ದುಬೈನಲ್ಲಿ ಹೊಸ ಕಾರು ಖರೀದಿಸಿದ ಥಲಾ ಅಜಿತ್; ಬೆಲೆ ಕೇಳಿದ್ರೆ ಹೌಹಾರುತ್ತೀರಾ?

ತಮಿಳು ನಟ ಅಜಿತ್ ಕಳೆದೆರಡು ಸಿನಿಮಾಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಪ್ರಶಾಂತ್ ನೀಲ್ ಜೊತೆ 2 ಸಿನಿಮಾದಲ್ಲಿ ಥಲಾ ನಟಿಸುತ್ತಾರೆ ಎನ್ನುವ ಚರ್ಚೆ ಅದಕ್ಕೆ ಕಾರಣ. ಸದ್ಯ ಅಜಿತ್ 'ವಿಡಾ ಮುಯರ್ಚಿ' ಹಾಗೂ 'ಗುಡ್‌ ಬ್ಯಾಡ್ ಅಗ್ಲಿ' ಎನ್ನುವ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ನಟ ಅಜಿತ್‌ಗೆ ಸಿನಿಮಾ ಬಿಟ್ರೆ ಬೈಕ್, ಕಾರ್ ಕ್ರೇಜ್ ಜಾಸ್ತಿ. ಇದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಇನ್ನು ಸಿನಿಮಾಗಳಲ್ಲಿ ಬೈಕ್, ಕಾರ್‌ ಸ್ಟಂಟ್‌ಗಳನ್ನು ಯಾವುದೇ ಡ್ಯೂಪ್ ಇಲ್ಲದೇ ಅವರು ಮಾಡುತ್ತಾರೆ. ಇತ್ತೀಚೆಗೆ 'ವಿಡಾ ಮುಯರ್ಚಿ' ಸಿನಿಮಾ ಸ್ಟಂಟ್ ಮೇಕಿಂಗ್ ವೀಡಿಯೋಗಳು ಸಖತ್ ವೈರಲ್ ಆಗಿತ್ತು. ಇನ್ನು ಚಿತ್ರೀಕರಣದ ವೇಳೆ ಅವಘಡ ಸಂಭವಿಸಿ ಅವರಿಗೆ ಪೆಟ್ಟಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಏನು ಆಗಿರಲಿಲ್ಲ.

Tamil actor Ajith buys a swanky new car for a whopping price

ಈಗಾಗಲೇ ನಟ ಅಜಿತ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳು, ಬೈಕ್‌ಗಳು ಇವೆ. ಆ ಸಾಲಿಗೆ ಇದೀಗ ಮತ್ತೊಂದು ಹೊಸ ಕಾರ್ ಸೇರ್ಪಡೆ ಆಗಿದೆ. ಕೆಂಪು ಬಣ್ಣದ ಫೆರಾರಿ ಕಾರನ್ನು ಇತ್ತೀಚೆಗೆ ಥಲಾ ಖರೀದಿಸಿದ್ದಾರೆ. ಅದರೊಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಅಂದಹಾಗೆ ಈ ಕೆಂಪು ಬಣ್ಣದ ಕಾರ್ ಬೆಲೆ ಬರೋಬ್ಬರಿ 9 ಕೋಟಿ ರೂ. ಎನ್ನಲಾಗ್ತಿದೆ.

ಫೆರಾರಿ SF90 ಕಾರ್ ಅನ್ನು ಅಜಿತ್ ಕೊಂಡುಕೊಂಡಿದ್ದು ಕಾರ್ ಶೋ ರೂಮ್‌ನಲ್ಲಿ ಅವರು ಕಾಣಿಸಿಕೊಂಡಿರುವ ವೀಡಿಯೋ ಸಹ ವೈರಲ್ ಆಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸದ ಕಾರ್ ಕಣ್ಣು ಕುಕ್ಕುವಂತಿದೆ. 'ವಿಡಾಮುಯರ್ಚಿ' ಸಿನಿಮಾ ಚಿತ್ರೀಕರಣಕ್ಕಾಗಿ ಅಜೆರ್ಬೈಜಾನ್‌ಗೆ ಹೋಗಿರುವ ಅಜಿತ್ ದುಬೈನಲ್ಲಿ ಈ ಕಾರು ಖರೀದಿಸಿದ್ದಾರೆ ಎನ್ನಲಾಗ್ತಿದೆ.

ಮರ್ಸಿಡೀಸ್ ಬೆನ್ಜ್, ಲ್ಯಾಂಡ್ ರೋವರ್, ಬಿಎಂಡಬ್ಯೂ 740 Li ಕಾರುಗಳು ಸೇರಿದಂತೆ MBW K1300, ಅಪ್ರಿಲೈ ಕಾಪ್‌ನಾರ್ಡ್ 1200, ಬಿಎಂಡಬ್ಯೂ S1000RR ಮಾಡೆಲ್ ಬೈಕ್‌ಗಳು ಈಗಾಗಲೇ ಅಜಿತ್ ಮನೆಯಲ್ಲಿವೆ. ಪ್ರೈವೇಜ್ ಜೆಟ್ ಕೂಡ ಅಜಿತ್ ಹೊಂದಿದ್ದಾರೆ ಎನ್ನಲಾಗ್ತಿದ್ದು ಪೈಲೆಟ್ ಲೈಸೆನ್ಸ್ ಕೂಡ ಇದೆ. ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಬಳಿಕ ಅಜಿತ್ ತಮಿಳುನಾಡಿನಲ್ಲಿ ಹೆಚ್ಚು ಕ್ರೇಜ್ ಸಂಪಾದಿಸಿರುವ ನಟ ಎನಿಸಿಕೊಂಡಿದ್ದಾರೆ.

Tamil actor Ajith buys a swanky new car for a whopping price

ನಟ ಅಜಿತ್ ತಾವಾಯ್ತು ತಮ್ಮ ಸಿನಿಮಾ ಆಯ್ತು ಎಂದು ಇರುತ್ತಾರೆ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ತಮ್ಮ ಸಿನಿಮಾ ಪ್ರಚಾರಕ್ಕೂ ಬರುವುದಿಲ್ಲ. ಯಾವುದೇ ಸುದ್ದಿಗೋಷ್ಠಿ ಇಲ್ಲದೇ ಥಲಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತದೆ. ಕಳೆದ ವರ್ಷ 'ಥುನಿವು' ಚಿತ್ರದಲ್ಲಿ ಕೊನೆಯದಾಗಿ ಅಜಿತ್ ನಟಿಸಿದ್ದರು.

ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಅಜಿತ್ ಭೇಟಿ ಸಿನಿಮಾ ಕಥೆ ಹೇಳಿದ್ದಾರೆ ಎಂದು ಗುಲ್ಲಾಗಿದೆ. ಥಲಾ ಕಾಂಬಿನೇಷನ್‌ನಲ್ಲಿ ಒಂದಲ್ಲ 2 ಸಿನಿಮಾ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. 'ಗುಡ್‌ ಬ್ಯಾಡ್ ಅಗ್ಲಿ' ಬಳಿಕ ನೀಲ್ ನಿರ್ದೇಶನದಲ್ಲಿ ಅಜಿತ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಚಿತ್ರದಲ್ಲಿ 'KGF-3' ಲಿಂಕ್ ಮಾಡಿ ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಹೊಂಬಾಳೆ ಸಂಸ್ಥೆ ಪ್ರಶಾಂತ್ ನೀಲ್ ಹಾಗೂ ಅಜಿತ್ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹೂಡುತ್ತದೆ. ಬ್ಯಾಕ್ ಟು ಬ್ಯಾಕ್ 2 ಸಿನಿಮಾಗಳಿಗೆ ನೀಲ್- ಅಜಿತ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

More from Filmibeat

English summary
Thala ajith buys red Ferrari Car, See pics;
Read more about: ajith kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X