ಸ್ಟಾರ್ ನಟನ ತಂದೆ ವಿರುದ್ಧ ವಂಚನೆ ಕೇಸ್ ದಾಖಲಿಸಿದ ತಮಿಳು ನಟ ಸೂರಿ

ತಮಿಳು ನಟ ವಿಷ್ಣು ವಿಶಾಲ್ ಮತ್ತು ಹಾಸ್ಯನಟ ಸೂರಿ ಆಪ್ತ ಸ್ನೇಹಿತರು ಹಾಗೂ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರಿದ್ದು ಒಂದು ರೀತಿ ಹಿಟ್ ಕಾಂಬಿನೇಷನ್. ಈ ಜೋಡಿಯಿಂದ ಹಲವು ಚಿತ್ರಗಳು ಮೂಡಿ ಬಂದಿದೆ.

ಒಟ್ಟಿಗೆ ಸಿನಿಮಾ ಮಾಡುತ್ತಿದ್ದ ನಟರು ಹಾವು ಮುಂಗುಸಿಯಂತೆ ಕಿತ್ತಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಟಾರ್ ನಟನ ತಂದೆಯ ವಿರುದ್ಧ ಸೂರಿ ವಂಚನೆ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಸೂರಿ ದೂರಿನ ಹಿನ್ನೆಲೆ ಪೊಲೀಸರು ತನಿಖೆ ಸಹ ಆರಂಭಿಸಿದ್ದಾರೆ. ಅಷ್ಟಕ್ಕೂ, ಸೂರಿ ಮತ್ತು ವಿಷ್ಣು ವಿಶಾಲ್ ತಂದೆ ನಡುವಿನ ಈ ವಿವಾದ ಏನು? ಮುಂದೆ ಓದಿ....

2 ಕೋಟಿ 70 ಲಕ್ಷ ವಂಚನೆ ಆರೋಪ

2 ಕೋಟಿ 70 ಲಕ್ಷ ವಂಚನೆ ಆರೋಪ

ವಿಷ್ಣು ವಿಶಾಲ್ ಅವರ ತಂದೆ ರಮೇಶ್ ಕುಡಾವ್ಲಾ ಮತ್ತು ನಿರ್ಮಾಪಕ ಅನ್ಬುವೆಲ್ ರಾಜನ್ ಅವರ ವಿರುದ್ಧ ವಂಚನೆ ಮಾಡಿದ್ದಕ್ಕಾಗಿ ನಟ ಸೂರಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ಚೆನ್ನೈ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅಗರ್ವಾಲ್ ಅವರನ್ನು ಭೇಟಿಯಾದ ಸೂರಿ 2 ಕೋಟಿ 70 ಲಕ್ಷ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಭಾವನೆ ಹಣ ನೀಡಿಲ್ಲ

ಸಂಭಾವನೆ ಹಣ ನೀಡಿಲ್ಲ

ನನಗೆ ಬರಬೇಕಿದ್ದ ಸಂಭಾವನೆ ಹಣವನ್ನು ನೀಡಿಲ್ಲ ಹಾಗೂ ಕಥೆ ಖರೀದಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಸೂರಿ ಉಲ್ಲೇಖಿಸಿದ್ದಾರೆ. ಸೂರಿ ದೂರಿನ ಅನ್ವಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಷ್ಣು ವಿಶಾಲ್ ಪ್ರಕಟಣೆ

ವಿಷ್ಣು ವಿಶಾಲ್ ಪ್ರಕಟಣೆ

ಸೂರಿ ಅವರ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಷ್ಣು ವಿಶಾಲ್ ''ನನ್ನ ಮತ್ತು ನನ್ನ ತಂದೆಯ ವಿರುದ್ಧ ಇಂತಹ ಸುಳ್ಳು ಆರೋಪಗಳು ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ. ಇದರ ಹಿಂದೆ ಬೇರೆ ಯಾರದೋ ಕೈವಾಡ ಇದೆ'' ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಸೂರಿ ಹಣ ನೀಡಬೇಕಿದೆ

ಸೂರಿ ಹಣ ನೀಡಬೇಕಿದೆ

''ನಟ ಸೂರಿ ಅವರು, 2017ರಲ್ಲಿ ವಿಷ್ಣು ವಿಶಾಲ್ ಸ್ಟುಡಿಯೋಸ್ ನಿರ್ಮಾಣದ 'ಕವರಿಮಾನ್ ಪರಂಬರೈ' ಚಿತ್ರಕ್ಕಾಗಿ ಪಡೆದುಕೊಂಡಿದ್ದ ಮುಂಗಡವನ್ನು ಮರುಪಾವತಿಸಬೇಕಾಗಿದೆ. ಆದ್ರೆ, ಅದನ್ನು ಕೇಳಿಲ್ಲ. ನಮಗೆ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಸಮಯದಲ್ಲಿ ಮತ್ತಷ್ಟು ವಿಸ್ತಾರವಾಗಿ ಹೇಳುವುದು ಸೂಕ್ತವಲ್ಲ ಮತ್ತು ಕಾನೂನಿ ಅಂಗಳದಲ್ಲಿ ಈ ವಿಚಾರ ಇರುವುದರಿಂದ ನಾವು ಕಟ್ಟುನಿಟ್ಟಾಗಿ ಹೋಗುತ್ತೇವೆ. ಸತ್ಯ ಹೊರಬರುವವರೆಗೂ ಅಭಿಮಾನಿಗಳು ಮತ್ತು ಹಿತೈಷಿಗಳು ಕಾಯಬೇಕು ಎಂದು ಕೋರುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

Recommended Video

Rocking Star Yash son, ಅಪ್ಪ-ಮಗನ ಕ್ಯೂಟ್ ವಿಡಿಯೋ ರಾಧಿಕಾ ಪಂಡಿತ್ | Filmibeat Kannada
ಮತ್ತೆ ಒಟ್ಟಿಗೆ ನಟಿಸುವುದು ಅನುಮಾನ!

ಮತ್ತೆ ಒಟ್ಟಿಗೆ ನಟಿಸುವುದು ಅನುಮಾನ!

ಸೂರಿ ಮತ್ತು ವಿಷ್ಣು ವಿಶಾಲ್ ಕಾಂಬಿನೇಷನ್‌ನಲ್ಲಿ ವೆನ್ನಿಲಾ ಕಬಡ್ಡಿ (2009), ಕಥಾನಾಯಗನ್ (2017), ಮಾವೀರನ್ ಕಿಟ್ಟು (2016), ವೇಲೈನು ವಂಧುಟ್ಟ ವೆಲ್ಲಿಕಾರನ್ (2016) ಅಂತಹ ಚಿತ್ರಗಳು ಬಂದಿವೆ. ಬಹುಶಃ ಈ ವಿವಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ನಟಿಸುವುದು ಅನುಮಾನ.

More from Filmibeat

English summary
Tamil Actor soori filed Fraud Case against vishnu vishal father Ramesh Kudawla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X