ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ಅಜಿತ್ ಪತ್ನಿ ಶಾಲಿನಿ; ಅಷ್ಟಕ್ಕೂ ಏನಾಯ್ತು?

ಕಾಲಿವುಡ್‌ನಲ್ಲಿ ನಟ ಅಜಿತ್‌ಗೆ ಭಾರೀ ಕ್ರೇಜ್ ಇದೆ. ರಜನಿಕಾಂತ್, ದಳಪತಿ ವಿಜಯ್ ಬಳಿಕ ಆ ಮಟ್ಟಿಗಿನ ಕ್ರೇಜ್ ಇರುವ ನಟ ಅಜಿತ್. ಬರೀ ಸಿನಿಮಾ ಮಾತ್ರವಲ್ಲ, ಬೈಕ್, ಕಾರ್‌ ಕ್ರೇಜ್ ಅವರಿಗಿದೆ. ಮಾತು ಕಮ್ಮಿ ತನ್ನ ಸಿನಿಮಾಗಳು ಸದ್ದು ಮಾಡಬೇಕು ಎನ್ನುವ ಜಾಯಮಾನದವರು.

ಕಳೆದ ವರ್ಷ 'ಥುನಿವು' ಸಿನಿಮಾ ಮೂಲಕ ಥಲಾ ಅಜಿತ್ ಪ್ರೇಕ್ಷಕರ ಮುಂದೆ ಬಂದಿದ್ದರು. ಬಳಿಕ 'ವಿಡಾಮುಯರ್ಚಿ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಬೈಕ್ ಏರಿ ವಿಶ್ವಪರ್ಯಟನೆ ಮಾಡಿ ಮಾಡಿ ಬಂದಿದ್ದಾರೆ. ತಮ್ಮ ತಂಡದ ಜೊತೆ ದೇಶದ ಉದ್ದಗಲ ಬೈಕ್ ಏರಿ ಸುತ್ತಾಡಿದ್ದ ಅಜಿತ್ ಬಳಿಕ ನೇಪಾಳ, ಭೂತಾನ್ ದೇಶಗಳಲ್ಲಿ ಕೂಡ ಸವಾರಿ ಮಾಡಿ ಬಂದಿದ್ದರು.

Tamil actor Ajith wife shalini reacts to her fake twitter account urges fans to not follow

'ವಿಡಾಮುಯರ್ಚಿ' ಸಿನಿಮಾ ಚಿತ್ರೀಕರಣದ ಬಳಿಕ ಮತ್ತೊಮ್ಮೆ ಬೈಕ್ ಏರಿ ಪ್ರಪಂಚ ಸುತ್ತುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಇತ್ತೀಚೆಗೆ ರಜನಿಕಾಂತ್ ನಟನೆಯ 'ವಿಶ್ವಂಭರ' ಸಿನಿಮಾ ಸೆಟ್‌ಗೆ ಅವರು ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಸುಮ್ಮನಿರುವ ಅಜಿತ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಮ್ಮಿ. ಇನ್ನು ಅಜಿತ್ ಪತ್ನಿ ಶಾಲಿನಿ ಕೂಡ ಸಿನಿರಸಿಕರಿಗೆ ಚಿರಪರಿಚಿತ.

ಶಾಲಿನಿ ಮತ್ತಾರೂ ಅಲ್ಲ, ಬಾಲ ನಟಿಯಾಗಿ ಮೋಡಿ ಮಾಡಿದ ಬೇಬಿ ಶಾಮಿಲಿ ಸಹೋದರಿ. ಶಾಲಿನಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ ಶಾಲಿನಿ ಬಳಿಕ ನಾಯಕಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದರು. 23 ವರ್ಷಗಳ ಹಿಂದೆ ನಟ ಅಜಿತ್ ಜೊತೆ ಪ್ರೀತಿಸಿ ಮದುವೆ ಆಗಿ ಆಗಿದ್ದ ಆಕೆ ಬಳಿಕ ಸಿನಿಮಾಗಳಲ್ಲಿ ಹೆಚ್ಚು ನಟಿಸಲಿಲ್ಲ. ಶಾಲಿನಿ ಸಹ ಸಾರ್ವಜನಿಕವಾಗಿ ಕಾರ್ಯಕ್ರಮಗಳಲ್ಲಿ ಅಷ್ಟಾಗು ಕಾಣಿಸಿಕೊಳ್ಳುವುದಿಲ್ಲ.

ಶಾಲಿನಿ ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ನಲ್ಲಿ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ಎಂದು ಹೇಳಿ ಒಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ ಏನು ಅಂದ್ರೆ ಆಕೆಯ ಹೆಸರಿನಲ್ಲಿರುವ ಫೇಕ್ ಟ್ವಿಟರ್ ಅಕೌಂಟ್. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳ ಭರಾಟೆ ಹೆಚ್ಚಾಗಿದೆ. ಸ್ಟಾರ್ ನಟರ ಹೆಸರಿನಲ್ಲೇ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್ ಮಾಡುವ ಕಿಡಿಗೇಡಿಗಳು ಇದ್ದಾರೆ. ಶಾಲಿನಿಗೂ ಅದು ಅನುಭವವಾಗಿದೆ.

ತಮ್ಮ ಹೆಸರಿನಲ್ಲಿರುವ ಫೇಕ್ ಟ್ವಿಟರ್ ಅಕೌಂಟ್ ಸ್ಕ್ರೀನ್‌ಶಾಟ್ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಹಾಯ್ ಎಲ್ಲರಿಗೂ.. ಎಚ್ಚರಿಕೆ. ಇದು ನನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಅಲ್ಲ.. ಯಾವುದೇ ಕಾರಣಕ್ಕೂ ಇದನ್ನು ನಂಬಬೇಡಿ, ಫಾಲೋ ಮಾಡಬೇಡಿ" ಎಂದು ಬರೆದುಕೊಂಡಿದ್ದಾರೆ. ಅಚ್ಚರಿ ಎಂದರೆ ಆ ಫೇಕ್ ಅಕೌಂಟ್‌ ಅನ್ನು 80 ಸಾವಿರಕ್ಕೂ ಅಧಿಕ ಜನ ಫಾಲೋ ಮಾಡುತ್ತಿದ್ದಾರೆ.

ಇನ್ನು 'ವಿಡಾಮುಯರ್ಚಿ' ಬಳಿಕ ಅಜಿತ್ 'ಗುಡ್ ಬ್ಯಾಡ್ ಅಗ್ಲಿ' ಎನ್ನುವ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಆ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ವೈರಲ್ ಆಗಿತ್ತು. 1999ರಲ್ಲಿ 'ಅಮರ್ಕಲಂ' ಎನ್ನುವ ಚಿತ್ರದಲ್ಲಿ ಅಜಿತ್- ಶಾಲಿನಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಮುಂದೆ ಪ್ರೀತಿಸಿ ಇಬ್ಬರೂ ಒಟ್ಟಿಗೆ ಜೀವನ ಸಾಗಿಸಲು ನಿರ್ಧರಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

More from Filmibeat

English summary
Tamil actress Shalini warns fans to not follow fake twitter account in her name
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X