ಸುದೀಪ್ 'ಬರ್ತ್ ಡೇ'ಗೆ ಬಂದ ಸಿಂಬು ಹೇಳಿದ್ದೇನು?

ಕಿಚ್ಚ ಸುದೀಪ್ ಈಗ 'ಸೌತ್ ಇಂಡಿಯಾ' ಹೊಸ 'ಸೂಪರ್ ಸ್ಟಾರ್' ಆಗಿರುವುದು ಗೊತ್ತೇ ಇದೆ. ಮೊನ್ನೆ ಮೊನ್ನೆ ಅವರು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು, ಅದು ತುಂಬಾ ಗ್ರಾಂಡ್ ಅಗಿದ್ದು, ಕರ್ನಾಟಕವನ್ನೂ ಮೀರಿ ಸುದ್ದಿಯಾಗಿದೆ. ಹೀಗೆ ಹತ್ತು ಹಲವು ಬೆಳವಣಿಗೆಗಳ ನಡುವೆ ಇನ್ನೊಂದು ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅದು ತಮಿಳು ಸ್ಟಾರ್ ಸಿಂಬರಸನ್ ಸಂಗತಿ.

ಮೊನ್ನೆ ಅಂದರೆ ಸೆಪ್ಟೆಂಬರ್ 02, 2012 ರಂದು ಆಚರಿಸಲ್ಪಟ್ಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ತಮಿಳು ಸ್ಟಾರ್ ಸಿಂಬು, ಕರ್ನಾಟಕಕ್ಕೆ, ಅದೂ ಸುದೀಪ್ ಮನೆಗೇ ಬಂದಿದ್ದರು. ಕಿಚ್ಚ ಸುದೀಪ್ ಅವರನ್ನು ಅವರು ಕೇವಲ ನಟರಾಗಿ ಮಾತ್ರವಲ್ಲ, ಮಾನವೀಯತೆ ಗುಣಕ್ಕಾಗಿ ಕೂಡ ಮೆಚ್ಚಕೊಂಡಿದ್ದಾರೆ. ಈ ಮಾತನ್ನು ಸ್ವತಃ ಸಿಂಬು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಬು "ಸುದೀಪ್ ನನ್ನ ಬೆಸ್ಟ್ ಫ್ರೆಂಡ್ ಮಾತ್ರವಲ್ಲ, ಮಾನವೀಯ ಗುಣಗಳುಳ್ಳ ವ್ಯಕ್ತಿ ಕೂಡ. ಇಂಥಹ ವ್ಯಕ್ತಿಯೊಬ್ಬರ ಸ್ಪೆಷಲ್ ದಿನವಾದ ಹುಟ್ಟುಹಬ್ಬವನ್ನು ನಾನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾನು ಶೂಟಿಂಗ್ ಕ್ಯಾನ್ಸಲ್ ಮಾಡಿ ಸ್ವತಃ ಬಂದು ಶುಭ ಕೋರಲು ಬಯಸಿದ್ದು" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಜೊತೆ ಸಾಕಷ್ಟು ಹೊತ್ತು ಇದ್ದು ಹೋಗಿದ್ದಾರೆ ಸಿಂಬು.

ಸುದೀಪ್ ಸೌತ್ ಇಂಡಿಯಾ ಸ್ಟಾರ್ ಆಗುವುದಕ್ಕೆ ಮೊದಲೂ ಕೂಡ ಸಿಂಬು ಸುದೀಪ್ ಹುಡುಕಿಕೊಂಡು ಬಂದಿದ್ದರು. 2009ರಲ್ಲಿ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಸಿಂಬು, ಸುದೀಪ್ ಹಾಗೂ ಕರ್ನಾಟಕವನ್ನು ಮನಸಾರೆ ಹೊಗಳಿ ಹೋಗಿದ್ದರು. ಈಗ ಮತ್ತೆ ಬಂದಿದ್ದಾರೆ. ಸುದೀಪ್ ಅವರಿಗೆ ಶುಭ ಕೋರಿ ಹೋಗಿದ್ದಾರೆ. ನೋಡಿ, ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ಇನ್ನೂ ಅದೆಷ್ಟು ಬೆಲೆಯಿದೆ! (ಒನ್ ಇಂಡಿಯಾ ಕನ್ನಡ)

More from Filmibeat

English summary
Tamil actor Silambarasan, who is a good friend of Sudeep, came to Bangalore to wish Kiccha Sudeep on his birthday, September 02.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X