'ನಿಜ ಜೀವನದಲ್ಲಿ ನಾನು ರೊಮ್ಯಾಂಟಿಕ್ ವ್ಯಕ್ತಿ ಅಲ್ಲ' ಎಂದ ನಟ ಸೂರ್ಯ

ತಮಿಳು ಸಿನಿಮಾರಂಗದ ಖ್ಯಾತ ನಟ ಸೂರ್ಯ ಸದ್ಯ ಬಹುನಿರೀಕ್ಷೆಯ 'ಸೂರರೈ ಪೊಟ್ರು' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸದ್ಯ ಸೂರ್ಯ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಮಯದಲ್ಲಿ ನಟ ಸೂರ್ಯ ವೈಯಕ್ತಿಕ ಜೀವನ ಮತ್ತು ಪತ್ನಿ ಜ್ಯೂತಿಕಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಆನ್ ಲೈನ್ ನಲ್ಲಿ ಸಂದರ್ಶನ ನೀಡಿರುವ ನಟ ಸೂರ್ಯ, ತನ್ನ ವೈಯಕ್ತಿಕ ಜೀವನವು ಸಿನಿಮಾದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಸೂರ್ಯ ಆಫ್ ಸ್ಕ್ರೀನ್ ರೋಮ್ಯಾನ ಬಗ್ಗೆಯೂ ಮಾತನಾಡಿದ್ದಾರೆ. ಸೂರ್ಯ ನಟನೆಯ ರೊಮ್ಯಾಂಟಿಕ್ ಸಿನಿಮಾ ನೋಡಿ ಪತ್ನಿ ಜ್ಯೋತಿಕಾ ಯಾವಾಗಲು ದೂರುತ್ತಾರೆ ಎಂದು ಸೂರ್ಯ ಹೇಳಿದ್ದಾರೆ. ಮುಂದೆ ಓದಿ...

ವೈಯಕ್ತಿಕ ಪಾತ್ರ ಸಿನಿಮಾದ ಮೇಲೆ ಪ್ರಭಾವ ಬೀರುತ್ತೆ

ವೈಯಕ್ತಿಕ ಪಾತ್ರ ಸಿನಿಮಾದ ಮೇಲೆ ಪ್ರಭಾವ ಬೀರುತ್ತೆ

ಸಿನಿಮಾದಲ್ಲಿ ಹೆಚ್ಚು ಕೋಪಮಾಡಿಕೊಳ್ಳುವ ಸೂರ್ಯ ಅವರಿಗೆ ನಿಜ ಜೀವನದಲ್ಲೂ ಕೋಪ ಜಾಸ್ತಿಯಂತೆ. ಕ್ಯಾಮರಾ ಮುಂದೆ ನಟಿಸುವಾಗ ನಿಜ ಜೀವನದ ಕೋಪ, ಸಿನಿಮಾ ಪಾತ್ರದ ಮೇಲು ಪ್ರಭಾವ ಬೀರುತ್ತೆ ಎಂದು ಸೂರ್ಯ ಹೇಳಿದ್ದಾರೆ. ಸೂರರೈ ಪೊಟ್ರು ಸಿನಿಮಾದಲ್ಲೂ ಸೂರ್ಯ ಕೋಪ ಮುಂದುವರೆದಿದೆಯಂತೆ.

ನಿಜ ಜೀವನದಲ್ಲಿ ರೊಮ್ಯಾಂಟಿಕ್ ವ್ಯಕ್ತಿ ಅಲ್ಲ- ಸೂರ್ಯ

ನಿಜ ಜೀವನದಲ್ಲಿ ರೊಮ್ಯಾಂಟಿಕ್ ವ್ಯಕ್ತಿ ಅಲ್ಲ- ಸೂರ್ಯ

ಇದೇ ಸಮಯದಲ್ಲಿ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿರುವ ಸೂರ್ಯ ನಿಜ ಜೀವನದಲ್ಲಿ ರೊಮ್ಯಾಂಟಿಕ್ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ. ಪತ್ನಿ ಜ್ಯೋತಿಕಾ ನನ್ನ ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ, ವಾಸ್ತವದಲ್ಲಿ ಯಾಕಿಲ್ಲ ಎಂದು ದೂರುತ್ತಾರೆ ಎಂದು ಸೂರ್ಯ ಹೇಳಿದ್ದಾರೆ.

ನನ್ನ ರೋಮ್ಯಾನ್ಸ್ ಅನ್ನು ಜ್ಯೋತಿಕಾ ಸಿನಿಮಾದಲ್ಲಿ ನೋಡಬೇಕು

ನನ್ನ ರೋಮ್ಯಾನ್ಸ್ ಅನ್ನು ಜ್ಯೋತಿಕಾ ಸಿನಿಮಾದಲ್ಲಿ ನೋಡಬೇಕು

'ಪ್ರೀತಿಯನ್ನು ಹೇಗೆ ವಿವರಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನಿಜ ಜೀವನದಲ್ಲಿ ನಾನು ರೊಮ್ಯಾಂಟಿಕ್ ಅಲ್ಲ. ನನ್ನ ರೋಮ್ಯಾನ್ಸ್ ಅನ್ನು ಸಿನಿಮಾದಲ್ಲಿ ಮಾತ್ರ ನೋಡಬೇಕು, ಅವಳೊಂದಿಗೆ ಅಲ್ಲ ಎಂದು ಹೇಳುತ್ತಿರುತ್ತಾಳೆ' ಎಂದು ಸೂರ್ಯ ಆಫ್ ಸ್ಕ್ರೀನ್ ರೊಮ್ಯಾನ್ಸ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

Recommended Video

ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ Priyanka | Filmibeat Kannada
ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ

ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ

ಸೂರ್ಯ ಅಭಿನಯದ ಸುರರೈ ಪೊಟ್ರು ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನಾಧಾರಿತ ಸಿನಿಮಾ ಇದಾಗಿದೆ. ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಮಿಂಚಿದ್ದಾರೆ. ಕನ್ನಡಿಗರೊಬ್ಬರ ಜೀವನ ತಮಿಳಿನಲ್ಲಿ ಸಿನಿಮಾ ಆಗಿ ತೆರೆ ಬರುತ್ತಿರುವುದು ಹೆಮ್ಮೆಯ ವಿಚಾರ. ವಿಶೇಷ ಎಂದರೆ ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿದೆ.

More from Filmibeat

English summary
Tamil Actor Reveals He is not romantic in real life. His wife Jyothika has wathed surya's romance only on film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X