"ಹುಡ್ಗಿ ಕೈ ಕೊಟ್ಲು, ಆತ್ಮಹತ್ಯೆಗೆ ಯತ್ನಿಸಿದ್ದೆ.. ನನ್ನ ಜೀವ ಉಳಿಸಿದ್ದು ಬೈಕ್ ಸವಾರ": ಅಬ್ಬಾಸ್
ತಮಿಳು ನಟ ಅಬ್ಬಾಸ್‌ಗೆ ಒಂದ್ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ನಟಿಸಿದ್ದು ಕೆಲವೇ ಸಿನಿಮಾಗಳು. ಆದರೆ ಆತನ ಲುಕ್ಸ್, ಸ್ಟೈಲ್‌ಗೆ ಒಂದ್ಕಾಲದಲ್ಲಿ ಯುವಕ, ಯುವತಿಯರು ಫಿದಾ ಆಗಿದ್ದರು. 1996ರಲ್ಲಿ ಬಂದ 'ಕಾದಲ್ ದೇಶಂ' ಸಿನಿಮಾದಿಂದ ರಾತ್ರೋರಾತ್ರಿ ಅಬ್ಬಾಸ್ ಸ್ಟಾರ್ ಆಗಿಬಿಟ್ಟಿದ್ದರು. ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರಾಗಿದ್ದ ನಟ ಇದೀಗ ಕಂಬ್ಯಾಕ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
90ರ ದಶಕದ ಕೊನೆಗೆ ಅಬ್ಬಾಸ್ ಕ್ರೇಜ್ ಹೇಗಿತ್ತು ಅಂದ್ರೆ ಆತನ ರೀತಿ ಹೇರ್ ಸ್ಟೈಲ್ ಟ್ರೈ ಮಾಡೋಕೆ ಪಡ್ಡೆ ಹುಡುಗರು ಆಸೆ ಪಡುತ್ತಿದ್ದಾರೆ. ಇನ್ನು ಹೆಣ್ಣಮಕ್ಕಳ ಪಾಲಿನ ಡ್ರೀಮ್ ಬಾಯ್ ಆಗಿದ್ದರು. ರಜನಿಕಾಂತ್, ಮೊಮ್ಮುಟ್ಟಿ, ಕಮಲ್ ಹಾಸನ್‌ರಂತಹ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಕನ್ನಡದಲ್ಲಿ 'ಶಾಂತಿ ಶಾಂತಿ ಶಾಂತಿ', 'ಹಲೋ', 'ಅಪ್ಪು ಅಂಡ್ ಪಪ್ಪು' ಹಾಗೂ 'ಸವಾರಿ- 2' ಸಿನಿಮಾಗಳಲ್ಲಿ ಅಬ್ಬಾಸ್ ಬಣ್ಣ ಹಚ್ಚಿದ್ದಾರೆ.

2015ರ ನಂತರ ಭಾರತ ಬಿಟ್ಟು ಮಡದಿ ಸಮೇತ ಅಬ್ಬಾಸ್ ನ್ಯೂಜಿಲೆಂಡ್‌ಗೆ ಹೋಗಿ ಸೆಟ್ಲ್ ಆಗಿದ್ದರು. ಅಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ತಮಗೆ ಇಷ್ಟ ಎನಿಸುವ ಕೆಲಸಗಳನ್ನು ಮಾಡಿದ್ದಾರೆ. ಅಲ್ಲಿಗೆ ಹೋದಾಗ ಏನು ಮಾಡಬೇಕು ಎಂದು ಗೊತ್ತಿಲ್ಲದೇ ಅದುವರೆಗೂ ಮಾಡದ ಸಾಧ್ಯವಾಗದ ಕೆಲಸಗಳನ್ನು ಮಾಡಿದ್ದರು. ಪೆಟ್ರೋಲ್ ಬಂಕ್‌ನಲ್ಲೂ 10 ದಿನಗಳ ಕಾಲ ಕೆಲಸ ಮಾಡಿದ್ದಾಗಿ ಇತ್ತೀಚೆಗೆ ಅಬ್ಬಾಸ್ ಹೇಳಿಕೊಂಡಿದ್ದರು. ಸಾಲದಕ್ಕೆ ಪೆಟ್ರೋಲ್ ಬಂಕ್‌ನಲ್ಲಿ ಬಾತ್ ರೂಮ್ ಕ್ಲೀನ್ ಮಾಡಿದ್ದಾಗಿಯೂ ಹೇಳಿಕೊಂಡಿದ್ದರು.

10ನೇ ಕ್ಲಾಸ್ ಫೇಲ್, ಹುಡ್ಗಿ ಕೈಕೊಟ್ಲು
ಸದ್ಯ ಭಾರತಕ್ಕೆ ವಾಪಸ್ ಆಗಿರುವ ಅಬ್ಬಾಸ್ ಗಲಾಟೆ ಪ್ಲಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ಧಾರೆ. ತಮ್ಮ ವೈಯಕ್ತಿಕ ಜೀವನದ ಸಾಕಷ್ಟು ಸಂಗತಿಗಳನ್ನು ಅಬ್ಬಾಸ್ ಈ ವೇಳೆ ಬಿಚ್ಚಿಟ್ಟಿದ್ದಾರೆ. ಟೀನೇಜ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "10ನೇ ತರಗತಿಯಲ್ಲಿ ಫೇಲ್ ಆಗಿದ್ದೆ. ನನ್ನ ಗರ್ಲ್‌ಫ್ರೆಂಡ್ ಕೈ ಕೊಟ್ಲು. ಆ ವಯಸ್ಸಿನಲ್ಲಿ ಏನು ಮಾಡೋದು ಗೊತ್ತಿಲ್ಲದೇ ಗೊಂದಲದಲ್ಲಿದ್ದೆ. ಜೀವನವೇ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ" ಎಂದು ಅಬ್ಬಾಸ್ ಹೇಳಿದ್ದಾರೆ.
"ನನ್ನ ಜೀವನದಲ್ಲಿ ಎಲ್ಲಾ ಮುಗೀತು, ನಾನು ನನ್ನ ಜೀವ ಕಳೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಸಾಯೋಣ ಎಂದು ಹೋದಾಗ ನನ್ನ ನನ್ನಲ್ಲಿ ಬದಲಾವಣೆ ತಂದಿದ್ದು ಒಂದು ಮೋಟಾರ್ ಸೈಕಲ್. ನಾನು ಹೈವೇಗೆ ಹೋಗಿ ದೊಡ್ಡ ಟ್ರಕ್‌ಗೆ ಸಿಕ್ಕಿ ಸಾಯಲು ನಿರ್ಧರಿಸಿದೆ. ಇನ್ನೇನು ನಾನು ಟ್ರಕ್‌ಗೆ ಅಡ್ಡ ಹೋಗಬೇಕು ಎಂದುಕೊಂಡಾಗ ಆ ಟ್ರಕ್ ಹಿಂದೆ ಒಂದು ಮೋಟಾರ್ ಸೈಕಲ್ ಬರೋದು ನೋಡಿದೆ. ಅರೇ ನಾನು ಟ್ರಕ್‌ಗೆ ಅಡ್ಡ ಹೋದರೆ, ಡ್ರೈವರ್ ಬ್ರೇಕ್ ಹಾಕಿದ್ರೆ, ಟ್ರಕ್ ಹಿಂದೆ ಬರುತ್ತಿರುವ ಮೋಟರ್ ಸೈಕಲ್ ಸವಾರ ಸಾಯುತ್ತಾನಲ್ಲ ಎಂದು ಅನಿಸಿತು. ಆ ಕ್ಷಣದಲ್ಲೇ ನಾನು ಆತ್ಮಹತ್ಯೆ ನಿರ್ಧಾರ ಕೈಬಿಟ್ಟೆ" ಎಂದಿದ್ದಾರೆ.
ಚಿತ್ರರಂಗಕ್ಕೆ ರೀ ಎಂಟ್ರಿ
ಸಿನಿಮಾ ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಅಬ್ಬಾಸ್ ಪತ್ನಿ ಸಮೇತರಾಗಿ ನ್ಯೂಜಿಲೆಂಡ್‌ಗೆ ಹೋಗಿದ್ದರು. ಅಲ್ಲೇ ಕೆಲಸ ಮಾಡಿಕೊಂಡು ಇದ್ದರು. ಇದೀಗ ಭಾರತಕ್ಕೆ ವಾಪಸ್ ಆಗಿದ್ದು ಮತ್ತೆ ಚಿತ್ರರಂಗಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳು ಯಾವಾಗಲೂ ಕೇಳುತ್ತಿರುತ್ತಾರೆ. ಹೇಗಿದ್ದೀರಾ ಸರ್, ಏನಾಯ್ತು ಸರ್, ಸಿನಿಮಾದಲ್ಲಿ ಯಾಕೆ ನಟಿಸ್ತಿಲ್ಲ ಸರ್, ನೀವು ಇನ್ನು ಬದುಕಿದ್ದೀರಾ ಅಂತೆಲ್ಲಾ ಕೇಳುತ್ತಾರೆ. ಅವಕಾಶ ಸಿಕ್ಕರೆ ನಟಿಸೋಕೆ ಸಿದ್ಧ ಎಂದಿದ್ದಾರೆ. ಇನ್ನು ಅಬ್ಬಾಸ್‌ಗೆ ಫಿಲ್ಮ್ ಮೇಕರ್ಸ್ ಯಾರಾದರೂ ಅವಕಾಶ ಕೊಡ್ತಾರಾ? ನೋಡ್ಬೇಕಿದೆ.
ಪ್ರಭಾಸ್ ಬೆಂಗಳೂರು ನಂಟು
ಕಾಲೇಜು ದಿನಗಳಲ್ಲೇ ಅಬ್ಬಾಸ್ ಮಾಡೆಲೆಂಗ್ ಆರಂಭಿಸಿದ್ದರು. ಬೆಂಗಳೂರಿನಲ್ಲಿ ನಡೆದ 'ಫೇಸ್ ಆಫ್ 94' ಸ್ಪರ್ಧೆಯಲ್ಲಿ ಗೆದ್ದಿದ್ದರು. ಅದೇ ಸಮಯದಲ್ಲಿ 'ಕಾದಲ್ ದೇಶಂ' ಚಿತ್ರಕ್ಕಾಗಿ ನಿರ್ದೇಶಕ ಕದಿರ್ ಹೊಸ ನಟನ ಹುಡುಕಾಟದಲ್ಲಿದ್ದರು. ಆಗ ಸ್ನೇಹಿತರು ಒತ್ತಾಯದ ಮೇರೆಗೆ ಅಬ್ಬಾಸ್ ಅಡಿಷನ್ ನೀಡಿದ್ದರು. ನಿರ್ದೇಶಕರು ಚಾರ್ಮಿಂಗ್ ಯುವಕನನ್ನು ನೋಡಿ ಚಿತ್ರದಲ್ಲಿ ನಟಿಸೋಕೆ ಅವಕಾಶ ನೀಡಿದ್ದರು. ಮುಂದೆ ಹಲವು ಸಿನಿಮಾಗಳಲ್ಲಿ ಅಬ್ಬಾಸ್ ನಟಿಸಿದರು.


Click it and Unblock the Notifications











