ಡ್ರಗ್ಸ್ ಪ್ರಕರಣದಲ್ಲಿ ನಟ ಶ್ರೀಕಾಂತ್ ಬಂಧನ

ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಸೋಮವಾರ(ಜೂನ್ 23) ತಮಿಳು ನಟ ಶ್ರೀಕಾಂತ್ ಅವರನ್ನು ಬಂಧಿಸಲಾಗಿದೆ. ಎಐಎಡಿಎಂಕೆ ಮಾಜಿ ಪದಾಧಿಕಾರಿ ಪ್ರಸಾದ್ ಜೊತೆಗಿನ ಸಂಪರ್ಕದ ಆರೋಪದ ಮೇಲೆ ಪೊಲೀಸರು ಶ್ರೀಕಾಂತ್ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರ ಕಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸೆಲೆಬ್ರೆಟಿಗಳ ಹೆಸರು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕನ್ನಡ ಕೆಲ ತಾರೆಯರು ಡ್ರಗ್ಸ್ ಪ್ರಕರಣಗಳಲ್ಲಿ ಸಿಲುಕಿದ್ದರು. ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಲ್ಪಟ್ಟ ಪ್ರಸಾದ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದ ಸಮಯದಲ್ಲಿ ನಟ ಶ್ರೀಕಾಂತ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಲಿಂಕ್ ಇರುವುದು ಪೊಲೀಸರ ಗಮನಕ್ಕೆ ಬಂದಿದೆ. ಹಾಗಾಗಿ ಚೆನ್ನೈ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ.

Tamil Actor Srikanth Arrested in Drug Case After Cocaine Link Surfaces

ಚೆನ್ನೈನಲ್ಲಿ ನಡೆದ ಪಬ್‌ವೊಂದರಲ್ಲಿ ನಡೆದ ಗಲಾಟೆ ಸಂಬಂಧ ತನಿಖೆ ನಡೆಸುತ್ತಿದ್ದಾಗ ಪೊಲೀಸರು ಎಐಎಡಿಎಂಕೆ ಮಾಜಿ ಕಾರ್ಯಕರ್ತ ಪ್ರಸಾದ್ ಅವರನ್ನು ಬಂಧಿಸಿದ್ದರು. ತನಿಖೆಯಲ್ಲಿ ಆತ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ಶ್ರೀಕಾಂತ್‌ಗೆ ಕೊಕೇನ್ ಪೂರೈಸಿರುವುದಾಗಿ ಪ್ರಸಾದ್ ಹೇಳಿದ್ದಾನೆ. 12, 000 ರೂಪಾಯಿಗೆ ಒಂದು ಗ್ರಾಂ ಕೊಕೇನ್‌ ಅನ್ನು ನಟ ಶ್ರೀಕಾಂತ್‌ ಖರೀದಿಸಿರುವುದಾಗಿ ಪ್ರಸಾದ್ ಹೇಳಿದ್ದಾನೆ ಎಂದು ವರದಿಯಾಗಿದೆ.

ನಟ ಶ್ರೀಕಾಂತ್ ಅವರನ್ನು ವಿಚಾರಣೆಗೆ ಕರೆಸಿದ ಪೊಲೀಸರು ಮಾದಕವಸ್ತು ಬಳಕೆ ಪರಿಶೀಲಿಸಲು ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನುಂಗಂಬಕ್ಕಂ ಪೊಲೀಸ್ ಠಾಣೆಯಲ್ಲಿ ನಟನ ವಿಚಾರಣೆ ನಡೆಯುತ್ತಿದೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದಾರೆ.

2002ರಲ್ಲಿ ಬಂದಿದ್ದ 'ರೋಜಾ ಕೂಟಂ' ಎಂಬ ಚಿತ್ರದಲ್ಲಿ ಶ್ರೀಕಾಂತ್ ಹೀರೊ ಆಗಿ ನಟಿಸಿದ್ದರು. ಮುಂದೆ ಅವರ ಹೆಸರಿನ ಜೊತೆ 'ರೋಜಾ ಕೂಟಂ' ಎನ್ನುವುದು ಸೇರಿಕೊಂಡಿತ್ತು. ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀಕಾಂತ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಶ್ರೀಕಾಂತ್ ತಂದೆ ಚಿತ್ತೂರು ಮೂಲದವರು. ತಾಯಿ ಚೆನ್ನೈನವರು. ಹಾಗಾಗಿ ಚೆನ್ನೈನಲ್ಲಿ ಹುಟ್ಟಿದರೂ ಹೈದರಾಬಾದ್‌ನಲ್ಲಿ ಓದಿ ಬೆಳೆದರು.

2008ರಲ್ಲಿ ವಂದನಾ ಎಂಬುವವರ ಜೊತೆ ಶ್ರೀಕಾಂತ್ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. 'ಜೂಟ್', 'ಒಕರಿಕಿ ಒಕರು', 'ಉಯಿರ್', 'ಪೂ', 'ಇಂದ್ರವಿಳಾ', 'ದ್ರೋಹಿ', 'ಸೌಕಾರ್‌ಪೆಟೈ', 'ಮಿರುಗ' ಹೀಗೆ ಒಂದಷ್ಟು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಶ್ರೀಕಾಂತ್ ನಟಿಸಿದ್ದಾರೆ. ಈ ವರ್ಷ ಬಂದ 'ದಿನಸರಿ' ಹಾಗೂ 'ಕೊಂಜಂ ಕಾದಲ್ ಕೊಂಜಂ ಮೊದಲ್' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

More from Filmibeat

English summary
ocaine Allegations Surface Against Actor Srikanth in AIADMK-Linked Drug Probe
Read more about: srikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X