ಮಹೇಶ್ ಬಾಬು ಸವಾಲು ಪೂರ್ಣಗೊಳಿಸಿದ ತಮಿಳು ನಟ ವಿಜಯ್
ಟಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಗ್ರೀನ್ ಇಂಡಿಯಾ ಚಾಲೆಂಜ್‌ನ್ನು ಈಗ ತಮಿಳು ನಟ ವಿಜಯ್ ಪೂರ್ಣಗೊಳಿಸಿದ್ದಾರೆ. ಮಂಗಳವಾರ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಗಿಡವನ್ನು ನೆಡುವ ಮೂಲಕ ತೆಲುಗು ನಟ ಮಹೇಶ್ ಬಾಬು ನೀಡಿದ್ದ ಸವಾಲನ್ನು ಯಶಸ್ವಿಗೊಳಿಸಿದ್ದಾರೆ.
Recommended Video
ಮಂಗಳವಾರ ಟ್ವಿಟ್ಟರ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ವಿಜಯ್, ನಾಮನಿರ್ದೇಶನ ಮಾಡಿದ್ದ ನಟ ಮಹೇಶ್ ಬಾಬುಗೆ ಧನ್ಯವಾದ ಅರ್ಪಿಸಿದ್ದಾರೆ.
''ಇದು ನಿಮಗಾಗಿ ಮಹೇಶ್ ಬಾಬು ಅವರೇ. ಒಳ್ಳೆಯ ಆರೋಗ್ಯಕ್ಕಾಗಿ ಗ್ರೀನರ್ ಇಂಡಿಯಾ. ಥ್ಯಾಂಕ್ ಯೂ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕೆ'' ಎಂದು ಟ್ವೀಟ್ ಮಾಡಿದ್ದಾರೆ.

ವಿಜಯ್ ಟಾಸ್ಕ್ ಪೂರ್ಣಗೊಳಿಸಿದ್ದಕ್ಕಾಗಿ ಮಹೇಶ್ ಬಾಬು ಸಹ ವಿಜಯ್ ಗೆ ಧನ್ಯವಾದ ಹೇಳಿದ್ದಾರೆ. ಇನ್ನು ಇತ್ತೀಚಿಗಷ್ಟೆ ಮಹೇಶ್ ಬಾಬು 45ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸರಳವಾಗಿ ಮನೆಯಲ್ಲಿ ಆಚರಿಸಿಕೊಂಡ ಮಹೇಶ್ ಬಾಬು ಹಸಿರು ಗಿಡ ನೆಡುವ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು.
ನಂತರ, ತೆಲುಗು ನಟ ಎನ್ ಟಿ ಆರ್, ನಟಿ ಶ್ರುತಿ ಹಾಸನ್ ಹಾಗೂ ವಿಜಯ್ ಅವರನ್ನು ಮುಂದಿನ ಚಾಲೆಂಜ್‌ಗೆ ನಾಮಿನಿರ್ದೇಶನ ಮಾಡಿದ್ದರು. ಇದಕ್ಕೂ ಮುಂಚೆ ನಾಗಾರ್ಜುನ, ರಶ್ಮಿಕಾ ಮಂದಣ್ಣ, ರಾಶಿ ಖನ್ನಾ, ಪ್ರಭಾಸ್, ಸಮಂತಾ ಸೇರಿದಂತೆ ಹಲವರು ಈ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು.


Click it and Unblock the Notifications











