ಇನ್ಸ್ಟಾಗ್ರಾಮ್‌ನಲ್ಲಿ ವೇಗವಾಗಿ ಹತ್ತು ಲಕ್ಷ ಫಾಲೋವರ್ಸ್ ಪಡೆದವರು; ಈ ಇಬ್ಬರನ್ನು ಹಿಂದಿಕ್ಕುವಲ್ಲಿ ವಿಜಯ್ ವಿಫಲ!

ನಿನ್ನೆ ( ಏಪ್ರಿಲ್ 2 ) ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಸಾಮಾಜಿಕ ಜಾಲತಾಣದ ಬಹುಮುಖ್ಯ ಭಾಗವಾದ ಇನ್ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ತಮ್ಮ ಅಧಿಕೃತ ಖಾತೆಯನ್ನು ತೆರೆದರು. ಈಗಿನ ಇಂಟರ್‌ನೆಟ್ ಯುಗದಲ್ಲಿ ಸಾಮಾಜಿಕ ಜಾಲತಾಣದ ಬಹು ಮುಖ್ಯದ್ದಾಗಿದ್ದು, ಎಲ್ಲಾ ಕ್ಷೇತ್ರದವರೂ ಸಹ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ತಮ್ಮ ತಮ್ಮ ದಿನನಿತ್ಯದ ಅಪ್‌ಡೇಟ್ ಹಂಚಿಕೊಳ್ತಾ ಇರುತ್ತಾರೆ.

ಇನ್ನು ಸಿನಿಮಾ ಕ್ಷೇತ್ರದ ನಟ - ನಟಿಯರಂತೂ ಈ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಕಡ್ಡಾಯವಾಗಿ ಖಾತೆಗಳನ್ನು ಹೊಂದಿರಲೇಬೇಕು ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದೇ ಹೇಳಬಹುದು. ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಿ ತಮ್ಮ ಬಗೆಗಿನ ಮಾಹಿತಿಗಳನ್ನು ಹಂಚಿಕೊಳ್ಳಲಾಗದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿಗಳನ್ನು ಸುಲಭವಾಗಿ ತಲುಪಿಸಬಹುದಾಗಿದೆ.

Tamil actor Vijay becomes the 3rd person in the world to have fastest 1 million instagram followers

ಹೀಗಾಗಿ ವಿವಿಧ ಚಿತ್ರರಂಗಗಳ ಹಲವಾರು ನಟ ಹಾಗೂ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಸಕ್ರಿಯರಾಗಿದ್ದಾರೆ. ಆದರೆ ತಮಿಳು ನಟ ವಿಜಯ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ತೆರೆದಿರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು. ಇತರೆ ನಟರ ಅಭಿಮಾನಿಗಳು ತಮ್ಮ ನಟರು ಸಾಮಾಜಿಕ ಜಾಲತಾದಲ್ಲಿ ಹಂಚಿಕೊಳ್ಳುತ್ತಿದ್ದ ಅಪ್‌ಡೇಟ್‌ಗಳನ್ನು ಕಂಡು ತಮ್ಮ ನಟನೂ ಸಹ ಸಾಮಾಜಿಕ ಜಾಲತಾಣಕ್ಕೆ ಬರಬೇಕು ಎಂದು ಹಲವು ದಿನಗಳಿಂದ ಕೇಳಿಕೊಳ್ಳುತ್ತಿದ್ದರು.

ಇನ್ನು ಈಗ ನಟ ವಿಜಯ್ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಇನ್ನು ಮುಂದೆ ತಮ್ಮ ನಟನ ಬಗ್ಗೆ ಸುಲಭವಾಗಿ ಅಪ್‌ಡೇಟ್ ಪಡೆದುಕೊಳ್ಳಬಹುದು ಎಂದು ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ವಿಜಯ್ ಇನ್ಸ್ಟಾಗ್ರಾಮ್ ಖಾತೆ ತೆರೆಯುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿ ಖುಷಿ ಕೊಡುವುದು ಮಾತ್ರವಲ್ಲದೇ ವಿಶ್ವ ದಾಖಲೆಯನ್ನೂ ಸಹ ನಿರ್ಮಿಸಿದ್ದಾರೆ. ಹೌದು, ಇನ್ಸ್ಟಾಗ್ರಾಮ್ ಖಾತೆ ತೆರೆದ ಬಳಿಕ ಅತಿ ವೇಗವಾಗಿ ಹತ್ತು ಲಕ್ಷ ಫಾಲೋವರ್ಸ್‌ಗಳನ್ನು ಪಡೆದ ಭಾರತದ ನಟ ಎನಿಸಿಕೊಂಡಿದ್ದಾರೆ.

Tamil actor Vijay becomes the 3rd person in the world to have fastest 1 million instagram followers

ಅಲ್ಲದೇ ಅತಿ ವೇಗವಾಗಿ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳಿಸಿದ ವಿಶ್ವದ ಮೂರನೇ ವ್ಯಕ್ತಿ ಎಂಬ ದಾಖಲೆಯನ್ನೂ ಸಹ ವಿಜಯ್ ಬರೆದಿದ್ದಾರೆ. ವಿಜಯ್ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ ಎಂಬ ವಿಷಯ ಕಾಡ್ಗಿಚ್ಚಿನಂತೆ ಪಸರಿಸಿದ್ದು, ವಿಜಯ್ ಅಭಿಮಾನಿಗಳು, ಸಿನಿ ರಸಿಕರು ಹಾಗೂ ಸಿನಿಮಾ ಮಂದಿ ವಿಜಯ್ ಖಾತೆಯನ್ನು ಅನುಸರಿಸಿದ್ದಾರೆ. ಪರಿಣಾಮ ಕೇವಲ 97 ನಿಮಿಷಗಳಲ್ಲಿ ವಿಜಯ್ ಇನ್ಸ್ಟಾಗ್ರಾಮ್ ಖಾತೆ ಹತ್ತು ಲಕ್ಷ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ದರೆ ಇನ್ಸ್ಟಾಗ್ರಾಮ್ ಇತಿಹಾಸದಲ್ಲಿ ಅತಿ ವೇಗವಾಗಿ ಹತ್ತು ಲಕ್ಷ ಫಾಲೋವರ್ಸ್ ಪಡೆದ ವಿಶ್ವದ ನಾಲ್ಕು ಜನರ ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ಬಿಟಿಎಸ್ ವಿ - 43 ನಿಮಿಷಗಳಲ್ಲಿ

2. ಏಂಜಲೀನ್ ಜೋಲಿ - 59 ನಿಮಿಷಗಳಲ್ಲಿ

3. ದಳಪತಿ ವಿಜಯ್ - 97 ನಿಮಿಷಗಳಲ್ಲಿ

4. ಮೂನ್ ಟೆ ಇಲ್ - 105 ನಿಮಿಷಗಳಲ್ಲಿ

ಇನ್ಸ್ಟಾಗ್ರಾಮ್‌ನಲ್ಲಿ ಅತಿ ವೇಗವಾಗಿ ಹತ್ತು ಲಕ್ಷ ಲೈಕ್ ಪಡೆದ ಭಾರತೀಯ ನಟರ ಪಟ್ಟಿಯಲ್ಲಿ ಯಶ್ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಯಶ್ ತನ್ನ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜತೆ ದೀಪಾವಳಿ ಆಚರಿಸುತ್ತಿರುವ ಫೋಟೊ ಅತಿ ವೇಗವಾಗಿ ಹತ್ತು ಲಕ್ಷ ಮೆಚ್ಚುಗೆಗಳನ್ನು ಪಡೆದುಕೊಂಡ ಭಾರತದ ಇನ್ಸ್ಟಾಗ್ರಾಮ್ ಪೋಸ್ಟ್ ಎನಿಸಿಕೊಂಡಿದೆ. ಈ ಪೋಸ್ಟ್ 49 ನಿಮಿಷಗಳಲ್ಲಿ ಹತ್ತು ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಇನ್ನುಳಿದಂತೆ ಅಲ್ಲು ಅರ್ಜುನ್ ಮಾಡಿದ್ದ ತನ್ನ ಫೋಟೊವೊಂದರ ಪೋಸ್ಟ್‌ಗೆ 69 ನಿಮಿಷಗಳಲ್ಲಿ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಲೈಕ್ಸ್ ಬಂದಿದ್ದವು. ವಿಜಯ್ ದೇವರಕೊಂಡ ಹಂಚಿಕೊಂಡಿದ್ದ ನಾಯಿ ಜತೆಗಿನ ಫೋಟೊಗೆ 94 ನಿಮಿಷಗಳಲ್ಲಿ ಹತ್ತು ಲಕ್ಷ ಲೈಕ್ಸ್ ಬಂದಿತ್ತು ಹಾಗೂ ವಿಜಯ್ ಮೊದಲ ಪೋಸ್ಟ್‌ಗೆ 104 ನಿಮಿಷಗಳಲ್ಲಿ ಹತ್ತು ಲಕ್ಷ ಲೈಕ್ಸ್ ಬಂದಿವೆ.

More from Filmibeat

English summary
Tamil actor Vijay becomes the 3rd person in the world to have fastest 1 million instagram followers. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X