ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು, ವದಂತಿ ನಂಬಬೇಡಿ ಡಿಎಂಡಿಕೆ ಮನವಿ

ತಮಿಳು ನಟ-ರಾಜಕಾರಣಿ ವಿಜಯಕಾಂತ್ ಅವರು ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

Recommended Video

ತಮಿಳು ನಟ ,Vijayakanth ವಿಜಯಕಾಂತ್ ಆಸ್ಪತ್ರೆಗೆ ದಾಖಲು | Filmibeat Kannada

ಉಸಿರಾಟದಲ್ಲಿ ತೊಂದರೆ ಉಂಟಾದ ಕಾರಣ ಬುಧವಾರ ಮುಂಜಾನೆ 3 ಗಂಟೆಗೆ ವಿಜಯಕಾಂತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

''ರೆಗ್ಯುಲರ್ ಪರೀಕ್ಷೆ ಹಿನ್ನೆಲೆ ವಿಜಯಕಾಂತ್ ಅವರು ಆಸ್ಪತ್ರೆಗೆ ಸೇರಿದ್ದಾರೆ. ಪ್ರಸ್ತುತ, ಅವರ ಆರೋಗ್ಯ ಉತ್ತಮವಾಗಿದೆ. ಎರಡು ದಿನದಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ'' ಎಂದು ಡಿಎಂಡಿಕೆ ಪಕ್ಷದ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ತಮ್ಮ ಪಕ್ಷದ ಕಾರ್ಯಕರ್ತ ಹಾಗೂ ಅಭಿಮಾನಿಗಳು ಯಾರೂ ವದಂತಿಗಳನ್ನು ನಂಬಬೇಡಿ ಎಂದು ವಿನಂತಿಸಿಕೊಂಡಿದೆ.

Tamil Actor and Politician Vijayakanth Hospitalized

ಕಳೆದ ಸೆಪ್ಟೆಂಬರ್ (2020) ನಲ್ಲಿ ವಿಜಯಕಾಂತ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ, ಆಸ್ಪತ್ರೆಗೆ ದಾಖಲಾಗಿ ಚೇತರಿಕೆ ಕಂಡಿದ್ದರು.

ವಿಜಯಕಾಂತ್ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅವರು ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ, ಆಸ್ಪತ್ರೆ ಕಡೆಯಿಂದ ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ತಮಿಳು ಇಂಡಸ್ಟ್ರಿಯ ಬಹಳ ಪ್ರಭಾವಿ ನಟರಲ್ಲಿ ವಿಜಯಕಾಂತ್ ಸಹ ಒಬ್ಬರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ, ರಾಜಕೀಯಕ್ಕೆ ಪ್ರವೇಶವಾಗಿ ಡಿಎಂಡಿಕೆ ಪಕ್ಷ ಮುನ್ನಡೆಸುತ್ತಿದ್ದರು. ಇತ್ತೀಚಿಗಷ್ಟೆ ನಡೆದಿದ್ದ ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರದಲ್ಲೂ ತೊಡಗಿಕೊಂಡಿದ್ದರು.

More from Filmibeat

English summary
Tamil Actor and Politician Vijayakanth admitted to hospital in Chennai due to breathlessness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X