟಿಯೋರ್ವಳ ಸೇರ್ಪಡೆ ಸಹ ಆಗಿದ್ದು, ಚಿತ್ರತಂಡ ತಮನ್ನಾ ಭಾಟಿಯಾ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನು ಹಂಚಿಕೊಂಡಿದೆ. ಈ ವಿಷಯ ತಿಳಿದ ನೆಟ್ಟಿಗರು ಈ ರೀತಿಯ ಬೃಹತ್ ಸ್ಟಾರ್ ಕಾಸ್ಟ್ ಘೋಷಿಸುತ್ತಿರುವ ಜೈಲರ್ ಚಿತ್ರತಂಡ ಯಾವ ರೀತಿಯ ಕಥೆ ಹೊಂದಿರಬಹುದು ಎಂದು ಕುತೂಹಲವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ತಮನ್ನಾಗೂ ಮುನ್ನ ತೆಲುಗಿನ ಖ್ಯಾತ ನಟ ಸುನಿಲ್ ಸಹ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಚಿತ್ರತಂಡ ಹಂಚಿಕೊಂಡಿತ್ತು. ಒಟ್ಟಿನಲ್ಲಿ ಜೈಲರ್‌ನಲ್ಲಿ ಸ್ಟಾರ್ ನಟ ನಟಿಯರ ಗುಂಪೇ ಇದ್ದು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಬಾರಿ ದೊಡ್ಡದಾಗಿಯೇ ಸದ್ದು ಮಾಡುವುದು ಖಚಿತ ಎನ್ನಬಹುದು.


Click it and Unblock the Notifications











