For Quick Alerts
  ALLOW NOTIFICATIONS  
  For Daily Alerts

  ಕೋವಿಡ್‌: ತಮಿಳು ಚಿತ್ರರಂಗದ ನಟ, ಗಾಯಕ ಸಾವು

  |

  ಕೊರೊನಾ ವೈರಸ್ ಕಾರಣದಿಂದಾಗಿ ಮೃತವಾಗುತ್ತಿರುವ ಸಿನಿಮಾ ಸೆಲೆಬ್ರಿಟಿಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಒಂದೇ ದಿನ ತಮಿಳು ಚಿತ್ರರಂಗದ ಇಬ್ಬರು ಹಿರಿಯ ಕಲಾವಿದರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

  ತಮಿಳು ಚಿತ್ರರಂಗದ ಹಿರಿಯ ನಟ ಪಾಂಡು ಅವರು ನಿನ್ನೆ ಮೃತರಾಗಿದ್ದಾರೆ. ಅದೇ ದಿನ ಖ್ಯಾತ ಗಾಯಕ ಕೋಮಗನ್ ಅವರೂ ಸಹ ಕೊರೊನಾ ಕಾರಣದಿಂದಾಗಿಯೇ ಅಸುನೀಗಿದ್ದಾರೆ.

  ನಟ ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು ಅವರ ಪತ್ನಿಗೂ ಸಹ ಕೊರೊನಾ ಆಗಿದ್ದು ಅವರೂ ಸಹ ಗಂಭೀರ ಸ್ಥಿತಿಯಲ್ಲಿದ್ದಾರೆ.

  1970 ರಲ್ಲಿ ನಟನೆ ಆರಂಭಿಸಿದ ಪಾಂಡು ಅವರು ಇತ್ತೀಚೆಗೆ ಕಾಂಚನ 2, ತೇರಿ, ಪಂಜುಮಿಟ್ಟಾಯಿ, ಇಂದ ನಿಲಯ್ ಮಾರು ಸಿನಿಮಾಗಳಲ್ಲಿ ನಟಿಸಿದ್ದರು. ಪಾಂಡು ಅವರ ಸಹೋದರ ಇಡಿಚಪ್ಪುಲಿ ಸೆಲ್ವರಾಜ್ ಸಹ ತಮಿಳಿನ ಖ್ಯಾತ ನಟರು.

  ಇನ್ನು ಗಾಯಕ ಕೋಮಗನ್ ಅವರು ಚೆನ್ನೈನ ಆಯನವರ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾದಿಂದ ಅವರ ಶ್ವಾಸಕೋಶದ ಶೇ 70% ಭಾಗ ಹಾನಿಗೊಳಗಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

  ಗಾಯಕ ಕೋಮಗನ್ ಅವರು ದೃಷ್ಟಿಹೀನರಾಗಿದ್ದು ತಮಿಳಿನ 'ಆಟೋಗ್ರಾಫ್' ಸಿನಿಮಾದ 'ಒವ್ವೊರು ಪುಕಲಮಯ್' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೋಮುಗನಿನ್ ರಾಗಪ್ರಿಯ ಎಂಬ ಅಂಧರ ತಂಡ ಕಟ್ಟಿಕೊಂಡು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ರಚಿಸಿಕೊಟ್ಟವರು ಕೋಮುಗವನ್ ಅವರೇ ಎಂಬುದು ವಿಶೇಷ. ಅಂಗವಿಕಲ ಕ್ಷೇಮಾಬಿವೃದ್ಧಿ ಇಲಾಖೆಯಲ್ಲಿಯೂ ಕೋಮಗನ್ ಕೆಲಸ ಮಾಡಿದ್ದರು.

  ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

  ಇಬ್ಬರು ಕಲಾವಿದರ ನಿಧನಕ್ಕೆ ತಮಿಳಿನ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

  English summary
  Tamil actor Pandu and singer Komagan died of COVID 19. Pandu admitted in private hospital in Chennai and Komagan was admitted in government hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X