For Quick Alerts
  ALLOW NOTIFICATIONS  
  For Daily Alerts

  ಚೆನ್ನೈನಲ್ಲಿ ದುಬಾರಿ ಮನೆ ಖರೀದಿಸಿದ ತಮಿಳು ನಟ ವಿಜಯ್!

  |

  ತಮಿಳು ನಟ ವಿಜಯ್ 'ಬೀಸ್ಟ್' ಸಿನಿಮಾದ ಬಳಿಕ, 'ವಾರಿಸು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ದಿಲ್​ ರಾಜು ನಿರ್ಮಾಣ ಮತ್ತು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಹೈದಾರಾಬಾದ್​ನಲ್ಲಿ ನಡೆಯುತ್ತಿದೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

  ವಿಜಯ್ ಕಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತೀಯ ಟಾಪ್ ನಟರ ಪಟ್ಟಿಯಲ್ಲಿ ವಿಜಯ್‌ಗೆ ಮೊದಲ ಸ್ಥಾನ ಸಿಕ್ಕಿತ್ತು. ಈಗ ಮತ್ತೊಂದು ಹೊಸ ಸುದ್ದಿ ಹೊರ ಬಂದಿದೆ. ವಿಜಯ್ ಇತ್ತೀಚೆಗಷ್ಟೇ ದುಬಾರಿ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

  ದಳಪತಿ ವಿಜಯ್‌ ಅವರಲ್ಲಿ ನನಗೆ ಈ ವಿಷಯ ತುಂಬಾ ಇಷ್ಟ ಎಂದು ಹೊಗಳದ ಚಿಯಾನ್ ವಿಕ್ರಮ್!ದಳಪತಿ ವಿಜಯ್‌ ಅವರಲ್ಲಿ ನನಗೆ ಈ ವಿಷಯ ತುಂಬಾ ಇಷ್ಟ ಎಂದು ಹೊಗಳದ ಚಿಯಾನ್ ವಿಕ್ರಮ್!

  ಸದ್ಯ ವಿಜಯ್ ಅವರು ತಮ್ಮ ಕುಟುಂಬದೊಂದಿಗೆ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನೆಲೆಸಿದ್ದಾರೆ. ಇದೀಗ ಅಲ್ಲಿಂದ ಹೊಸ ಮನೆಗೆ ತೆರಳಲಿದ್ದಾರೆ ಎನ್ನುಲಾಗುತ್ತಿದೆ. ಈಗ ಇರುವ ಮನೆಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆಯಂತೆ. ಹಾಗಾಗಿ ಮನೆ ಬದಲಿಸುವ ನಿರ್ಧಾರ ಮಾಡಿದ್ದಾರೆ.

  ವಿಜಯ್ ಚೆನ್ನೈನಲ್ಲಿ ದುಬಾರಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಒಟ್ಟು ಮೌಲ್ಯ ರೂ. 35 ಕೋಟಿ ಎನ್ನಲಾಗಿದೆ. ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲು ಹಾಗೂ ಪ್ರಶಾಂತವಾದ ವಾತಾವರಣಕ್ಕಾಗಿ ಹೊಸ ಮನೆ ಖರೀಸಿದ್ದಾರೆ. ತಮಿಳಿನ ಸ್ಟಾರ್ ಹೀರೋ ವಿಜಯ್ ತಮಿಳಿನ ಸ್ಟಾರ್ ಪಟ್ಟದಿಂದ ಕೆಳಗೆ ಇಳಿದಿಲ್ಲ.

  Tamil Actor Vijay Bought New Costly House In Chennai

  ವರ್ಷಗಳಿಂದ ಸತತ ಯಶಸ್ಸಿನೊಂದಿಗೆ ಸೂಪರ್​ ಸ್ಟಾರ್​ ಎನಿಸಿಕೊಂಡಿದ್ದಾರೆ. 'ಮಾಸ್ಟರ್' ಹಿಟ್ ಆಯ್ತು ಆದರೆ ಬೀಸ್ಟ್ ಯಶಸ್ಸು ಗಳಿಸಲಿಲ್ಲ. ಹಾಗಾಗಿ ಮುಂದಿನ ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮನೆ ಮಾಡಿದೆ. 'ವಾರಿಸು' ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಶನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Tamil Actor Vijay Bought New Costly House In Chennai, Know More,
  Wednesday, August 31, 2022, 16:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X