For Quick Alerts
  ALLOW NOTIFICATIONS  
  For Daily Alerts

  ಐಟಿ ವಿಚಾರಣೆ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳಿದ ನಟ ವಿಜಯ್

  |

  ಕಾಲಿವುಡ್ ಸ್ಟಾರ್ ನಟ ಇಳಯದಳಪತಿ ವಿಜಯ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಐಟಿ ಅಧಿಕಾರಿಗಳು ನಟ ವಿಜಯ್ ವಿಚಾರಣೆ ಮಾಡುತ್ತಿದ್ದರು. ಮನೆ ಮತ್ತು ಆಫೀಸ್ ಸೇರಿದಂತೆ ಸಾಕಷ್ಟು ಕಡೆ ಶೋಧ ಕಾರ್ಯನಡೆಸಿದ್ದ ಐಟಿ ಅಧಿಕಾರಿಗಳು ವಿಚಾರಣೆ ಮುಗಿಸಿದ್ದಾರೆ.

  ವಿಜಯ್ ಸದ್ಯ ಮಾಸ್ಟರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಸ್ಟರ್ ಸಿನಿಮಾ ಸದ್ಯ ತಮಿಳುನಾಡಿನ ನಯೆವೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ವಿಚಾರಣೆಯ ನಂತರ ವಿಜಯ್ ಮತ್ತೆ ಚಿತ್ರೀಕರಣಕ್ಕೆ ಮರಳಿರುವ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಅನ್ನು ಚಿತ್ರೀಕರಣ ಸೆಟ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದೆ.ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ

   ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ ತೆರಿಗೆ ವಂಚನೆ: ನಟ ವಿಜಯ್ ಸಿನಿಮಾದ ಫೈನಾನ್ಶಿಯರ್ ನಿಂದ 77 ಕೋಟಿ ವಶ

  ಮೂರು ದಿನಗಳ ಹಿಂದೆ ಐಟಿ ಅಧಿಕಾರಿಗಳು ನೇರವಾಗಿ ಮಾಸ್ಟರ್ ಸೆಟ್ ಗೆ ಭೇಟಿ ನೀಡಿ ವಿಜಯ್ ವಿಚಾರಣೆ ಮಾಡಿದ್ದರು. ವಿಜಯ್ ಸೆಟ್ ನಿಂದ ನಿರ್ಗಮಿಸಿದ ನಂತರ ಚಿತ್ರತಂಡ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು. ಆದರೆ ಮಾರನೇ ದಿನ ಮತ್ತೆ ವಿಜಯ್ ಸೇತುಪತಿ ಮತ್ತು ಉಳಿದ ಕಲಾವಿದರೊಂದಿಗೆ ಚಿತ್ರೀಕಣ ಮುಂದುವರೆಸಿತ್ತು ಚಿತ್ರತಂಡ. ಈಗ ವಿಜಯ್ ಕೂಡ ಭಾಗಿಯಾಗಿದ್ದಾರೆ.

  ನಟ ವಿಜಯ್ ಐಟಿ ವಿಚಾರಣೆಯಲ್ಲಿ ಇದ್ದರೆ ಇತ್ತ ತಮಿಳುನಾಡು ಬಿಜೆಪಿ ಅಭ್ಯರ್ಥಿಗಳು ಚಿತ್ರತಂಡ ವಿರುದ್ಧ ಪ್ರತಿಭಟನೆಗೆ ಇಳಿದ್ದರು. ಕಲ್ಲಿದ್ದಲು ಗಣಿಕಾರಿಕೆ ಅವರಣದಲ್ಲಿ ಚಿತ್ರಕ್ಕೆ ಅನುಮತಿ ನೀಡಿದ ಕಾರಣ ಎನ್.ಎಲ್.ಸಿ ಮತ್ತು ಚಿತ್ರತಂಡದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿರುವ ಚಿತ್ರತಂಡ ಸಧ್ಯದಲ್ಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಲಿದ್ದಾರೆ.

  ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಮಿಳಿನ ಖ್ಯಾತ ನಟ ವಿಜಯ್ ಮತ್ತು ಬಿಗಿಲ್ ಚಿತ್ರತಂಡದ ಹಣಕಾಸುದಾರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಚೆನ್ನೈ ಹಾಗೂ ಮಧುರೈ ಸೇರಿದಂತೆ ಸುತ್ತಮುತ್ತ ಒಟ್ಟು 38 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು ಒಟ್ಟು 77 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  English summary
  After IT Raid Tamil Actor Vijay back to shooting. Actor Vijay is busy in Master film shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X