ಏರ್‌ಪೋರ್ಟ್‌ನಲ್ಲಿ 11 ತಿಂಗಳ ಮಗು ಜೊತೆ ಕಷ್ಟಪಡುತ್ತಿದ್ದ ಮಹಿಳೆ ಬ್ಯಾಗ್ ಹೊತ್ತು ನಟ ಅಜಿತ್ ಸಹಾಯ

ತಮಿಳು ನಟ ಅಜಿತ್ ಮತ್ತೆ ತಮ್ಮ ಸರಳತೆಯಿಂದ ಸುದ್ದಿಯಲ್ಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಬ್ಯಾಗ್ ಹೊತ್ತು ಸಹಾಯ ಮಾಡಿದ್ದಾರೆ. ಈ ವಿಚಾರ ಕಾಲಿವುಡ್‌ನಲ್ಲಿ ಈಗ ಸಖತ್ ಸದ್ದು ಮಾಡ್ತಿದೆ. ಕೆಲ ದಿನಗಳ ಹಿಂದೆ ಲಡಾಕ್‌ನಲ್ಲಿ ಕೆಟ್ಟು ನಿಂತ ಕನ್ನಡಿಗರೊಬ್ಬರ ಬೈಕ್ ಕೆಟ್ಟು ನಿಂತಾಗ ಖುದ್ದು ಅಜಿತ್ ಸಹಾಯ ಮಾಡಿದ್ದರು. ಅದನ್ನು ಆ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದೀಗ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ನಟ ಅಜಿತ್ ಲಂಡನ್ ವಿಮಾನ ನಿಲ್ದಾಣದಲ್ಲಿ ಸಹಾಯ ಮಾಡಿದ್ದನ್ನು ವಿವರಿಸಿದ್ದಾರೆ. ತಮಿಳುನಾಡಿನಲ್ಲಿ ನಟ ಅಜಿತ್ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಅವರ ಹೆಸರು ಕೇಳಿದರೂ, ಅವರ ಸಿನಿಮಾ ಬಿಡುಗಡೆ ಆದರೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಬಂದ 'ತುನಿವು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ನಂತರ ಕೊಂಚ ಬಿಡುವು ಮಾಡಿಕೊಂಡು ಅಜಿತ್ ದೇಶ ವಿದೇಶ ಸುತ್ತಾಡುತ್ತಿದ್ದಾರೆ.

Tamil Actor Ajith helped a woman during flight travel, Her Husband Post goes Viral

ಇತ್ತೀಚೆಗೆ ನಟ ಅಜಿತ್ ತಂದೆಯವರನ್ನು ಕಳೆದುಕೊಂಡಿದ್ದರು. ತಮಿಳು ಚಿತ್ರರಂಗದ ಗಣ್ಯರು ಇದಕ್ಕೆ ಸಂತಾಪ ಸೂಚಿಸಿದ್ದರು. ಇನ್ನು ನಿಜ ಜೀವನದಲ್ಲಿ ಅಭಿಮಾನಿಗಳ ಪ್ರೀತಿಯ ಥಲಾ ಸಿಕ್ಕಾಪಟ್ಟೆ ಸಿಂಪಲ್. ಸಾಮಾನ್ಯರಂತೆ ಜನರಲ್ಲಿ ಬೆರತು ಬಿಡುತ್ತಾರೆ. ಕಷ್ಟ ಎಂದವರಿಗೆ ಸಹಾಯ ಮಾಡುತ್ತಾರೆ. ಈಗ ಅಜಿತ್ ಮಾಡಿರುವ ಕೆಲಸ ಅಭಿಮಾನಿಗಳ ಮನಗೆದ್ದಿದೆ. ತಮ್ಮ ಪತ್ನಿಗೆ ನಟ ಅಜಿತ್ ಮಾಡಿದ ಸಹಾಯದ ಬಗ್ಗೆ ಕಾರ್ತಿಕ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ. ಆ ಪೋಸ್ಟ್ ಈಗ ಸಖಯ್ ವೈರಲ್ ಆಗಿದೆ.

"ನಮ್ಮ 10 ತಿಂಗಳ ಮಗುವಿನ ಜೊತೆ ಗ್ಲೋಸ್ಲೋದಿಂದ ನನ್ನ ಪತ್ನಿ ಒಬ್ಬೊಂಟಿಯಾಗಿ ಚೆನ್ನೈಗೆ ಹೊರಟಿದ್ದರು. ಲಂಡನ್ ವಿಮಾನ ನಿಲ್ದಾಣದಲ್ಲಿ ನಟ ಅಜಿತ್ ಕಾಣಿಸಿಕೊಂಡಿದ್ದಾರೆ. ಕೂಡಲೇ ನನ್ನ ಪತ್ನಿ ಸರ್ ಒಂದು ಸೆಲ್ಫೀ ಎಂದು ಕೇಳಿದ್ದಾಳೆ. ಕೂಡಲೇ ಆಕೆಯ ಜೊತೆ ಅಜಿತ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನ ಮಡದಿಯ ಬಳಿ ಇದ್ದ ಬೇಬಿ ಬ್ಯಾಗ್‌‌ ಅನ್ನು ವಿಮಾನ ನಿಲ್ದಾಣದವತೆಗೂ ಹೊತ್ತು ತಂದಿದ್ದಾರೆ. ಪರವಾಗಿಲ್ಲ, ಸರ್ ನಾನೇ ತೆಗೆದುಕೊಳ್ಳುತ್ತೇನೆ ಎಂದು ನನ್ನ ಪತ್ನಿ ಹೇಳಿದ್ದಾಳೆ."

Tamil Actor Ajith helped a woman during flight travel, Her Husband Post goes Viral

"ನನ್ನ ಪತ್ನಿ ಮಾತಿಗೆ ಪರವಾಗಿಲ್ಲ, ನನಗೂ ಇಬ್ಬರು ಮಕ್ಕಳಿದ್ದಾರೆ. ನನಗೆ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ ಎಂದು ಲಗೇಜ್ ಹೊತ್ತು ತಂದು ಕೊಟ್ಟಿದ್ದಾರೆ. ನಂತರ ಷಟಲ್ ಬಸ್‌ನಲ್ಲಿ ಇಲ್ಲ ಪರವಾಗಿಲ್ಲ ಸರ್, ನನಗೆ ಕೊಡಿ ಎಂದು ನನ್ನ ಪತ್ನಿ ಕೇಳಿದರು ಅವರು ಒಪ್ಪದೇ ನಾನೇ ತೆಗೆದುಕೊಂಡು ಬರ್ತೀನಿ ಎಂದಿದ್ದಾರೆ. ಅಜಿತ್ ಜೊತೆಗಿದ್ದ ವ್ಯಕ್ತಿ 'ತಲೈವಾ ನೀವ್ಯಾಕೆ ಇದೆಲ್ಲಾ ತಗೆದುಕೊಳ್ಳುತ್ತೀರಾ, ಅವರ ಬ್ಯಾಗ್ ನನಗೆ ಕೊಡಿ ಎಂದಿದ್ದಾರೆ. ಅದಕ್ಕೆ ಪರವಾಗಿಲ್ಲ ಎಂದು ಆತನ ಕೈಗೂ ಕೊಡದೇ ತಂದಿದ್ದಾರೆ"

"ಅಜಿತ್ ಅವರ ವ್ಯಕ್ತಿತ್ವ ನನ್ನನ್ನು ಕದಲಿಸಿದೆ ಎಂದು ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ" ಈ ಫೋಟೊಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಈ ವಿಚಾರ ಕೇಳಿ ಅಜಿತ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಎಷ್ಟೇ ಬೆಳೆದರು ಅವರ ಸರಳತೆ ಮೆಚ್ಚಲೇಬೇಕು ಎಂದು ಕೊಂಡಾಡುತ್ತಿದ್ದಾರೆ.

ಸದ್ಯ ತುನಿವು ನಂತರ ಅಜಿತ್ ತಮ್ಮ 62ನೇ ಸಿನಿಮಾದತ್ತ ಮುಖ ಮಾಡಿದ್ದಾರೆ. ನಯನತಾರ ಪತಿ ವಿಘ್ನೇಶ್ ಶಿವನ್ ಹೇಳಿದ ಕಥೆಯನ್ನು ರಿಜೆಕ್ಟ್ ಮಾಡಿದ್ದು ಹೊಸ ಕಥೆಯ ಹುಡುಕಾಟದಲ್ಲಿ ಇದ್ದಾರೆ. ಶೀಘ್ರದಲ್ಲೇ ಹೊಸ ಅಜಿತ್ ಹೊಸ ಸಿನಿಮಾ ಶುರುವಾಗಲಿದೆ.

More from Filmibeat

English summary
Tamil Actor Ajith helped a woman during flight travel, Her Husband Post goes Viral. He Says Ajith was super human to carry our baby bag from there until the flight. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X