ತಮಿಳಿಗೆ ರಿಮೇಕ್ ಆಗುತ್ತಿದೆ 'ಆರ್ಟಿಕಲ್-15': ಆಯುಷ್ಮಾನ್ ಪಾತ್ರದಲ್ಲಿ ಉದಯನಿಧಿ ಸ್ಟಾಲಿನ್

ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನ ಅಭಿನಯದ 'ಆರ್ಟಿಕಲ್-15' ಸಿನಿಮಾ ಅತ್ಯಂತ ಯಶಸ್ವಿ ಸಿನಿಮಾವಾಗಿ ಹೊರಹೊಮ್ಮಿತ್ತು. ಕಳೆದ ವರ್ಷ ಅಂದರೆ 2019ರಲ್ಲಿ ತೆರೆಗೆ ಬಂದ ಈ ಸಿನಿಮಾ ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರವಾದ ಸಿನಿಮಾವಾಗಿದೆ. ಈ ಸಿನಿಮಾ ನಟ ಆಯುಷ್ಮಾನ್ ವೃತ್ತಿ ಬದುಕನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಸಿನಿಮಾವಾಗಿದೆ.

ಈ ಸಿನಿಮಾವೀಗ ದಕ್ಷಿಣ ಭಾರತೀಯ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹೌದು, ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ 'ಆರ್ಟಿಕಲ್-15' ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಅನೇಕ ತಿಂಗಳಿಂದ ಹರಿದಾಡುತ್ತಿತ್ತು. ಆದರೀಗ ಈ ಸುದ್ದಿ ಅಧಿಕೃತವಾಗಿದ್ದು, ಈ ಬಗ್ಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ಆಯುಷ್ಮಾನ್ ಪಾತ್ರದಲ್ಲಿ ಸ್ಟಾಲಿನ್

ಆಯುಷ್ಮಾನ್ ಪಾತ್ರದಲ್ಲಿ ಸ್ಟಾಲಿನ್

'ಆರ್ಟಿಕಲ್-15' ಸಿನಿಮಾದಲ್ಲಿ ಪೊಲೀಸ್ ಆಗಿ ಅಭಿನಯಿಸಿದ್ದ ಆಯುಷ್ಮಾನ್ ಪಾತ್ರಕ್ಕೆ ಅಭಿಮಾನಿಗಳು ಮನ ಸೋತಿದ್ದರು. ಆಯುಷ್ಮಾನ್ ಅದ್ಭುತ ಅಭಿನಯಕ್ಕೆ ಅತ್ಯುತ್ತಮ ನಟ ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿಯೂ ಲಭಿಸಿದೆ. ಈ ಪಾತ್ರವನ್ನು ತಮಿಳಿನಲ್ಲಿ ನಟ ಉದಯನಿಧಿ ಸ್ಟಾಲಿನ್ ನಿರ್ವಹಿಸುತ್ತಿದ್ದಾರೆ.

ತಮಿಳು ರಿಮೇಕ್ ಬಗ್ಗೆ ಮಾಹಿತಿ ನೀಡಿದ ಬೋನಿ ಕಪೂರ್

ತಮಿಳು ರಿಮೇಕ್ ಬಗ್ಗೆ ಮಾಹಿತಿ ನೀಡಿದ ಬೋನಿ ಕಪೂರ್

ತಮಿಳು ರಿಮೇಕ್ ಬಗ್ಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 'ಆರ್ಟಿಕಲ್-15' ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದ್ದು, ಉದಯನಿಧಿ ಸ್ಟಾಲಿನ್ ಅಭಿನಸುತ್ತಿದ್ದಾರೆ. ಅರುಣ್ ರಾಜ್ ಕಾಮ್ರಾಜ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಈ ಸಿನಿಮಾವನ್ನು ಜೀ ಸ್ಟೂಡಿಯೋಸ್ ಮತ್ತು ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ" ಎಂದು ಟ್ವೀಟ್ ಮಾಡುವ ಮೂಲಕ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಇನ್ನೂ 'ಈ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ' ಎಂದು ನಟ ಸ್ಟಾಲಿನ್ ಸಹ ಟ್ವೀಟ್ ಮಾಡಿದ್ದಾರೆ.

ಈ ಸಿನಿಮಾ ಮಾಡಲು ಉತ್ಸುಕರಾಗಿದ್ದರು ಧನುಷ್

ಈ ಸಿನಿಮಾ ಮಾಡಲು ಉತ್ಸುಕರಾಗಿದ್ದರು ಧನುಷ್

'ಆರ್ಟಿಕಲ್-15' ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ನಟ ಧನುಷ್ ಉತ್ಸುಕರಾಗಿದ್ದರು. ಈ ಸಿನಿಮಾ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಕಾಲಿವುಡ್ ನಲ್ಲಿ ಸಿನಿಮಾದ ಹಕ್ಕು ಪಡೆಯಲು ಅನೇಕರು ಪ್ರಯತ್ನಿಸುತ್ತಿದ್ದರು. ನಟ ಧನುಷ್ ಶೀಘ್ರದಲ್ಲೇ ಸಿನಿಮಾದ ಹಕ್ಕು ಪಡೆಯಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೀಗ ಧನುಷ್ ಬದಲಿಗೆ ಉದಯನಿಧಿ ಸ್ಟಾಲಿನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಆರ್ಟಿಕಲ್-15' ಸಿನಿಮಾದ ಬಗ್ಗೆ

'ಆರ್ಟಿಕಲ್-15' ಸಿನಿಮಾದ ಬಗ್ಗೆ

ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಸುತ್ತಲಿನ ಘಟನೆಯ ಬಗ್ಗೆ ಇರುವ ಸಿನಿಮಾವಾಗಿದೆ. ಜೊತೆಗೆ ಜಾತಿ ಮತ್ತು ಲಿಂಗತಾರತಮ್ಯದ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ತಮಿಳಿನಲ್ಲಿ ಹೇಗೆ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

More from Filmibeat

English summary
Tamil Actor Udhayanidhi Stalin star in Tamil remake of Article-15 movie. Bollywood Producer Boney Kapoor confirm this news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X