ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

ಸ್ಟಾರ್ ನಟರಿಗೂ ಈಗ ಹಿಟ್ ಸಿನಿಮಾ ಕೊಡುವುದು ಕಷ್ಟವಾಗಿಬಿಟ್ಟಿದೆ. ಒಳ್ಳೆ ನಿರ್ದೇಶಕ, ತಂತ್ರಜ್ಞರು, ಕಥೆ ಇಲ್ಲದೇ ಹೀರೊ ಕೂಡ ಜೀರೊ ಎನ್ನುವುದು ಆಗಾಗ್ಗೆ ಪ್ರೂವ್ ಆಗಿಬಿಡುತ್ತದೆ. ಅದೇ ಕಾರಣಕ್ಕೆ ಸ್ಟಾರ್ ನಟರು, ನಿರ್ಮಾಪಕರು ಇತ್ತೀಚೆಗೆ ತಂತ್ರಜ್ಞರಿಗೆ ಬಹುಪರಾಕ್ ಎನ್ನುತ್ತಿದ್ದಾರೆ. ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟವರಿಗೆ ಭರ್ಜರಿ ಉಡುಗೊರೆಗಳನ್ನು ಕೊಡುತ್ತಿದ್ದಾರೆ.

ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಫ್ಯಾಂಟಸಿ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ. ಈ ವಾರ ಸಿನಿಮಾ ಓಟಿಟಿಗೆಗೂ ಬಂದಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

Tamil Actor Suriya Gifted a Car To Karuppu Film Director RJ Balaji

13 ವರ್ಷಗಳಿಂದ ಒಂದೇ ಒಂದು ಬ್ಲಾಕ್‌ಬಸ್ಟರ್ ಹಿಟ್ ಇಲ್ಲದೇ ನಟ ಸೂರ್ಯ ಕಂಗಾಲಾಗಿದ್ದರು. ಅದರಲ್ಲೂ ಇತ್ತೀಚೆಗೆ 'ಕಂಗುವ' ಹಾಗೂ 'ರೆಟ್ರೋ' ಸಿನಿಮಾಗಳ ಸೋಲು ದೊಡ್ಡ ಪಾಠ ಕಲಿಸಿತ್ತು. ಪ್ಯಾನ್ ಇಂಡಿಯಾ ಆಸೆಗೆ ಬೀಳದೇ ತಮಿಳು ಪ್ರೇಕ್ಷಕರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ. 'ಕರುಪ್ಪು' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಆರ್‌ಜೆ ಬಾಲಾಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಸಿನಿಮಾ ಗೆಲುವಿನ ಸಂಭ್ರಮದಲ್ಲಿ ನಿರ್ದೇಶಕನಿಗೆ ಹೊಸ ಕಾರನ್ನು ನಟ ಸೂರ್ಯ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಚಿತ್ರದ ಸಂಗೀತ ನಿರ್ದೇಶಕ ಸಾಯಿ ಅಭಯಂಕರ್, ಛಾಯಾಗ್ರಾಹಕ ಜಿ. ಕೆ ವಿಷ್ಣು ಹಾಗೂ ಸಂಕಲನಕಾರ ಕಲೈವಣ್ಣನ್ ಅವರಿಗೆ ವಿಜಯ್ ಹೊಸ ಕಾರುಗಳನ್ನು ಗಿಫ್ಟ್ ಮಾಡಿದ್ದರು. ಇದೀಗ ನಿರ್ದೇಶಕನಿಗೆ SUV ಕಾರ್ ಅನ್ನು ಕೊಟ್ಟಿದ್ದಾರೆ. ಇಬ್ಬರೂ ಕಾರ್ ಏರಿ ಚೆನ್ನೈ ರಸ್ತೆಗಳಲ್ಲಿ ಸುತ್ತಾಡಿರುವ ವೀಡಿಯೊ ವೈರಲ್ ಆಗ್ತಿದೆ.

'ಮೂಕುಟ್ಟಿ ಅಮ್ಮನ್' ಹಾಗೂ 'ವೀಟ್ಲ ವಿಶೇಷಂ' ಎಂಬ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದ್ದ ಆರ್‌ಜಿ ಬಾಲಾಜಿ 3ನೇ ಸಿನಿಮಾ 'ಕರುಪ್ಪು'. ದಳಪತಿ ವಿಜಯ್ ಅವರಿಗಾಗಿ ಈ ಕಥೆಯನ್ನು ಸಿದ್ಧಪಡಿಸಿದ್ದರು. ವಿಜಯ್ ಕೂಡ ಒಪ್ಪಿದ್ದರು. ಆದರೆ ತಮ್ಮ ಕೊನೆ ಚಿತ್ರಕ್ಕೆ ರಾಜಕೀಯ ಅಂಶಗಳು ಇರುವ ಕಥೆ ಏನು ಎನ್ನುವ ಕಾರಣಕ್ಕೆ 'ಜನನಾಯಗನ್' ಕೈಗೆತ್ತಿಕೊಂಡಿದ್ದರು. ಹಾಗಾಗಿ 'ಕರುಪ್ಪು' ಕಥೆ ಸೂರ್ಯ ಪಾಲಾಗಿತ್ತು. ಮೇ 15ರಂದು ತೆರೆಗೆ ಬಂದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಆರ್‌ಜೆ ಬಾಲಾಜಿ ಸಕ್ಸಸ್ ಕಂಡಿದ್ದರು. ಈವರೆಗೆ ಸಿನಿಮಾ 340 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ನೀಡಿದೆ. ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಬೆಂಬಲಿಸಿದ್ದರು. ಹಾಗಾಗಿ ಭಾರೀ ಕಲೆಕ್ಷನ್ ಮಾಡಿ 'ಕರುಪ್ಪು' ಸಿನಿಮಾ ಗೆದ್ದಿದೆ. ಇಂದಿನಿಂದ(ಜೂನ್ 12) ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರರಿಗೆ ವಿಜಯ್ ಗಿಫ್ಟ್ ಕೊಟ್ಟಿದ್ದಾರೆ. ನಿರ್ದೇಶಕರಿಗೆ ಯಾಕೆ ಕೊಟ್ಟಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. 'ಕರುಪ್ಪು' ಕಥೆ ವಿಜಯ್‌ಗಾಗಿ ಮಾಡಿದ್ದು. ಅವರು ಒಪ್ಪದೇ ಇದ್ದಿದ್ದಕ್ಕೆ ಬಳಿಕ ಸೂರ್ಯ ಅವರಿಗೆ ಹೇಳಿ ಸಿನಿಮಾ ಮಾಡಿದ್ದಾಗಿ ಆರ್‌ಜೆ ಬಾಲಾಜಿ ಹೇಳಿದ್ದರು. ಇದೇ ಕಾರಣಕ್ಕೆ ನಿರ್ದೇಶಕನ ಮೇಲೆ ಸೂರ್ಯ ಮುನಿಸಿಕೊಂಡಿದ್ದಾರೆ ಎಂದು ಗುಲ್ಲಾಗಿತ್ತು. ಸದ್ಯ ದುಬಾರಿ ಕಾರ್ ಉಡುಗೊರೆಯಾಗಿ ಕೊಟ್ಟು ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ನ ಸೂರ್ಯ ಸಾಬೀತು ಮಾಡಿದ್ದಾರೆ. 'ಕರುಪ್ಪು' ಸೀಕ್ವೆಲ್ ಕೂಡ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆಯಿದೆ.

Read more about: suriya kollywood director
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X