For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗನಿಗೆ ನಾಮಕರಣ ಮಾಡಿದ ನಟ ಕಾರ್ತಿ ದಂಪತಿ

  |

  ತಮಿಳಿನ ಖ್ಯಾತ ನಟ ಕಾರ್ತಿ ಇತ್ತೀಚಿಗಷ್ಟೆ 2ನೇ ಮಗುವಿನ ತಂದೆಯಾದ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಕಾರ್ತಿ ಪತ್ನಿ ರಂಜನಿ ಇತ್ತೀಚಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಹೊಸ ಸದಸ್ಯನನ್ನು ಬರಮಾಡಿಕೊಂಡ ಕಾರ್ತಿ ದಂಪತಿಗೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸಿದ್ದರು.

  ಮಗುವಿನ ಹೆಸರೇನು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಇದೀಗ ಕಾರ್ತಿ ಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಮಗನಿಗೆ ನಾಮಕರಣ ಮಾಡಿದ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಂದಹಾಗೆ ಮುದ್ದಾದ ಮಗನಿಗೆ 'ಕಂದನ್' ಎಂದು ನಾಮಕರಣ ಮಾಡಿದ್ದಾರೆ.

  ಕಲಾವಿದ ಕರಣ್ ಆಚಾರ್ಯ ಕಲ್ಪನೆಯಲ್ಲಿ ಶಿವನಾದ ಕಾಲಿವುಡ್ ಸ್ಟಾರ್ ನಟ ಕಾರ್ತಿಕಲಾವಿದ ಕರಣ್ ಆಚಾರ್ಯ ಕಲ್ಪನೆಯಲ್ಲಿ ಶಿವನಾದ ಕಾಲಿವುಡ್ ಸ್ಟಾರ್ ನಟ ಕಾರ್ತಿ

  ಈ ಬಗ್ಗೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ಕಾರ್ತಿ, 'ಅಮ್ಮ, ಸಹೋದರಿ ಮತ್ತು ನಾನು ನಿನಗೆ ಪ್ರೀತಿಯಿಂದ ಕಂದನ್ ಎಂದು ಹೆಸರಿಟ್ಟಿದ್ದೇವೆ. ನಿನ್ನ ಆಗಮನ ನಮ್ಮ ಕುಟುಂಬದಲ್ಲಿ ಮತ್ತಷ್ಟು ಸಂತೋಷ ತುಂಬಿರಲಿ. ನಿನ್ನ ಪ್ರೀತಿಯ ಅಪ್ಪ' ಎಂದು ಬರೆದುಕೊಂಡಿದ್ದಾರೆ.

  ಅಂದಹಾಗೆ ಕಂದನ್ ಎಂದರೆ ತಮಿಳಿನ ಪ್ರಸಿದ್ಧ ಮುರುಗನ್ ದೇವರ ಹೆಸರು. ಈ ದೇವರಿಗೆ ಕಾರ್ತಿಕೇಯನ್ ಎಂದು ಸಹ ಕರೆಯುತ್ತಾರೆ. ಇದೇ ಹೆಸರನ್ನು ನಟ ಕಾರ್ತಿಗೂ ಇಡಲಾಗಿದೆ. ಇದೀಗ ಅದೇ ದೇವರ ಹೆಸರನ್ನು ತನ್ನ ಪುತ್ರನಿಗೂ ಇಟ್ಟಿರುವುದು ವಿಶೇಷ.

  ನಟ ಕಾರ್ತಿ 2011ರಲ್ಲಿ ರಂಜನಿ ಜೊತೆ ಹಸೆಮಣೆ ಏರಿದ್ದಾರೆ. ಈ ಸುಂದರ ದಂಪತಿಗೆ 7 ವರ್ಷದ ಮುದ್ದಾದ ಹೆಣ್ಣು ಮಗಳಿದ್ದಾಳೆ. 2013ರಲ್ಲಿ ರಂಜನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ಉಮಾಯಾಲ್ ಎಂದು ನಾಮಕರಣ ಮಾಡಿದ್ದಾರೆ. ಉಮಾಯಾಲ್ ಗೆ ಮುದ್ದಾದ ಸಹೋದರನಿಗೆ ಕಂದನ್ ಎಂದು ನಾಮಕರಣ ಮಾಡಿದ್ದಾರೆ.

  ತೆಲುಗಿನಲ್ಲಿ ಹಾರುತ್ತಿದೆ ಕನ್ನಡ ನಿರ್ದೇಶಕನ ಕೀರ್ತಿ ಪತಾಕೆ | Filmibeat Kannada

  ನಟ ಕಾರ್ತಿ ಕೊನೆಯದಾಗಿ ತಂಬಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇನ್ನು ಬಹುನಿರೀಕ್ಷೆಯ ಸುಲ್ತಾನ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದ ಚಿತ್ರೀಕರಣ ನಿರತರಾಗಿದ್ದಾರೆ.

  English summary
  Tamil Actor Karthi reveals his new born son name, He names his son Kandan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X