ಕಾಲೇಜು ಯುವತಿ ಮೇಲೆ ಅತ್ಯಾಚಾರ, ಹಿರಿಯ ನಟನ ಮಗ ಬಂಧನ
ತಮಿಳು ಚಿತ್ರರಂಗದ ಹಿರಿಯ ನಟ ಸೂರ್ಯಕಾಂತ್ ಅವರ ಮಗ ತಮಿಳು ನಟನನ್ನು ತಿರುವೊಟ್ಟಿಯುರ್ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಯುವತಿ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ ಆರೋಪವನ್ನು ಸೂರ್ಯಕಾಂತ್ ಅವರ ಮಗ ನಟ ವಿಜಯ್ ಹರೀಶ್ ಹೊತ್ತುಕೊಂಡಿದ್ದಾರೆ.
Recommended Video
25ವರ್ಷ ವಯಸ್ಸಿನ ವಿಜಯ್ ಹರೀಶ್ ಅಣ್ಣಾನಗರ್ ನಿವಾಸಿಯಾಗಿದ್ದು, ಕಾಲೇಜು ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಆನ್ ಲೈನ್ ನಲ್ಲಿ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಅಪ್ಲೋಡ್ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಚೆನ್ನೈ ಉತ್ತರಭಾಗದ ನಿವಾಸಿ 20 ವರ್ಷ ವಯಸ್ಸಿನ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶುಕ್ರವಾರದಂದು ವಿಜಯ್ ಹರೀಶ್ ನನ್ನು ಬಂಧಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಮೊದಲಿಗೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿರುಗಂಬಾಕ್ಕಾಂನಲ್ಲಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದಾಗ ಪರಸ್ಪರ ಪರಿಚಯವಾಗಿತ್ತು. ಆದರೆ, ಪರಿಚಯದ ಲಾಭ ಪಡೆದು, ನನಗೆ ಅರಿವಿಲ್ಲದ್ದಂತೆ ತಂಪು ಪಾನೀಯದಲ್ಲಿ ಮತ್ತು ಬರುವ ಪುಡಿಯನ್ನು ಬೆರೆಸಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ, ರೇಪ್ ಮಾಡಿದ್ದನ್ನು ವಿಡಿಯೋ ಮಾಡಿಕೊಂಡಿದ್ದ, ನಂತರ ವಿಡಿಯೋ ನೋಡಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಯುವತಿ ಹೇಳಿಕೊಂಡಿದ್ದಾಳೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 328,354ಬಿ, 354 ಸಿ, 376 ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಠಾಣೆ ಪೊಲೀಸರು ಎಫ್ಐಆರ್ ಹಾಕಿದ್ದರು. ನಂತರ ಬಂಧಿತ ವಿಜಯ್ ಹರೀಶ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉದಯೋನ್ಮುಖ ನಟ ಎನಿಸಿಕೊಂಡಿದ್ದ ವಿಜಯ್ ಹರೀಶ್, ನಾಂಗುಲುಂ ನಲ್ಲವಾಂಗಥಾನ್ ಚಿತ್ರದಲ್ಲಿ ನಟಿಸಿದ್ದರು. ವಿಜಯ್ ತಂದೆ ಸೂರ್ಯಕಾಂತ್ ಹಲವಾರು ಚಿತ್ರಗಳಲ್ಲಿ ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿದ್ದು, ಎಐಎಡಿಎಂಕೆ ಪಕ್ಷದ ಮುಖಂಡರಾಗಿದ್ದಾರೆ.


Click it and Unblock the Notifications











