For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ಗುಣಮುಖ: ಕಾಮಾಕ್ಷಿ ದೇವಿಯ ದರ್ಶನ ಪಡೆದ ಶರತ್ ಕುಮಾರ್

  |

  ತಮಿಳಿನ ಹಿರಿಯ ನಟ ಶರತ್ ಕುಮಾರ್‌ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಡಿಸೆಂಬರ್ 8 ರಂದು ಸೋಂಕು ದೃಢಪಟ್ಟಿದೆ ಎಂದು ಪತ್ನಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದರು.

  ಕೊವಿಡ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿರುವ ಶರತ್ ಕುಮಾರ್ ಈಗ ಕಾಮಾಕ್ಷಿ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ.

  ತಮಿಳು ನಟ ಶರತ್ ಕುಮಾರ್‌ಗೆ ಕೊರೊನಾ ವೈರಸ್ ದೃಢತಮಿಳು ನಟ ಶರತ್ ಕುಮಾರ್‌ಗೆ ಕೊರೊನಾ ವೈರಸ್ ದೃಢ

  ''ಶರತ್ ಕುಮಾರ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಹಾಗೂ ಆರೋಗ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು, ನಿಮ್ಮೆಲ್ಲರ ಪ್ರಾರ್ಥನೆಯಿಂದ ಶರತ್ ಕುಮಾರ್ ಕೊರೊನಾದಿಂದ ಗುಣಮುಖರಾಗಿದ್ದಾರೆ'' ಎಂದು ರಾಧಿಕಾ ಟ್ವೀಟ್ ಮಾಡಿದ್ದಾರೆ.

  ಇದಕ್ಕೂ ಮುಂಚೆ ಫೇಸ್‌ಬುಕ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದ ನಟ ಶರತ್ ಕುಮಾರ್ ''ನನ್ನ ಕುಲದೈವ ಕಾಮಾಕ್ಷಿ ಅಮ್ಮನ ದರ್ಶನ ಪಡೆಯಲು ಕಾಂಚಿಪುರಕ್ಕೆ ನನ್ನ ಪತ್ನಿಯೊಂದಿಗೆ ತೆರಳುತ್ತಿದ್ದೇನೆ'' ಎಂದು ಮಾಹಿತಿ ನೀಡಿದ್ದರು.

  ಪ್ರಸ್ತುತ, ಶರತ್ ಕುಮಾರ್ ಅವರು ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕಡೆ ಕನ್ನಡದಲ್ಲಿ ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

  English summary
  Tamil senior actress Radhika confirms that her husband Sarath kumar tests negative for coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X