"ನನಗೆ ನಾಚಿಕೆ ಇಲ್ಲ"; ಮಾಜಿ ಪತ್ನಿ ಸುಚಿತ್ರಾ ಆರೋಪಕ್ಕೆ ನಟ ಕಾರ್ತಿಕ್ ಪ್ರತಿಕ್ರಿಯೆ
ತಮಿಳು ಗಾಯಕಿ ಸುಚಿತ್ರಾ ಇತ್ತೀಚೆಗೆ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಹಾಗೂ ನಟ ಧನುಷ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. "ನನ್ನ ಪತಿ ಗೇ, ಅವನು ನಟ ಧನುಷ್ ಒಂದೇ ರೂಮ್‌ನಲ್ಲಿ ಏನು ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ" ಎಂದಿದ್ದರು. ಇನ್ನು ಧನುಷ್- ಐಶ್ವರ್ಯ ಡಿವೋರ್ಸ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದರು.
ಏಳೆಂಟು ವರ್ಷಗಳ ಹಿಂದೆ ಸುಚೀ ಲೀಕ್ಸ್ ಹೆಸರಿನಲ್ಲಿ ಗಾಯಕಿ ಸುಚಿತ್ರಾ ಹೆಸರು ಭಾರೀ ಸದ್ದು ಮಾಡಿತ್ತು. ಬಳಿಕ ಆಕೆ ಸೈಲೆಂಟ್ ಆಗಿದ್ದರು. ತಮಿಳು ಬಿಗ್‌ಬಾಸ್ ಶೋಗೂ ಹೋಗಿ ಬಂದಿದ್ದರು. ಇತ್ತೀಚೆಗೆ ತಮ್ಮ ವಿರುದ್ಧ ತಮಿಳು ನಟ, ಸಿನಿಮಾ ಪತ್ರಕರ್ತ ಬೈಲ್ವಾನ್ ರಂಗನಾಥ್ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ್ದರು. ಈ ಸಂಬಂಧ ನೀಡಿದ ಸಂದರ್ಶನನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು.

ನಟ ಧನುಷ್, ನನ್ನ ಮಾಜಿ ಪತಿ ಕಾರ್ತಿಕ್ ಕುಮಾರ್, ಆಂಡ್ರಿಯಾ ಮತ್ತು ರಾಮು ಹೀಗೆ ಒಂದಷ್ಟು ಜನರ ಗ್ರೂಪ್ ಇದೆ. ಅವರು ಆಗಾಗ್ಗೆ ಸೇರುತ್ತಾರೆ. ಏನೇನೊ ಚರ್ಚಿಸುತ್ತಾರೆ. ಅಶ್ಲೀಲ ಮೆಸೇಜ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಫಾರ್ವರ್ಡ್ ಮಾಡಿಕೊಳ್ಳುತ್ತಾರೆ. ಇನ್ನು ಏನೇನೋ ಮಾಡುತ್ತಾರೆ. ನನ್ನ ಪತಿ ಗೇ ಎಂದು ವೈದ್ಯರು ಕೂಡ ಹೇಳಿದ್ದರು ಅಂತ ಆರೋಪಿಸಿದ್ದರು.
ನನ್ನ ಪತಿ ಆಗ ಪುರುಷ ಸ್ನೇಹಿತರ ಜೊತೆ ಹೆಚ್ಚು ಬೆರೆಯುತ್ತಿದ್ದರು. ಆಗಾಗ್ಗೆ ಎಲ್ಲೆಲ್ಲೋ ಹೋಗುತ್ತಿದ್ದರು. ಪಾರ್ಟಿಗಳನ್ನು ಮಾಡುತ್ತಿದ್ದರು. ಮುಂಬೈನಲ್ಲಿ ಒಮ್ಮೆ ಮೂರ್ನಾಲ್ಕು ಜನ ಸೇರಿ ರೂಮ್ ಬುಕ್ ಮಾಡಿ ಇದ್ದರು. ಅಲ್ಲಿ ಅವರು ಏನು ಮಾಡುತ್ತಾರೆ ಎನ್ನುವುದು ಗೊತ್ತರಲಿಲ್ಲ. ಆದರೆ ಒಮ್ಮೆ ಐಪ್ಯಾಡ್‌ಗಳಲ್ಲಿ ಫೋಟೊಗಳನ್ನು ನೋಡಿ ನನಗೆ ಶಾಕ್ ಆಯಿತು. ಬಳಿಕ ಪತಿ ಕಾರ್ತಿಕ್ ಜೊತೆ ಪದೇ ಪದೆ ಜಗಳ ಆಗುತ್ತಿತ್ತು. ಕೊನೆಗೆ ಡಿವೋರ್ಸ್ ಪಡೆದ ಎಂದಿದ್ದರು.
ಸದ್ಯ ತಮ್ಮ ವಿರುದ್ಧ ಮಾಜಿ ಪತ್ನಿ ಮಾಡಿರುವ ಆರೋಪಗಳಿಗೆ ತಮಿಳು ನಟ ಕಾರ್ತಿಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. "ಒಂದು ವೇಳೆ ನಾನು ಸಲಿಂಗಕಾಮಿ ಆಗಿದ್ದರೆ ಅದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಅದು ಏನೇ ಆಗಿದ್ದರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಮ್ಮ ಸಿಟಿಯಲ್ಲಿ ಜಬರ್ದಸ್ತ್ ಆಗಿ ರ್ಯಾಲಿ ಮಾಡುತ್ತಿದ್ದೆ. ಎಲ್ಲಾ ತರಹದವರು ಅದರಲ್ಲಿ ಭಾಗವಹಿಸುತ್ತಿದ್ದರು. ಬೆಂಬಲವಾಗಿ ನಿಲ್ಲುತ್ತಿದ್ದರು. ಯಾವುದಕ್ಕೂ ಭಯಪಡಬೇಡಿ. ಗರ್ವದಿಂದ ಬದುಕಿ" ಎಂದಿದ್ದಾರೆ.
ಸ್ಟ್ಯಾಂಡಪ್ ಕಾಮೆಡಿಯನ್, ನಟ ಕಾರ್ತಿಕ್ ಕುಮಾರ್ ಸೆಲ್ಫಿ ವಿಡಿಯೋ ಮಾಡಿ ಮಾತನಾಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಕಾರ್ತಿಕ್ ಎರಡನೇ ಪತ್ನಿ ಅಮೃತಾ ಶ್ರೀನಿವಾಸನ್ ಸಹ ಹಂಚಿಕೊಂಡಿದ್ದಾರೆ. ಆಕೆ ವಿರುದ್ಧ ಕೂಡ ಸುಚಿತ್ರಾ ಕೆಂಡಾಮಂಡಲವಾಗಿ ಮಾತನಾಡಿದ್ದರು.
ಸುಚೀ ಲೀಕ್ಸ್ ಬಗ್ಗೆಯೂ ಗಾಯಕಿ ಸುಚಿತ್ರಾ ಖಂಡಿಸಿದ್ದರು. ಅದು ನಾನು ಮಾಡಿಲ್ಲ. ನನ್ನ ಟ್ವಿಟ್ಟರ್ ಅಕೌಂಟ್ ಬಳಸಿ ತನ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ಹಾಗೂ ಆತನ ಸ್ನೇಹಿತರು ಮಾಡಿದ್ದು. ನನಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದರು ಎಂದು ಹೇಳಿದ್ದಾರೆ. ಸುಚೀ ಲೀಕ್ಸ್ ರಾದ್ಧಾಂತದ ಬಳಿಕ ಆಕೆ ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲಿಲ್ಲ.
ಧನುಷ್ ಹಾಹೂ ಐಶ್ವರ್ಯ ಡಿವೋರ್ಸ್ ಬಗ್ಗೆಯೂ ಸುಚಿತ್ರಾ ಪ್ರತಿಕ್ರಿಯಿಸಿದ್ದರು. ಇಬ್ಬರೂ ಬೇರೆ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಐಶ್ವರ್ಯ ತಮ್ಮ ಮಕ್ಕಳಿಗೆ ಒಳ್ಳೆ ತಾಯಿ ಅಲ್ಲ. ಆದರೆ ಧನುಷ್ ಒಳ್ಳೆ ತಂದೆ. ಬೇರೆ ವಿಚಾರಗಳಲ್ಲಿ ಆತನದ್ದು ತಪ್ಪು ಇರಬಹುದು. ಆದರೆ ಮಕ್ಕಳ ವಿಚಾರದಲ್ಲಿ ಬಹಳ ಒಳ್ಳೆಯವನು ಎಂದು ಸುಚಿತ್ರಾ ಹೇಳಿದ್ದರು.


Click it and Unblock the Notifications











