ಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿ

By ಫಿಲ್ಮ್ ಡೆಸ್ಕ್

ಖ್ಯಾತ ನಟ ಸರವಣನ್ ಶಿವಕುಮಾರ್ ಅಂದರೆ ಖಂಡಿತವಾಗಿಯೂ ಯಾರಿಗೂ ಗೊತ್ತಿಲ್ಲ. ಆದ್ರೆ ತಮಿಳು ನಟ ಸೂರ್ಯ ಅಂದರೆ ಕೇವಲ ಕಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಈ ಹೆಸರು ಚಿರಪರಿಚಿತ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಸೂರ್ಯ.

Recommended Video

ಚದುರಂಗದಲ್ಲಿ ಚಾಲೆಂಜ್ ಮಾಡಿಕೊಂಡ ಧ್ರುವ ಬ್ರದರ್ಸ್..! | Dhruva Sarja | Chiranjeevi Sarja

ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸೂರ್ಯ, ಸಿನಿಮಾ ಹೊರತಾಗಿ ಸರಳತೆ ಮತ್ತು ಸೌಮ್ಯ ಸ್ವಭಾವದ ಮೂಲಕ, ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ. ತಮಿಳಿನ ಖ್ಯಾತ ನಟ ಶಿವಕುಮರ್ ಪುತ್ರ ಸೂರ್ಯ. 1997ರಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಸೂರ್ಯ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ.

ಸೂರ್ಯ, ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಮೊದಲೇ ಖ್ಯಾತ ನಟಿಯಾಗಿ ಮೆರೆಯುತ್ತಿದ್ದ ಜ್ಯೋತಿಕಾ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಅಷ್ಟಕ್ಕೂ ಇವರ ಇವರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ? ಎಲ್ಲಿ? ತಮಿಳು ಬಾರದ ನಟಿಯನ್ನು ಪ್ರೀತಿಸಿ ಮದುವೆಯಾದ ಕಥೆ ಇಲ್ಲಿದೆ. ಮುಂದೆ ಓದಿ..

22ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಕಾಲಿಟ್ಟ ಸೂರ್ಯ

22ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಕಾಲಿಟ್ಟ ಸೂರ್ಯ

ಕಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಬೆಳೆದುನಿಂತಿರುವ ಸೂರ್ಯ ಮೊದಲು ಬಣ್ಣ ಹಚ್ಚಿದ್ದು, 22ನೇ ವಯಸ್ಸಿನಲ್ಲಿ. ನೆರಕ್ಕು ನೆರ್ ಸಿನಿಮಾ ಮೂಲಕ 1997ರಲ್ಲಿ ಸಿನಿಮಾರಂಗದ ಪಯಣ ಪ್ರಾರಂಭಿಸುತ್ತಾರೆ. ಮಣಿ ರತ್ನಂ ನಿರ್ಮಾಣದ ಸಿನಿಮಾ. ಮಣಿರತ್ನಂ, ಸರವಣನ್ ಶಿವಕುಮಾರ್ ಗೆ ಸೂರ್ಯ ಎಂದು ಹೆಸರಿಡುತ್ತಾರೆ. ಕೊನೆಗೆ ಸೂರ್ಯ ಹೆಸರಿನ ಮೂಲಕವೇ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸುತ್ತಾರೆ.

ಜ್ಯೋತಿಕಾ ಮೊದಲ ಭೇಟಿ

ಜ್ಯೋತಿಕಾ ಮೊದಲ ಭೇಟಿ

1999ರಲ್ಲಿ ನಟ ಸೂರ್ಯ ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ಸೆಟ್ ನಲ್ಲಿ ಮೊದಲ ಬಾರಿಗೆ ನಟಿ ಜೋತಿಕಾ ಅವರನ್ನು ಭೇಟಿಯಾಗುತ್ತಾರೆ. ಈ ಸಿನಿಮಾ ಸೂರ್ಯ ಅಭಿನಯದ 5ನೇ ಸಿನಿಮಾ. ಜ್ಯೋತಿಕಾಗಿ 3ನೇ ಸಿನಿಮಾ. ಆ ಸಿನಿಮಾ ಮಾಡುವಾಗ ಇಬ್ಬರು ಸಹ ಇನ್ನೂ ಸ್ಟಾರ್ ಆಗಿ ಹೊರಹೊಮ್ಮಲಿಲ್ಲ. ನಟಿ ಜ್ಯೋತಿಕಾ ಮುಂಬೈ ಮೂಲದವರಾಗಿದ್ದರಿಂದ ತಮಿಳಿಗೆ ಬರುತ್ತಿರಲಿಲ್ಲ. ಜ್ಯೋತಿಕಾ ಕಷ್ಟಪಟ್ಟು ತಮಿಳು ಕಲಿಯುತ್ತಿದ್ದರು. ಜ್ಯೋತಿಕಾ ಆಗಿನ್ನು ತಮಿಳು ಕಲಿಯುತ್ತಿದ್ದರೂ, ಸ್ಪಷ್ಟವಾಗಿ ಡೈಲಾಗ್ ಹೇಳುವ ರೀತಿಗೆ ಸೂರ್ಯ ಫಿದಾ ಆಗಿದ್ದರು.

ಸೂರ್ಯ-ಜ್ಯೋತಿಕಾ 2ನೇ ಭೇಟಿ

ಸೂರ್ಯ-ಜ್ಯೋತಿಕಾ 2ನೇ ಭೇಟಿ

ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ನಂತರ ಜ್ಯೋತಿಕಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ. ತಮಿಳು ಚಿತ್ರರಂಗದಲ್ಲಿ ಜ್ಯೋತಿಕಾ ಸ್ಟಾರ್ ನಟಿಯಾಗಿ ಗುರುತಿಕೊಳ್ಳುತ್ತಾರೆ. ಜ್ಯೋತಿಕಾ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೂರ್ಯ ಹಾದು ಹೋಗುತ್ತಾರೆ. ಆಗ ಜ್ಯೋತಿಕಾ ಸಹಚರರನ್ನು ಕಳುಹಿಸಿ ಸೂರ್ಯರನ್ನು ಕರೆಸಿಕೊಳ್ಳುತ್ತಾರೆ. ನಂತರ ಇಬ್ಬರು ಉತ್ತಮ ಸ್ನೇಹಿತರಾಗುತ್ತಾರೆ. ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗುತ್ತೆ.

ಸೂರ್ಯನೆ ಹೀರೋ ಆಗಬೇಕು ಎಂದಿದ್ದರು ಜ್ಯೋತಿಕಾ

ಸೂರ್ಯನೆ ಹೀರೋ ಆಗಬೇಕು ಎಂದಿದ್ದರು ಜ್ಯೋತಿಕಾ

ಇಬ್ಬರು ಸ್ನೇಹಿತರಾದ ನಂತರ ಸೂರ್ಯ, ಜ್ಯೋತಿಕಾರನ್ನು ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ ಸೂರ್ಯ ಆಪ್ತ ಸ್ನೇಹಿತರ ಬಳಗಕ್ಕೆ ಜ್ಯೋತಿಕಾರನ್ನು ಪರಿಚಯ ಮಾಡಿಕೊಡುತ್ತಾರೆ. ಅದೇ ಸಮಯದಲ್ಲಿ ಸೂರ್ಯ ಅಭಿನಯದ ನಂದ ಸಿನಿಮಾ ಕೂಡ ರಿಲೀಸ್ ಆಗುತ್ತೆ. ಆ ಸಮಯದಲ್ಲಿ ಜ್ಯೋತಿಕಾ ಮೊದಲ ದಿನ ಮೊದಲ ಶೋ ವೀಕ್ಷಿಸಿ ಮೆಚ್ಚಿಕೊಳ್ಳುತ್ತಾರೆ. ಮುಂದಿನ ಸಿನಿಮಾಗೆ ಸೂರ್ಯ ಅವರೆ ಹೀರೋ ಆಗಬೇಕು ಎಂದು ನಿರ್ದೇಶಕ ಗೌತಮ್ ಮೆನನ್ ಅವರಿಗೆ ತಿಳಿಸುತ್ತಾರೆ.

ಕಾಖಾ ಕಾಖಾ ಸಿನಿಮಾದಲ್ಲಿ 3ನೇ ಬಾರಿ ಒಟ್ಟಿಗೆ ಅಭಿನಯ

ಕಾಖಾ ಕಾಖಾ ಸಿನಿಮಾದಲ್ಲಿ 3ನೇ ಬಾರಿ ಒಟ್ಟಿಗೆ ಅಭಿನಯ

ನಟಿ ಜ್ಯೋತಿಕಾ ಆಗಲೆ ದೊಡ್ಡ ಸ್ಟಾರ್ ಆಗಿ ಗುರುತಿಕೊಂಡಿದ್ದ ಕಾರಣ ಜ್ಯೋತಿಕಾ ಮಾತನ್ನು ನಿರ್ದೇಶಕರು ತಳ್ಳಿಹಾಕಲಿಲ್ಲ. ಕಾಖಾ ಕಾಖಾ ಸಿನಿಮಾದಲ್ಲಿ ಮತ್ತೆ ಜ್ಯೋತಿಕಾ ಮತ್ತು ಸೂರ್ಯ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. 2003ರಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸುಗಳಿಸುತ್ತೆ.

ಇಬ್ಬರ ಬಗ್ಗೆ ಗಾಸಿಪ್ ವೈರಲ್

ಇಬ್ಬರ ಬಗ್ಗೆ ಗಾಸಿಪ್ ವೈರಲ್

ಇಬ್ಬರು ಒಟ್ಟಿಗೆ 3 ಸಿನಿಮಾಗಳನ್ನು ಮಾಡುತ್ತಿದ್ದಂತೆ ಇಬ್ಬರ ನಡುವೆ ಗಾಸಿಪ್ ಹರಿದಾಡಲು ಪ್ರಾರಂಭವಾಯಿತು. ಇಬ್ಬರಿಗೂ ನಿಶ್ಚಿತಾರ್ಥವಾಗಿದೆ ಎನ್ನುವ ಸುದ್ದಿಗಳು ಹರಿದಾಡಲು ಪ್ರಾರಂಭವಾಯಿತು. ನಟ ಸೂರ್ಯ ಮನೆಯವರಿಗೆ ಮನವರಿಕೆ ಮಾಡಿಕೊಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಸೂರ್ಯ ಮನೆಯವರು ಇಬ್ಬರ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅನೇಕ ಅಡೆತಡೆಗಳ ನಡುವೆಯೂ ಇಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಯಿತು.

2006ರಲ್ಲಿ ಮದುವೆ

2006ರಲ್ಲಿ ಮದುವೆ

ಕೊನೆಗೆ ಇಬ್ಬರು 2006 ಸೆಪ್ಟಂಬರ್ ನಲ್ಲಿ ಹಸೆಮಣೆ ಏರುತ್ತಾರೆ. ಚೆನೈನ ಪಾರ್ಕ್ ಶರಟನ್ ಹೋಟೆಲ್ ನಲ್ಲಿ ಇಬ್ಬರು ಹಸೆಮಣೆ ಏರುತ್ತಾರೆ. ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಬ್ಬರ ಮದುವೆಗೆ ಚಿತ್ರರಂಗದ ಗಣ್ಯರು ಬರದಿದ್ದರು, ಕೆಲವು ರಾಜಕೀಯ ಗಣ್ಯರು ಹಾಜರಾಗಿ ಆಶೀರ್ವಾದ ಮಾಡುತ್ತಾರೆ.

ಮದುವೆ ನಂತರ ನಟನೆಗೆ ಗುಡ್ ಬೈ ಹೇಳಿದ ಜ್ಯೋತಿಕಾ

ಮದುವೆ ನಂತರ ನಟನೆಗೆ ಗುಡ್ ಬೈ ಹೇಳಿದ ಜ್ಯೋತಿಕಾ

ಮದುವೆ ನಂತರ ಜ್ಯೋತಿಕಾ ಅಭಿನಯಕ್ಕೆ ಗುಡ್ ಬೈ ಹೇಳುತ್ತಾರೆ. ಮುಂಬೈನಿಂದ ನಂತರ ಚೆನ್ನೈಗೆ ಸ್ಥಳಾಂತರ ಆಗುತ್ತಾರೆ. ಇಬ್ಬರು ತಮಿಳಿನ ಖ್ಯಾತ ತಾರಾ ಜೋಡಿಯಾಗಿ, ಇತರರಿಗೆ ಮಾದರಿಯಾಗಿದೆ. ಈ ಮುದ್ದಾದ ಜೋಡಿಗೆ ದಿಯಾ ಮತ್ತು ದೇವ್ ಇಬ್ಬರು ಮಕ್ಕಳಿದ್ದಾರೆ. ಸೂರ್ಯ ಸದ್ಯ ಸೂರರೈ ಪೊಟ್ರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ನಂತರ ಜ್ಯೋತಿಕಾ 2015ರಲ್ಲಿ 36 ವಯದಿನಿಲೆ ಸಿನಿಮಾ ಮೂಲಕ ಮತ್ತೆ ಬಣ್ಣಹಚ್ಚುತ್ತಾರೆ. ಸದ್ಯ ಜ್ಯೋತಿಕಾ ಪೊನ್ಮಗಲ್ ವಂಧಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Tamil Actor Surya and Jyothika interesting love story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X