ಒಂದು ಸಿನ್ಮಾ ಸಕ್ಸಸ್‌ಗೆ ತಮನ್ನಾ ಮುಖ್ಯ ಕಾರಣ, ಕಥೆ- ಸ್ಕ್ರಿಪ್ಟ್ ಎಲ್ಲಾ ನಂತರ..
ಯಾವುದೇ ಸಿನಿಮಾ ಗೆಲ್ಲಬೇಕು ಅಂದ್ರೆ ಕಥೆ, ಚಿತ್ರಕಥೆ ಬಹಳ ಮುಖ್ಯವಾಗುತ್ತದೆ. ಕೇವಲ ಸ್ಟಾರ್ ನಟರು ನಟಿಸಿದ್ರೆ, ಭಾರೀ ಬಂಡವಾಳ ಹಾಕಿದರೆ ಸಿನಿಮಾ ಗೆಲ್ಲಲ್ಲ. ಚಿತ್ರದ ಪ್ರತಿ ವಿಭಾಗದ ಕೆಲಸವೂ ಮುಖ್ಯವಾಗುತ್ತದೆ. ಸಿನಿಮಾ ಸಕ್ಸಸ್ ಫಾರ್ಮುಲಾ ಅನ್ನೋದು ಇಲ್ಲ. ಅದು ಗೊತ್ತಿದ್ದರೆ ಯಾವುದೇ ಸಿನಿಮಾ ಸೋಲುತ್ತಿರಲಿಲ್ಲ.
ಬರಬರುತ್ತಾ ಒಂದು ಸಿನಿಮಾ ಗೆಲುವಿಗೆ ತಮನ್ನಾ ಡ್ಯಾನ್ಸ್ ಕಾರಣ ಎನ್ನುವಂತಾಗಿಬಿಟ್ಟಿದೆ ಎಂದು ತಮಿಳು ನಟ ಪಾರ್ತಿಬನ್ ಹೇಳಿದ್ದಾರೆ. ಇದೇ ವಿಚಾರ ಇದೀಗ ಕಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಪಾರ್ತಿಬನ್ ಹೀಗೆ ಹೇಳಿದ್ಯಾಕೆ? ಹಾಗಿದ್ದರೆ ಗುಣಮಟ್ಟದ ಸಿನಿಮಾಗಳು ಬರುತ್ತಿಲ್ಲದೇ ಎಂದು ಕೆಲವರು ಕೇಳುತ್ತಿದ್ದಾರೆ.

ಪಾರ್ತಿಬನ್ ನಿರ್ದೇಶಿಸಿ ನಟಿಸಿರುವ 'ಟೀನ್ಸ್' ಎನ್ನುವ ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ 12 ಜನ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಬಗ್ಗೆ ಅವರು ಮಾಡಿದ್ದಾರೆ. ಈ ವೇಳೆ ಕಲಾವಿದರು ತಮಿಳು ಭಾಷೆ ಕಲಿಯುವುದು ಬಹಳ ಮುಖ್ಯ ಎಂದಿದ್ದಾರೆ. ಅದರಲ್ಲಿ ವಿಶೇಷ ಏನಿದೆ ಎನ್ನಬಹುದು. ಈಗ ಉತ್ತರ ಭಾರತದವರು ಬಂದು ಇಲ್ಲಿ ಭಾಷೆ ಗೊತ್ತಿಲ್ಲದೇ ನಟಿಸಿ ಒಳ್ಳೆ ಸಂಭಾವನೆ ಪಡೆಯುತ್ತಿದ್ದಾರೆ.
ತಮನ್ನಾ ರೀತಿ ಡ್ಯಾನ್ಸ್ ಮಾಡಿ ಒಳ್ಳೆ ದುಡ್ಡು ಸಂಪಾದಿಸುತ್ತಿದ್ದಾರೆ. ಒಂದು ಸಿನಿಮಾ ಗೆಲ್ಲೋಕೆ ತಮನ್ನಾ ಡ್ಯಾನ್ಸ್ ಮುಖ್ಯ ಕಾರಣವಾಗಿ ಕಥೆ, ಸ್ಕ್ರಿಪ್ಟ್ ಎಲ್ಲಾ ನಂತರ ಎನ್ನುವಂತಾಗಿದೆ ಎಂದು ಪಾರ್ತಿಬನ್ ನಕ್ಕಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. 'ಜೈಲರ್' ಚಿತ್ರದ 'ಕಾವಾಲಯ್ಯ' ಹಾಗೂ 'ಅರನ್ಮಣೈ-4' ಚಿತ್ರದ 'ಅಚ್ಚೋ ಅಚ್ಚೋ' ಸಾಂಗ್ ಬಗ್ಗೆ ಪಾರ್ತಿಬನ್ ಹೇಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ತಮನ್ನಾ ಬಿಂದಾಸ್ ಆಗಿ ಕುಣಿದಿದ್ದ 'ಕಾವಾಲಯ್ಯ' ಸಾಂಗ್ ವೈರಲ್ ಆಗಿದ್ದು ಗೊತ್ತೇಯಿದೆ. ಇನ್ನು ಸಿ. ಸುಂದರ್ ನಿರ್ದೇಶನದ 'ಅರನ್ಮಣೈ-4' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ತಮನ್ನಾ ರಾಶಿ ಖನ್ನಾ ಹೆಜ್ಜೆ ಹಾಕಿದ್ದರು. ಇಬ್ಬರೂ ಪೈಪೋಟಿಗೆ ಬಿದ್ದು ಗ್ಲಾಮರ್ ಪ್ರದರ್ಶಿಸಿದ್ದರು. ಬೇಕಂತಲೇ ಈ ಹಾಡನ್ನು ಚಿತ್ರದಲ್ಲಿ ತುರುಕಿದಂತಿತ್ತು.

ಕಮರ್ಷಿಯಲ್ ಅಂಶಗಳನ್ನು ಸೇರಿಸಬೇಕು ಎನ್ನುವ ಕಾರಣಕ್ಕೆ ಬೇಕಂತಲೇ ಇಂತಹ ಸ್ಪೆಷಲ್ ಸಾಂಗ್ ಸೇರಿಸುತ್ತಾರೆ ಎನ್ನುವ ಆರೋಪ ಇದೆ. ಇದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ಸಾಂಗ್ ಕಟ್ಟಿಕೊಡುತ್ತದೆ. ಕೆಲವೊಮ್ಮೆ ಇಂತಹ ಸಾಂಗ್ಸ್ ಹಿಟ್ ಆಗಿ ಚಿತ್ರದ ಇತರೆ ಅಂಶಗಳು ಗೌಣವಾಗಿಬಿಡುತ್ತವೆ. ಇದೇ ಮಾತನ್ನು ಪಾರ್ತಿಬನ್ ಹೇಳಿದ್ದಾರೆ. ಆದರೆ ಪಾರ್ತಿಬನ್ ಹೇಳಿದ್ದ ವೀಡಿಯೋವನ್ನು ಅರ್ಧಕ್ಕೆ ಕಟ್ ಎಲ್ಲಾ ಸಿನಿಮಾಗಳ ಕಥೆ ಇದೇ ಎಂದು ಹೇಳಿದಂತೆ ವೈರಲ್ ಮಾಡಲಾಗಿತ್ತು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಪಾರ್ಬಿತ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಸ್ನೇಹಿತರೇ..
ಪ್ರಶ್ನೆಯೊಂದಕ್ಕೆ ನನ್ನ ಉತ್ತರವನ್ನು ಅರ್ಧದಷ್ಟು ಕಟ್ ಮಾಡಿ ವೈರಲ್ ಮಾಡಿರೋದು ನನಗೆ ನೋವುಂಟು ಮಾಡಿದೆ. ನಾನು ಎಲ್ಲಾ ಸ್ಟಾರ್‌ಗಳು ಮತ್ತು ನಿರ್ದೇಶಕರನ್ನು ಗೌರವಿಸುತ್ತೇನೆ. ಹಾಗಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











