For Quick Alerts
  ALLOW NOTIFICATIONS  
  For Daily Alerts

  ಮಣಿರತ್ನಂ ಚಿತ್ರದಿಂದ ಮತ್ತೊಬ್ಬ ಸ್ಟಾರ್ ನಟ ಔಟ್!

  |

  ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಲಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಬಹುದೊಡ್ಡ ಕಲಾವಿದರ ಬಳಗ ಹೊಂದಿರುವ ಈ ಚಿತ್ರ ಯಾವಾಗ ಅರಂಭವಾಗುತ್ತೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿದೆ.

  ಸಿನಿಮಾ ಆರಂಭಕ್ಕೂ ಮುಂಚೆ ಈಗ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಹೌದು, ಈ ಮೊದಲೇ ಸುದ್ದಿಯಾದಂತೆ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪಾರ್ಥಿಬನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಪಾರ್ಥಿಬನ್ ಈ ಚಿತ್ರದಿಂದ ಹೊರಬಂದಿದ್ದಾರೆ ಎಂಬ ನಿರಾಸೆ ಸುದ್ದಿ ಹೊರಬಿದ್ದಿದೆ.

  ಮಣಿರತ್ನಂ-ಎಆರ್ ರೆಹಮಾನ್ ಜೋಡಿ ವಿರುದ್ಧ ನೆಟ್ಟಿಗರು ಬೇಸರಮಣಿರತ್ನಂ-ಎಆರ್ ರೆಹಮಾನ್ ಜೋಡಿ ವಿರುದ್ಧ ನೆಟ್ಟಿಗರು ಬೇಸರ

  ಡೇಟ್ ಹೊಂದಾಣಿಕೆಯಾಗದ ಕಾರಣ 'ಪೊನ್ನಿಯನ್ ಸೆಲ್ವನ್' ಚಿತ್ರವನ್ನು ಕೈಬಿಡಲು ಪಾರ್ಥಿಬನ್ ತೀರ್ಮಾನಿಸಿದ್ದಾರಂತೆ. ಆದರೆ ಈ ತೀರ್ಮಾನ ಅಭಿಮಾನಿಗಳಿಗೆ ಬೇಸರ ತರಿಸಿದೆ.

  ಇನ್ನು ಮತ್ತೊಂದೆಡೆ ಅನುಷ್ಕಾ ಶೆಟ್ಟಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದು ಕೂಡ ನೆರವೇರಲಿಲ್ಲ. ಅನುಷ್ಕಾ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಅನುಮಾನವಾಗಿದೆ.

  'ಪಲ್ಲವಿ ಅನುಪಲ್ಲವಿ' ಸಿನಿಮಾ ನೆನೆದು ಭಾವುಕ ಟ್ವೀಟ್ ಮಾಡಿದ ಅನಿಲ್ ಕಪೂರ್'ಪಲ್ಲವಿ ಅನುಪಲ್ಲವಿ' ಸಿನಿಮಾ ನೆನೆದು ಭಾವುಕ ಟ್ವೀಟ್ ಮಾಡಿದ ಅನಿಲ್ ಕಪೂರ್

  ಇನ್ನುಳಿದಂತೆ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ತಮಿಳು ನಟಿ ಚಿಯಾನ್ ವಿಕ್ರಮ್, ಮಲಯಾಳಂ ನಟ ಲಾಲ್, ಕೀರ್ತಿ ಸುರೇಶ್, ತ್ರಿಷಾ, ಜಯಂ ರವಿ, ಕಾರ್ತಿ, ಜ್ಯೋತಿಕಾ ಸೇರಿದಂತೆ ಇನ್ನು ಹಲವರು ಈ ಸಿನಿಮಾದಲ್ಲಿರಲಿದ್ದಾರೆ.

  ಮೂಲಗಳ ಪ್ರಕಾರ, ಈ ಚಿತ್ರ ಎರಡು ಭಾಗಗಳಾಗಿ ಮೂಡಿಬರಲಿದ್ದು, ಚಿತ್ರದ ಬಹುತೇಕ ಶೂಟಿಂಗ್ ಥೈಲ್ಯಾಂಡ್ ಅರಣ್ಯದಲ್ಲಿ ನಡೆಯಲಿದೆಯಂತೆ. ಮಣಿರತ್ನಂ, ಶಿವ ಅನಂತ. ಕುಮಾರವೇಲು, ಜೋಯ್ ಮೋಹನ್ ಈ ಚಿತ್ರಕ್ಕೆ ಚಿತ್ರಕತೆ ಮಾಡುತ್ತಿದ್ದಾರೆ.

  English summary
  Tamil Actor R Parthiban decided to come out from Mani Ratnam's ponniyin selvan movie because of date issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X