For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್', 'ಬಿಗಿಲ್' ಚಿತ್ರಗಳಲ್ಲಿ ನಟಿಸಿದ್ದ ಅರುಣ್ ಅಲೆಕ್ಸಾಂಡರ್ ನಿಧನ

  |

  ತಮಿಳಿನ ಪೋಷಕ ನಟ ಹಾಗೂ ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ನಿನ್ನೆ (ಡಿಸೆಂಬರ್ 28, 2020) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 48 ವರ್ಷದ ಅರುಣ್ ಅಲೆಕ್ಸಾಂಡರ್ ತಮಿಳಿನ ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದರು ಹಾಗೂ ಮಾಡುತ್ತಿದ್ದರು.

  ನಟ ವಿಜಯ್ ನಟಿಸಿದ್ದ 'ಬಿಗಿಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಡಬ್ಬಿಂಗ್ ಕಲೆಗೆ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದ ಅರುಣ್ ಅಲೆಕ್ಸಾಂಡರ್ ಕೋಲಮಾವು ಕೋಕಿಲಾ, ಖೈದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

  ಕನ್ನಡ ಮೂಲದ ಬಾಲಿವುಡ್‌ ಛಾಯಾಗ್ರಾಹಕ ಈಶ್ವರ ಬಿದರಿ ನಿಧನಕನ್ನಡ ಮೂಲದ ಬಾಲಿವುಡ್‌ ಛಾಯಾಗ್ರಾಹಕ ಈಶ್ವರ ಬಿದರಿ ನಿಧನ

  ಇನ್ನು ಬಿಡುಗಡೆಯಾಗದ ವಿಜಯ್ ನಟಿಸಿರುವ 'ಮಾಸ್ಟರ್' ಚಿತ್ರದಲ್ಲೂ ಅರುಣ್ ಅಲೆಕ್ಸಾಂಡರ್ ನಟಿಸಿದ್ದರು. ಅರುಣ್ ಅವರ ಅಕಾಲಿಕ ನಿಧನಕ್ಕೆ ಮಾಸ್ಟರ್ ನಿರ್ದೇಶಕ ಲೋಕೇಶ್ ಕನಕರಾಜ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

  ''ನೀವು ಇಷ್ಟು ಬೇಗ ಬಿಟ್ಟು ಹೋಗುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ... ನನ್ನ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ... ನಿಮ್ಮಂತ ವ್ಯಕ್ತಿ ಮತ್ತೆ ನನಗೆ ಸಿಗಲ್ಲ. ನೀವು ಯಾವಾಗಲೂ ನನ್ನ ಹೃದಯದಲ್ಲಿ ಇರ್ತೀರಿ'' ಎಂದು ಭಾವುಕರಾಗಿದ್ದಾರೆ.

  ಅರುಣ್ ಅಲೆಕ್ಸಾಂಡರ್ ನಿಧನಕ್ಕೆ ನಟ ಸಂದೀಪ್ ಕಿಶನ್ ಸಂತಾಪ ಸೂಚಿಸಿದ್ದು ''ಎಂತಹ ಅದ್ಭುತ ಪ್ರತಿಭೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸಹೋದರ. ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

  ಅರುಣ್ ಅಲೆಕ್ಸಾಂಡರ್ ನಟನೆಯ ಮಾಸ್ಟರ್ ಸಿನಿಮಾ ಜನವರಿ 13 ರಂದು ಅಧಿಕೃತವಾಗಿ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ.

  English summary
  Tamil actor-dubbing artist Arun Alexander breathed his last after suffering a heart attack in Chennai on Monday (December 28). He was 48.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion