Don't Miss!
- Automobiles
ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕ್
- News
'ಹರ್ ಘರ್ ತಿರಂಗಾ': ಬಿಜೆಪಿ ನಾಯಕರ ಮನೆ ಮೇಲೆ ಧ್ವಜ
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Technology
ಈ ಫೋನ್ಗಳಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಇದೆ!..ಫೋನ್ ಬೆಲೆಯೂ ಕಡಿಮೆ!
- Sports
ರಿಷಭ್ ಪಂತ್ ಪೋಸ್ಟ್ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ
- Finance
ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್ಗೆ ಎಚ್ಡಿಎಫ್ಸಿ ಅವಕಾಶ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ತಮಿಳು ನಟ ಆರ್ಯಗೆ ಪುನೀತ್ ಪ್ರಶಸ್ತಿ: ಅಪ್ಪು ಪತ್ನಿ ಅಶ್ವಿನಿ ಮುಂದೆ ಹೇಳಿದ್ದೇನು?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಎಂಟು ತಿಂಗಳು. ಅಪ್ಪು ಅಭಿಮಾನಿಗಳಿಂದ ದೈಹಿಕವಾಗಿ ದೂರ ಆಗಿರಬಹುದು. ಆದರೆ, ಅವರ ಸಿನಿಮಾಗಳು. ಅವರು ಮಾಡಿದ ಸಾಮಾಜಿಕ ಕೆಲಸದಿಂದ ಅವರ ಮನದಲ್ಲಿಯೇ ಉಳಿದಿದ್ದಾರೆ.
ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಅವರ ಕನಸನ್ನು ಈಡೇರಿಸುತ್ತಿದ್ದಾರೆ. ಇತ್ತೀಚೆಗೆ ತಮಿಳಿನ ಖಾಸಗಿ ಮಾಧ್ಯಮವೊಂದು ತಮಿಳು ನಟರಿಗೆ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೋಗಿದ್ದರು.
'ರಾಜಕುಮಾರ'ನ
ನಿವಾಸ
ತೊರೆದ
ಗನ್ಮ್ಯಾನ್
ಚಲಪತಿ:
ಈಗ
ಏನು
ಮಾಡುತ್ತಿದ್ದಾರೆ?
ಈ ವೇಳೆ ತಮಿಳು ನಟ ಆರ್ಯಗೆ ಡಾ. ಪುನೀತ್ರಾಜ್ಕುಮಾರ್ ಅವಾರ್ಡ್ ಅನ್ನು ನೀಡಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಕೈಯ್ಯಾರೆ ಈ ಪ್ರಶಸ್ತಿಯನ್ನು ತಮಿಳು ನಟ ಆರ್ಯನಿಗೆ ಗೌರವಿಸಿದ್ದರು. ಈ ವೇಳೆ ಆರ್ಯ ವೇದಿಕೆ ಮೇಲೆ ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಅಶ್ವಿನಿಯವರ ಕುರಿತಾಗಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಪುನೀತ್ ಪ್ರಶಸ್ತಿ ಪಡೆದ ಆರ್ಯ
ತಮಿಳಿನ ಖಾಸಗಿ ಮಾಧ್ಯಮ ತಮಿಳು ನಟರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಡಾ. ಪುನೀತ್ ರಾಜ್ಕುಮಾರ್ ಪ್ರಶಸ್ತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡದ ಸೂಪರ್ಸ್ಟಾರ್ ಅಪ್ಪು ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿದ್ದು ಕನ್ನಡಿಗರಿಗೆ ಖುಷಿಯನ್ನು ಇಮ್ಮಡಿಗೊಳಿಸಿದೆ. ತಮಿಳು ನಟ ಆರ್ಯಗೆ ಡಾ.ಪುನೀತ್ ರಾಜ್ಕುಮಾರ್ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದಲೇ ಕೊಡಿಸಲಾಗಿದೆ. ಈ ವೇಳೆ ಆರ್ಯ ಪವರ್ಸ್ಟಾರ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
Exclusive:
ಉಮಾಪತಿ
ಕೈಯಲ್ಲಿ
ಶಿವಣ್ಣನ
ಟೈಟಲ್:
'ದೊರೆ'
ಆಗಬೇಕಿತ್ತು
ಪುನೀತ್!
|
ಅಪ್ಪು ಬಗ್ಗೆ ತಮಿಳು ನಟ ಆರ್ಯ ಹೇಳಿದ್ದೇನು?
"ಅಪ್ಪು ಸರ್ ಅವರದ್ದು ಪದಗಳಿಗೂ ಮೀರಿದ ವ್ಯಕ್ತಿತ್ವ. ಈ ಅವಾರ್ಡ್ ಬಂದಿರುವುದು ಖುಷಿ ಕೊಟ್ಟಿದೆ. ಅಪ್ಪು ಸರ್ ಬಗ್ಗೆ ಹೇಳಬೇಕು ಅಂದರೆ, ನಾನು ಅಪ್ಪು ಅವರ 5 ಪರ್ಸೆಂಟ್ನಷ್ಟೂ ಇಲ್ಲ. ಅವರ ಡ್ಯಾನ್ಸ್, ಫೈಟ್, ಆಕ್ಟಿಂಗ್, ಜಿಮ್ನಾಸ್ಟಿಕ್, ಇಡೀ ಇಂಡಸ್ಟ್ರಿ ಬಳಿ ಇರುವ ಎನರ್ಜಿ ಅವರ ಬಳಿ ಇತ್ತು. ಈ ಅವಾರ್ಡ್ ಇಡೀ ಇಂಡಸ್ಟ್ರಿಗೆ ಸೇರಬೇಕು. ಅಶ್ವಿನಿ ಮೇಡಂ ಅವಾರ್ಡ್ ಕೊಟ್ಟಿದ್ದಕ್ಕೆ ಧನ್ಯವಾದಗಳು." ಎಂದು ಆರ್ಯ ಹೇಳಿದ್ದಾರೆ.

ಆರ್ಯ ಅಪ್ಪು ಪತ್ನಿ ಬಗ್ಗೆ ಹೇಳಿದ ಮಾತು ಏನು?
ತಮಿಳು ನಟ ಆರ್ಯಾ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ವೇದಿಕೆ ಮೇಲೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದಲೇ ಪ್ರಶಸ್ತಿ ಸ್ವೀಕರಿಸಿ, ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. " ಮೊದಲಿಗೆ ನಾನು ಅಶ್ವಿನಿ ಮೇಡಂಗೆ ಥ್ಯಾಂಕ್ಸ್ ಹೇಳುತ್ತೇನೆ. ನನಗೆ ತಿಳಿದ ಹಾಗೆ ಆಶ್ವಿನಿ ಮೇಡಂ ಅವರ ತುಂಬಾ ಸ್ಟ್ರಾಂಗ್ ಹಾಗೂ ಧೈರ್ಯ ಇರುವ ಮಹಿಳೆ." ಎಂದಿದ್ದಾರೆ ಆರ್ಯ.
ತೆಲುಗು
ನಟ
ನಾಗ
ಚೈತನ್ಯಗೆ
ಪುನೀತ್
ರಾಜ್ಕುಮಾರ್
ಅವರೇ
ಸ್ಪೂರ್ತಿಯಂತೆ!

ಆರ್ಯ ಪತ್ನಿ ಅಪ್ಪು ಜೊತೆ ನಟನೆ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ಆರ್ಯ ಪತ್ನಿ ಆಯೇಶಾ ಅಭಿನಯಿಸಿದ್ದರು. ಅಲ್ಲಿಂದ ಆರ್ಯ ಹಾಗೂ ಪುನೀತ್ ಕುಟುಂಬ ಆತ್ಮೀಯರಾಗಿದ್ದರು. ಅವಾರ್ಡ್ ಕಾರ್ಯಕ್ರಮದ ವೇಳೆ ಆಶ್ವಿನಿಗೆ ಆಯೇಶಾ ಸಾಥ್ ನೀಡಿದ್ದರು.