ಪ್ರಭಾಸ್ ನಿರ್ಮಾಣದ ಚಿತ್ರದಲ್ಲಿ ಸೂರ್ಯ: 10 ಭಾಷೆಗಳಲ್ಲಿ ಹೈವೋಲ್ಟೇಜ್ ಪೋಸ್ಟರ್

'ಸುರರೈ ಪೋಟ್ರು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟ ಸೂರ್ಯ ಮತ್ತೊಂದು ಮೆಗಾ ಪ್ರಾಜೆಕ್ಟ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ 10 ಭಾಷೆಗಳಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಶೂಟಿಂಗ್‌ ಶುರುವಾಗಿದ್ದು, ಭರ್ಜರಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾ ಮಾಹಿತಿ ನೀಡಿದೆ ಚಿತ್ರತಂಡ. ನಡಿಪಿನ್ ನಾಯಗನ್ ಹೊಸ ಅವತಾರಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ತಮಿಳು ನಟ ಸೂರ್ಯಗೆ ಹೊರ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. 'ಸುರರೈ ಪೋಟ್ರು', 'ಜೈಭೀಮ್' ಸಿನಿಮಾಗಳ ಮೂಲಕ ಬ್ಯಾಕ್‌ ಟು ಬ್ಯಾಕ್ ಹಿಟ್ ಕೊಟ್ಟ ಸೂರ್ಯ 'ವಿಕ್ರಮ್' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಗೆದ್ದಿದ್ದರು. ಕಮಲ್ ಹಾಸನ್ ನಟನೆಯ ಸೂಪರ್ ಹಿಟ್ 'ವಿಕ್ರಮ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಡಾನ್ ರೋಲೆಕ್ಸ್ ಅವತಾರದಲ್ಲಿ 4 ನಿಮಿಷಗಳ ಕಾಣಿಸಿಕೊಂಡು ಧೂಳೆಬ್ಬಿಸಿದ್ದರು. ಇದೀಗ ಮತ್ತೊಂದು ಕ್ರೇಜಿ ಪ್ರಾಜೆಕ್ಟ್‌ನಲ್ಲಿ ಸೂರ್ಯ ಅಬ್ಬರಿಸಿಸೋಕೆ ಬರ್ತಿದ್ದಾರೆ.

Tamil Actor Suriya 42nd Movie Motion Poster Released

ಸೂರ್ಯ ನಟನೆಯ 42ನೇ ಚಿತ್ರಕ್ಕೆ ಇನ್ನು ಟೈಲ್ ಫಿಕ್ಸ್ ಆಗಿಲ್ಲ. #Suriya42 ಹೆಸರಿನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಿದೆ. ತಮಿಳು ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಒಡೆತನದ ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಗ್ರೀನ್ ಸ್ಟುಡಿಯೋ ಸಂಸ್ಥೆ ಕೂಡ ಕೈ ಜೋಡಿಸಿದೆ. ದೇವಿ ಶ್ರೀಪ್ರಸಾದ್ ಮ್ಯೂಸಿಕ್ ಚಿತ್ರಕ್ಕಿದೆ. 'ದಿ ಮೈಟಿ ವೈಲೆಂಟ್ ಸಾಗಾ' ಅನ್ನುವ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ವಿಶೇಷ ಅಂದರೆ ಈ ಚಿತ್ರವನ್ನು 2D ಜೊತೆಗೆ 3D ವರ್ಷನ್‌ನಲ್ಲಿ ಪ್ರೇಕ್ಷಕರ ಮುಂದೆ ತರಲಾಗ್ತಿದೆ.

ಥೀಮ್ ಪೋಸ್ಟರ್ ನೋಡುತ್ತಿದ್ದರೆ ಇದೊಂದು ಪ್ರಿರಿಯಾಡಿಕ್ ಡ್ರಾಮಾ ಸಿನಿಮಾ ಅನ್ನುವುದು ಗೊತ್ತಾಗುತ್ತಿದೆ. ಬಿಲ್ಲು, ಬಾಣ, ಕೊಡಲಿ ಹಿಡಿದು ಯುದ್ಧಭೂಮಿಯಲ್ಲಿ ಸೂರ್ಯ ದರ್ಶನ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ಬೆಡಗಿ ದಿಶಾ ಪಟಾನಿನ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 'ಸುರರೈ ಪೋಟ್ರು' ಸಿನಿಮಾದಿಂದ ಉತ್ತರ ಭಾರತದಲ್ಲೂ ಸೂರ್ಯಗೆ ಭಾರೀ ಕ್ರೇಜ್ ಸೃಷ್ಟಿಯಾಗಿದೆ. ಹಾಗಾಗಿ ಹಿಂದಿ ಬೆಲ್ಟ್‌ನ ಕೂಡ ಟಾರ್ಗೆಟ್ ಮಾಡಿ ಈ ಸಿನಿಮಾ ಕಟ್ಟಿ ನಿರ್ಮಾಣ ಮಾಡಲಾಗ್ತಿದೆ. ವೆಟ್ರಿ ಪಳನಿಸ್ವಾಮಿ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

Tamil Actor Suriya 42nd Movie Motion Poster Released

ಸೂರ್ಯ ಸಿನಿಕರಿಯರ್‌ನಲ್ಲೇ ಇದು ಬಹಳ ಅದ್ಧೂರಿ ಸಿನಿಮಾ. 'ಸುರರೈ ಪೋಟ್ರು' ಹಿಂದಿ ರೀಮೆಕ್‌ನಲ್ಲಿ ನಡಿಪಿನ್ ನಾಯಗನ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಸದ್ಯ ಸೂರ್ಯ ನಟನೆಯ 42ನೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್‌ ಮಾಡಿದೆ. 10 ಭಾಷೆಗಳಲ್ಲಿ ಸಿನಿಮಾ ಮೂಡಿ ಬರುತ್ತಿರುವುದರಿಂದ ಇದು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ನಿರ್ಮಾಪಕರಾಗಿಯೂ ಸೂರ್ಯ ಸಕ್ಸಸ್ ಕಂಡಿದ್ದು,'ಸುರರೈ ಪೋಟ್ರು' ಹಿಂದಿ ವರ್ಷನ್‌ಗೂ ಸಹ ನಿರ್ಮಾಪಕರಾಗಿದ್ದಾರೆ.

More from Filmibeat

English summary
Suriya 42nd Movie Motion Poster Released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X