'ಸೂರರೈ ಪೊಟ್ರು' ಯಶಸ್ಸಿನ ಬಳಿಕ ಸೂರ್ಯ ಸಂಭಾವನೆಯಲ್ಲಿ ಭಾರಿ ಏರಿಕೆ?
ತಮಿಳು ನಟ ಸೂರ್ಯ ನಟನೆಯ 'ಸೂರರೈ ಪೊಟ್ರು' ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಚಿತ್ರಮಂದಿರಗಳಿಗೆ ಕಾಯದೇ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಸೂರ್ಯ ಅವರ ಪರ್ಫಾಮೆನ್ಸ್ ಕಂಡು ಥ್ರಿಲ್ ಆದರು.
ಭಾಷೆಯ ಗಡಿ ಮೀರಿದ 'ಸೂರರೈ ಪೊಟ್ರು' ಸಿನಿಮಾ ಗೆಲುವು ಸಾಧಿಸಿತು. ಈ ಚಿತ್ರವನ್ನು ತೆಲುಗು, ಹಿಂದಿ ಹಾಗೂ ಕನ್ನಡದಲ್ಲಿ ನೋಡಿದ ಚಿತ್ರರಸಿಕರು ಪ್ರಶಂಸೆ ವ್ಯಕ್ತಪಡಿಸಿದರು. ಬಹಳ ವರ್ಷದ ನಂತರ ಒಳ್ಳೆಯ ಸಿನಿಮಾ ನೋಡಿದ್ವಿ ಎಂಬ ಅಭಿಪ್ರಾಯಗಳು ಕೇಳಿಬಂತು. ಕೊರೊನಾ ವರ್ಷದಲ್ಲೂ ಸಕ್ಸಸ್ ಕಂಡ ಸೂರ್ಯ ಈಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಮುಂದೆ ಓದಿ...

ವೆಟ್ರಿಮಾರನ್ ಜೊತೆ ಹೊಸ ಪ್ರಾಜೆಕ್ಟ್!
ರಾಷ್ಟ್ರ ಪ್ರಶಸ್ತಿ ನಿರ್ದೇಶಕ ವೆಟ್ರಿಮಾರನ್ ಜೊತೆ ಸೂರ್ಯ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಮೊದಲ ಸಲ ವೆಟ್ರಿಮಾರನ್ ಜೊತೆ ಸೂರ್ಯ ಸಿನಿಮಾ ಮಾಡ್ತಿದ್ದು, ಈ ಚಿತ್ರಕ್ಕೆ 'ವಾಡಿವಾಸಲ್' ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಭಾವನೆ ಹೆಚ್ಚಿಸಿದ ಸೂರ್ಯ
ತಮಿಳು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಪ್ರಕಾರ, ವೆಟ್ರಿಮಾರನ್ ಜೊತೆಗಿನ ಚಿತ್ರಕ್ಕಾಗಿ ಸೂರ್ಯ ಸುಮಾರು 35 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಸೂರರೈ ಪೊಟ್ರು ಚಿತ್ರಕ್ಕೆ ಹೋಲಿಸಿಕೊಂಡರೆ ಇದು ಬಹಳ ದೊಡ್ಡ ಸಂಭಾವನೆ ಎನ್ನಲಾಗಿದೆ.

'ಸೂರರೈ ಪೊಟ್ರು' ಚಿತ್ರಕ್ಕೆ ಸೂರ್ಯ ಪಡೆದ ಮೊತ್ತವೆಷ್ಟು?
ಸುಧಾ ಬಂಗೇರಾ ನಿರ್ದೇಶನದ ಸೂರರೈ ಪೊಟ್ರು ಸಿನಿಮಾದಲ್ಲಿ ನಟಿಸಲು ಸೂರ್ಯ ಅವರ 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿದೆ. ಈ ಚಿತ್ರದ ಒಟ್ಟು ಬಜೆಟ್ 45 ಕೋಟಿ. ಇದರಲ್ಲಿ ಸೂರ್ಯ ಅವರ ಸಂಭಾವನೆ 25 ಕೋಟಿ ಹಾಗೂ ಇನ್ನಿತರ ಖರ್ಚು 20 ಕೋಟಿಯಂತೆ. ಅಮೇಜಾನ್ ಪ್ರೈಮ್ 45 ಕೋಟಿ ನೀಡಿ ಸಿನಿಮಾ ಖರೀದಿ ಮಾಡಿತ್ತಂತೆ. ಸನ್ ಪಿಕ್ಚರ್ಸ್ ಅವರು 15 ಕೋಟಿ ನೀಡಿ ಸ್ಯಾಟ್‌ಲೈಟ್ ಹಕ್ಕು ಪಡೆದಿದ್ದರಂತೆ.
Recommended Video

2021ರಲ್ಲಿ ಆರಂಭವಾಗಬಹುದು?
ಗೌತಮ್ ವಾಸುದೇವನ್ ನಿರ್ದೇಶಿಸುತ್ತಿರುವ ವೆಬ್ ಸಿರೀಸ್ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಅದಾದ ಬಳಿಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ನಿರ್ದೇಶಕ ಪಾಂಡಿಯರಾಜನ್ ಜೊತೆ ಮುಂದಿನ ಸಿನಿಮಾ ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ವೆಟ್ರಿಮಾರನ್ ಜೊತೆಗಿನ ಚಿತ್ರ 2021ರ ಮಧ್ಯದ ವರ್ಷದಲ್ಲಿ ಸೆಟ್ಟೇರಬಹುದು.


Click it and Unblock the Notifications











