ದಲಿತರ ನಿಂದನೆ ಮಾಡಿ ಜೈಲು ಸೇರಿರುವ ನಟಿ ಮೀರಾ ಮಿಥುನ್‌ಗೆ ಮತ್ತೊಂದು ಶಾಕ್

By ಫ್ಲಿಲ್ಮೀಬೀಟ್ ಡೆಸ್ಕ್

ದಲಿತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಜೈಲು ಸೇರಿರುವ ನಟಿ ಮೀರ್ ಮಿಥುನ್‌ಗೆ ಮತ್ತೊಂದು ಶಾಕ್ ಇದುರಾಗಿದೆ. ವಿವಾದಾತ್ಮಕ ಹೇಳಿಕೆ ಸಂಬಂಧ ಚೆನ್ನೈ ಪೊಲೀಸರು ಮೀರ್ ಮಿಥುನ್ ಅವರನ್ನು ಕೇರಳದಲ್ಲಿ ಬಂಧಿಸಿದ್ದರು. ಇದೀಗ ಮೀರಾ ಮಿಥುನ್ ಯೂಟ್ಯೂಬ್ ಚಾನೆಲ್ ಅನ್ನು ಬಂದ್ ಮಾಡುವಂತೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ಸೂಚನೆ ನೀಡಿದ್ದಾರೆ.

ಹಿಂಸೆಗೆ ಪ್ರೇರೇಪಣೆ ನೀಡುವ ಆರೋಪದಡಿ ಪೊಲೀಸರು ಮೀರಾ ಮಿಥುನ್ ಯೂಟ್ಯೂಬ್ ಅನ್ನು ಬಂದ್ ಮಾಡಿಸಿದ್ದಾರೆ. ವಿವಾದಾತ್ಮಕ ನಟಿ ಎಂದೇ ಖ್ಯಾತಿಗಳಿಸಿರುವ ಮೀರಾ ಮಿಥುನ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ನಾಲಿಗೆ ಹರಿಬಿಡುತ್ತಿದ್ದರು. ಇದೀಗ ಬಂಧನದ ಬೆನ್ನಲ್ಲೇ ಯೂ ಟ್ಯೂಬ್ ಚಾನೆಲ್ ಕೂಡ ಸಸ್ಪೆಂಡ್ ಆಗಿರುವುದು ಮೀರಾಗೆ ದೊಡ್ಡ ಶಾಕ್ ಆಗಿದೆ.

ಇತ್ತೀಚಿಗಷ್ಟೆ ಮೀರಾ ಮೀರಾ ದಲಿತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ದೊಡ್ಡ ವಿವಾದ ಮೈ ಮೇಲೆ ಎಳೆದುಕೊಂಡಿದ್ದರು. ವಿವಾದ ದೊಡ್ಡದಾಗುತ್ತಿದ್ದಂತೆ ಚೆನ್ನೈ ಪೊಲೀಸರ ಬಂಧಿಸಿದ್ದರು. ನಟಿ ಮೀರಾ ಮಿಥುನ್ ಬಂಧನದ ಬೆನ್ನಲ್ಲೇ ಬಾಯ್ ಫ್ರೆಂಡ್‌ನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದರು. ಮೀರಾ ವಿರುದ್ಧ ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ದೂರು ನೀಡಿದ್ದರು. ದೂರಿನ ಮೇರೆಗೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

Tamil Actor Meera Mithun youtube channel suspended

ಮೀರಾ ಜಾತಿ ನಿಂದನೆ ಹೇಳಿಕೆಗೆ ಬಾಯ್ ಫ್ರೆಂಡ್ ಸ್ಯಾಮ್ ಕುಮ್ಮಕ್ಕು ಕೂಡ ಇದೆ ಎನ್ನುವ ಆರೋಪದ ಮೇರೆಗೆ ಬಂಧಿಸಲಾಗಿದೆ. ಇನ್ನು ಮೀರಾ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಕೇರಳದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಗಸ್ಟ್ 14ರಂದು ಬಂಧಿಸಿದರು. ಪೊಲೀಸರು ಅರೆಸ್ಟ್ ಮಾಡಲು ಹೋದ ಸಂದರ್ಭದಲ್ಲಿ ಮೀರಾ ಮಿಥುನ್ ಹೈಡ್ರಾಮಾವೇ ಮಾಡಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಮೀರಾ ಮಿಥುನ್ ಬಂಧಿಸಲೆಂದು ಉಳಿದುಕೊಂಡಿದ್ದ ಕೋಣೆಗೆ ನುಗ್ಗಿದ ಪೊಲೀಸರಿಗೆ ಧಮ್ಕಿ ಜೋರಾಗಿ ಧಮ್ಕಿ ಹಾಕಿದ್ದರು. ಚೆನ್ನೈ ಪೊಲೀಸರು ದೌರ್ಜನ್ಯ ಮಾಡಿದರು, ಮೂರು ಜನ ಅಧಿಕಾರಿಗಳು ಬಂದಿದ್ದಾರೆ, ನನಗೆ ಕಿರುಕುಳ ಕೊಡ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡ್ತಿದ್ದಾರೆ. ಪೊಲೀಸರು ನನಗೆ ಹಲ್ಲೆ ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ನನ್ನನ್ನು ಅರೆಸ್ಟ್ ಮಾಡಲು ನಿಮಗೆ ಏನು ಅಧಿಕಾರ ಇದೆ, ಏಕೆ ನನ್ನನ್ನು ಬಂಧಿಸಲು ಬಂದಿದ್ದೀರಾ ಎಂದು ಪೊಲೀಸರ ವಿರುದ್ಧ ಕೂಗಾಡಿರುವ ವಿಡಿಯೋ ರೆಕಾರ್ಡ್ ಆಗಿದೆ.

ದಲಿತರ ಬಗ್ಗೆ ಮೀರಾ ಹೇಳಿದ್ದೇನು?

ಟಾಕ್ ಶೋ ಒಂದರಲ್ಲಿ ಮಾತನಾಡುವಾಗ ಪರಿಶಿಷ್ಟ ಜಾತಿ ಜನರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಲೇ ಮಾತನಾಡಿ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದರು. "ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿದ್ದರು.

"ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದು ಸಂದರ್ಶನದಲ್ಲಿ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನೇಕರು ಇದನ್ನು ಶೇರ್ ಮಾಡಿ ಮೀರಾಗೆ ಸರಿಯಾಗಿ ತೆಗೆದುಕೊಂಡಿದ್ದರು.

More from Filmibeat

English summary
Tamil Actor Meera Mithun youtube channel suspended. Central Crime Branch Police has given a letter youtube's administration to suspend Meera Mithun youtube channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X