'ಚಿತ್ರಮಂದಿರದಲ್ಲಿ 100ರಷ್ಟು ಅವಕಾಶ ಕೊಡಿ': ಸಿಎಂಗೆ ಮನವಿ ಮಾಡಿದ ವಿಜಯ್

ಕೊರೊನಾ ಭೀತಿಯ ನಡುವೆಯೂ ಚಿತ್ರಮಂದಿರಗಳಿಗೆ ಅವಕಾಶ ಕೊಟ್ಟಿದ್ದರೂ ಶೇಕಡಾ 100ರಷ್ಟು ಸಮ್ಮತಿ ನೀಡಿಲ್ಲ. ಇದು ದೊಡ್ಡ ನಿರ್ಮಾಪಕರ ಸಿನಿಮಾ ಹಾಗೂ ಸ್ಟಾರ್ ನಟರ ಚಿತ್ರಗಳಿಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯ ಇದೆ.

ಶೇಕಡಾ 100 ರಷ್ಟು ಅವಕಾಶ ಸಿಗುವವರೆಗೂ ಬಿಗ್ ಬಜೆಟ್ ಚಿತ್ರಗಳು ಚಿತ್ರಮಂದಿರಕ್ಕೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು ರಿಲೀಸ್‌ಗೆ ರೆಡಿಯಿದ್ದರೂ ಥಿಯೇಟರ್‌ಗೆ ಬರ್ತಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ತಮಿಳು ನಟ ವಿಜಯ್ ನಟನೆಯ 'ಮಾಸ್ಟರ್' ಬಿಡುಗಡೆ ದಿನಾಂಕ ಘೋಷಿಸಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13 ರಂದು 'ಮಾಸ್ಟರ್' ಸಿನಿಮಾ ಬಿಡುಗಡೆಯಾಗುತ್ತಿದೆ. ಒಂದು ವಾರಕ್ಕೆ ಮುಂಚಿತವಾಗಿ ಅಂದ್ರೆ ಜನವರಿ 7 ರಿಂದ ಟಿಕೆಟ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಇದೆ.

Tamil Actor Vijay Requests Tamilnadu CM to Permit 100% Audience in Theaters?

ಈ ಮದ್ಯೆ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರಿಗೆ ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

ಈ ವಿಚಾರವಾಗಿ ಸಿಎಂ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿದ ವಿಜಯ್ ಚಿತ್ರೋಧ್ಯಮದ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡಿ ಎಂದು ಕೇಳಿದ್ದಾರಂತೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಕಳೆದ ವಾರವಷ್ಟೇ ಸೆನ್ಸಾರ್ ಮುಗಿಸಿರುವ ಮಾಸ್ಟರ್ ಸಿನಿಮಾ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಹಿಂದಿಯಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದ್ದು, ''ವಿಜಯ್ ದಿ ಮಾಸ್ಟರ್'' ಎಂದು ಹೆಸರಿಡಲಾಗಿದೆ.

ಇನ್ನುಳಿದಂತೆ ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶನ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ.

More from Filmibeat

English summary
Tamil Actor Vijay requests tamilnadu Chief minister Edappadi K. Palaniswami to Permit 100% Audience in Theaters?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X