For Quick Alerts
  ALLOW NOTIFICATIONS  
  For Daily Alerts

  ವಿಜಯ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ವಾರ್: ಕೊರೊನಾ ನಡುವೆಯೂ ಟ್ವಿಟ್ಟರ್ ನಲ್ಲಿ ಟ್ರೆಂಡ್

  |

  ಚಿತ್ರರಂಗದಲ್ಲಿ ಅಭಿಮಾನಿಗಳ ವಾರ್ ಸರ್ವೆಸಾಮಾನ್ಯ. ಸ್ಟಾರ್ ನಟರ ಫ್ಯಾನ್ಸ್ ಆಗಾಗ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ಫ್ಯಾನ್ಸ್ ವಾರ್ ಒಂದು ಚಿತ್ರರಂಗದ ಒಳಗೆ ಸ್ಟಾರ್ ನಟರ ಅಭಿಮಾನಿಗಳ ಮಧ್ಯೆ ನಡೆಯುತ್ತೆ. ಆದರೀಗ ವಾರ್ ದಕ್ಷಿಣ ಭಾರತದ ಎರಡು ದೊಡ್ಡ ಚಿತ್ರರಂಗದ ಸ್ಟಾರ್ ನಟರ ಅಭಿಮಾನಿಗಳ ನಡುವೆ ಶುರುವಾಗಿರುವುದು ಅಚ್ಚರಿ ಮೂಡಿಸಿದೆ.

  ಹೌದು, ತಮಿಳಿನ ಖ್ಯಾತ ನಟ ವಿಜಯ್ ಮತ್ತು ತೆಲುಗಿನ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ನಟ ವಿಜಯ್ ಅಭಿಮಾನಿಗಳು ಮತ್ತು ತಲಾ ಅಜಿತ್ ಅಭಿಮಾನಿಗಳ ನಡುವೆ ವಾರ್ ಪ್ರಾರಂಭವಾಗಿತ್ತು.

  ಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗಚಿರಂಜೀವಿ ಸಿನಿಮಾದಿಂದ ಹೊರಬಂದ ಮಹೇಶ್ ಬಾಬು: ಅಸಲಿ ಕಾರಣ ಬಹಿರಂಗ

  ಆದರೀಗ ವಿಜಯ್ ಅಭಿಮಾನಿಗಳು ತೆಲುಗು ಸ್ಟಾರ್ ಮಹೇಶ್ ಬಾಬು ಫ್ಯಾನ್ಸ್ ಜೊತೆ ಕಿತ್ತಾಡಿಕೊಳ್ಳುತ್ತಿದ್ದಾರೆ. 'ರಿಮೇಕ್ ಸ್ಟಾರ್ ವಿಜಯ್' ಮತ್ತು 'ಡಮ್ಮಿ ಸ್ಟಾರ್ ಮಹೇಶ್ ಬಾಬು' ಎಂದು ಹ್ಯಾಶ್ ಟ್ಯಾಗ್ ಸೃಷ್ಟಿಸಿ ಇಬ್ಬರು ಅಭಿಮಾನಿಗಳು ಕೆಸರೆರಚಾಟ ನಡೆಸುತ್ತ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಅಂದ್ಹಾಗೆ ಇಬ್ಬರು ಅಭಿಮಾನಿಗಳು ದಿಢೀರ್ ರೊಚ್ಚಿಗೇಳಲು ಕಾರಣವಾಗಿದ್ದು ವಿಜಯ್ ಅಭಿನಯದ ಸೂಪರ್ ಹಿಟ್ ಗಿಲ್ಲಿ ಸಿನಿಮಾದ ಪ್ರಸಾರ. ಮುಂದೆ ಓದಿ..

  ಕೊರೊನಾ ನಡುವೆ ಫ್ಯಾನ್ಸ್ ವಾರ್ ಟ್ರೆಂಡ್

  ಕೊರೊನಾ ನಡುವೆ ಫ್ಯಾನ್ಸ್ ವಾರ್ ಟ್ರೆಂಡ್

  ಸದ್ಯ ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಬಗ್ಗೆ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತಿವೆ. ಇದರ ನಡುವೆಯೂ ಅಭಿಮಾನಿಗಳ ಕಿತ್ತಾಟ ಜೋರಾಗಿದೆ. ಮಹೇಶ್ ಬಾಬು ಅಭಿಮಾನಿಗಳು #remakestarevijay ಎಂದು ಟ್ರೆಂಡ್ ಮಾಡಿದರೆ, ಇತ್ತ ವಿಜಯ್ ಅಭಿಮಾನಿಗಳು #dummystarmaheshbabau ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ.

  ಕಿತ್ತಾಟಕ್ಕೆ ಕಾರಣವೇನು?

  ಕಿತ್ತಾಟಕ್ಕೆ ಕಾರಣವೇನು?

  ಇತ್ತೀಚಿಗೆ ಕಿರುತೆರೆಯಲ್ಲಿ ದಳಪತಿ ವಿಜಯ್ ಅಭಿನಯದ ಗಿಲ್ಲಿ ಸಿನಿಮಾ ಪ್ರಸಾರವಾಗಿತ್ತು. ಅಂದ್ಹಾಗೆ ಗಿಲ್ಲಿ ಸಿನಿಮಾ ಮಹೇಶ್ ಬಾಬು ಅಭಿನಯದ ಒಕ್ಕಡು ಸಿನಿಮಾದ ರಿಮೇಕ್. ಸಿನಿಮಾ ಮುಗಿಯುವುದರೊಳಗೆ ವಿಜಯ್ ಅಭಿಮಾನಿಗಳು ಮಹೇಶ್ ಬಾಬು ಅಭಿನಯದ 'ಒಕ್ಕಡು' ಸಿನಿಮಾಗೆ ಹೋಲಿಕೆ ಮಾಡಿ ಮಹೇಶ್ ಬಾಬು ಅವರನ್ನು ಅಣಕಿಸಲು ಪ್ರಾರಂಭಿಸಿದ್ದಾರೆ.

  ವಿಜಯ್ ಗೆ ಇಲ್ಲ ಕೊರೊನಾ ಭಯ: 'ರಾಬರ್ಟ್' ರಿಲೀಸ್ ದಿನವೇ 'ಮಾಸ್ಟರ್' ಎಂಟ್ರಿ?ವಿಜಯ್ ಗೆ ಇಲ್ಲ ಕೊರೊನಾ ಭಯ: 'ರಾಬರ್ಟ್' ರಿಲೀಸ್ ದಿನವೇ 'ಮಾಸ್ಟರ್' ಎಂಟ್ರಿ?

  ಮಹೇಶ್ ಬಾಬು ಡಮ್ಮಿ ನಟ

  ಮಹೇಶ್ ಬಾಬು ಡಮ್ಮಿ ನಟ

  ಗಿಲ್ಲಿ ಸಿನಿಮಾಗೆ ಹೋಲಿಕೆ ಮಾಡಿ ವಿಜಯ್ ಅಭಿಮಾನಿಗಳು ಮಹೇಶ್ ಬಾಬು ಅವರನ್ನು ಡಮ್ಮಿ ನಟ ಎಂದು ಕಾಲೆಳೆಯುತ್ತಿದ್ದಾರೆ. ಜೊತೆಗೆ ಮಹೇಶ್ ಬಾಬು ವಿರುದ್ಧ ಸಾಕಷ್ಟು ಟ್ರೋಲ್ ಗಳನ್ನು ಮಾಡಿ ಪೋಸ್ಟ್ ಮಾಡಲು ಶುರು ಮಾಡಿದ್ದಾರೆ. ಮಹೇಶ್ ಬಾಬುಗಿಂತ ವಿಜಯ್ ಅದ್ಭುತ ನಟ ಎನ್ನುವ ತರಹೇವಾರಿ ಟ್ರೋಲ್ ಗಳನ್ನು ಮಾಡಿ ವಿಜಯ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಾರೆ.

  ರಿಮೇಕ್ ಸ್ಟಾರ್ ವಿಜಯ್

  ರಿಮೇಕ್ ಸ್ಟಾರ್ ವಿಜಯ್

  ವಿಜಯ್ ಅಭಿಮಾನಿಗಳು ಮಹೇಶ್ ಬಾಬು ಅವರನ್ನು ಅಣಕಿಸಿ ಟ್ವೀಟ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಇತ್ತ ಪ್ರಿನ್ಸ್ ಅಭಿಮಾನಿಗಳು ಸಹ ರೊಚ್ಚಿಗೆದ್ದಿದ್ದಾರೆ. ವಿಜಯ್ ಅಭಿಮಾನಿಗಳನ್ನು ತರಾಟೆಗೆ ತೆಗೆದಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ರಿಮೇಕ್ ಸ್ಟಾರ್ ವಿಜಯ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ.

  ವಿಜಯ್ ಭಿಕ್ಷೆ ಬೇಡಿ ಪಡೆದ ಸಿನಿಮಾಗಳು

  ವಿಜಯ್ ಭಿಕ್ಷೆ ಬೇಡಿ ಪಡೆದ ಸಿನಿಮಾಗಳು

  ದಳಪತಿ ವಿಜಯ್ ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟು ಕೂತಾಗ ಮಹೇಶ್ ಬಾಬು ಸಿನಿಮಾಗಳನ್ನು ರಿಮೇಕ್ ಮಾಡಿ ಗೆದ್ದಿದ್ದಾರೆ. ಅದರಲ್ಲು ಒಕ್ಕಡು ಮತ್ತು ಪೋಕಿರಿ ಸಿನಿಮಾಗಳನ್ನು ಭಿಕ್ಷೆ ಬೇಡಿ ಪಡೆದು ಮಾಡಿರುವ ಸಿನಿಮಾಗಳಾಗಿವೆ. ಅದೃಷ್ಟವಶಾತ್ ಸಿನಿಮಾ ಗೆದ್ದು ಸಕ್ಸಸ್ ಕಂಡಿದ್ದಾರೆ. ಎಂದು ಮಹೇಶ್ ಬಾಬು ಅಭಿಮಾನಿಗಳು ವಿಜಯ್ ಅಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

  ರಿಲೀಸ್ ಗೆ ರೆಡಿಯಾಗಿದೆ ಮಾಸ್ಟರ್

  ರಿಲೀಸ್ ಗೆ ರೆಡಿಯಾಗಿದೆ ಮಾಸ್ಟರ್

  ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಇಲ್ಲದಿದ್ದರೆ ಮಾಸ್ಟರ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೀಗ ರಿಲೀಸ್ ಮುಂದಕ್ಕೆ ಹೋಗಿದೆ. ಇತ್ತ ಮಹೇಶ್ ಸರಿಲೇರು ನೀಕೆವ್ವರು ಸಕ್ಸಸ್ ನಲ್ಲಿ ಇದ್ದಾರೆ. ಕೊಂಚ ಬ್ರೇಕ್ ಪಡೆದಿರುವ ಮಹೇಶ್ ಲಾಕ್ ಡೌನ್ ಮುಗಿಯುತ್ತಿದ್ದಂತೆ ಹೊಸ ಸಿನಿಮಾ ಪ್ರಾರಂಭಿಸುವ ಸಾಧ್ಯತೆ ಇದೆ.

  English summary
  Tamil Actor Vijay And Telugu Actor Mahesh Babu Fan war in Twitter. #RemakeStarVijay And #DummyStarMaheshBabu Trend On Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X