ಉಸಿರಾಟದ ಸಮಸ್ಯೆಯಿಂದ ತಮಿಳು ನಟ ಜೂನಿಯರ್ ಬಾಲಯ್ಯ (70) ನಿಧನ
ತಮಿಳಿ ಚಿತ್ರರಂಗದಲ್ಲಿ ಜೂನಿಯರ್ ಬಾಲಯ್ಯ ಎಂದೇ ಖ್ಯಾತರಾಗಿದ್ದ ಹೆಸರಾಂತ ನಟ ರಘು ಬಾಲಯ್ಯ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 70 ವರ್ಷದ ನಟ ಗುರುವಾರ ಬೆಳಗ್ಗೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನಡೆಯಲಿದೆ.
ಜ್ಯೂನಿಯರ್ ಬಾಲಯ್ಯ ಕರಕಾಟಕ್ಕರಣ, ಗೋಪುರ ವಾಸಲೀಲೆ, ಸುಂದರಕಾಂಡಂ ಸೇರಿದಂತೆ ನೂರಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. 2010 ರ ದಶಕದಲ್ಲಿ, ಬಾಲಯ್ಯ ತಮಿಳು ಚಲನಚಿತ್ರಗಳಲ್ಲಿ ಅಪರೂಪವಾಗಿ ಕಾಣಿಸಿಕೊಂಡರು. ಸಾಟ್ಟೈ (2012) ಸಿನಿಮಾದಲ್ಲಿನ ಮುಖ್ಯೋಪಾಧ್ಯಾಯನ ಪಾತ್ರಕ್ಕಾಗಿ ಹೆಚ್ಚು ಮೆಚ್ಚುಗೆ ಗಳಿಸಿದ್ದರು.

ಜೂನಿಯರ್ ಬಾಲಯ್ಯ ಯಾರು?
ಜೂನಿಯರ್ ಬಾಲಯ್ಯನವರ ಹುಟ್ಟು ಹೆಸರು ರಘು ಬಾಲಯ್ಯ. ಅವರು ತಮಿಳು ಚಿತ್ರರಂಗದ ಪ್ರಮುಖ ನಟ ಟಿ. ಎಸ್ ಬಾಲಯ್ಯ ಅವರ ಪುತ್ರ. ಇದೇ ಕಾರಣಕ್ಕೆ ಅವರನ್ನು ಜೂನಿಯರ್ ಬಾಲಯ್ಯ ಎಂದು ಕರೆಯಲಾಗುತ್ತಿತ್ತು. ಜೂನ್ 28, 1953 ರಂದು ಜನಿಸಿದ ಜೂನಿಯರ್ ಬಾಲಯ್ಯ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಕೆಲವು ನಾಟಕಗಳಲ್ಲಿ ನಟಿಸಿದ್ದಾರೆ.
ರಂಗಭೂಮಿ ಬಳಿಕ ಹಿರಿತೆರೆ ಕಡೆ ಮುಖ ಮಾಡಿದ ಅವರು ಶಿವಕುಮಾರ್ ಅಭಿನಯದ ಮೇಲ್ನಟ್ಟು ಮರುಮಾಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿವಿಧ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದರು. 'ತ್ಯಾಗ' ಸಿನಿಮಾದಲ್ಲಿ ಶಿವಾಜಿಗಣೇಶನ್ ಜೊತೆಗೆ ಮತ್ತು ಕಮಲ್ ಹಾಸನ್ ಅವರ ಸ್ನೇಹಿತರಲ್ಲಿ ಒಬ್ಬರಾಗಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.
ಜೂನಿಯರ್ ಬಾಲಯ್ಯ ಅವರು ಗಂಗೈ ಅಮರನ್ ನಿರ್ದೇಶನದ ಕರಕಟ್ಟಕಾರನ್ ಎಂಬ ಹಿಟ್ ಚಿತ್ರದಲ್ಲಿ ನಟಿಸಿದ್ದಾರೆ. ಅಮ್ಮ ವಂದಾಚು ಮತ್ತು ರಾಸುಕುಟ್ಟಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದರು. ಬಹಳ ಸಮಯದ ನಂತರ 2012ರಲ್ಲಿ ಬಂದ ಸಾಟ್ಟೈನಲ್ಲಿನ ಪಾತ್ರಕ್ಕಾಗಿ ಅವರು ಭಾರಿ ಮೆಚ್ಚುಗೆ ಗಳಿಸಿದರು. ಥನಿ ಒರುವನ್, ಪುಲಿ, ನೇರ್ ಕೊಂಡ ಪರ್ವಿ ಮುಂತಾದ ಸಿನಿಮಾಗಳಲ್ಲೂ ಕಾಣಿಸಿಕೊಂಡರು.
ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಜೂನಿಯರ್ ಬಾಲಯ್ಯ ಅಭಿನಯಿಸಿದ್ದಾರೆ. ಚಿತಿ, ವಜ್ಕೈ ಮತ್ತು ಚಿನ್ನ ಪಾಪ ಪೆರಿಯಾ ಪಾಪಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. 2019 ರಲ್ಲಿ, ಅವರು ಅಜಿತ್ ಕುಮಾರ್ ಅವರ ಪಿಂಕ್ ಸಿನಿಮಾದ ತಮಿಳು ರಿಮೇಕ್ ನೇರ್ಕೊಂಡ ಪಾರ್ವೈ ಚಿತ್ರದಲ್ಲಿ ಕಾಣಿಸಿಕೊಂಡರು. ಜೂನಿಯರ್ ಬಾಲಯ್ಯ ಅವರ ಕೊನೆಯ ಚಿತ್ರ 2021 ರಲ್ಲಿ ಬಿಡುಗಡೆಯಾದ ಯೆನ್ನಂಗ ಸರ್ ಉಂಗಾ ಸತ್ತಂ.


Click it and Unblock the Notifications











