ಹೀರೊ ಆಗಿ ಚಿತ್ರರಂಗಕ್ಕೆ ವಿಜಯ್ ಸೇತುಪತಿ ಮಗ; ಮೊದಲ ಚಿತ್ರದ ಟ್ರೈಲರ್ ನೋಡಿ

ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸದೇನು ಅಲ್ಲ. ಸಿನಿಮಾ ಹಿನ್ನೆಲೆಯಿಂದ ಬಂದವರಿಗೆ ಬಹಳ ಸುಲಭವಾಗಿ ಅವಕಾಶ ಸಿಗಬಹುದು. ಆದರೆ ಪರಿಶ್ರಮ ಹಾಗೂ ಅದೃಷ್ಟದಿಂದ ಮಾತ್ರ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ. ಇದೀಗ ತಮಿಳು ನಟ ವಿಜಯ್ ಸೇತುಪತಿ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವಿಜಯ್ ಸೇತುಪತಿ ಈಗ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಅದ್ಭುತ ಪಾತ್ರಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ಕಳೆದ ವರ್ಷ 'ಮಹಾರಾಜ' ಚಿತ್ರದಲ್ಲಿ ನಟಿಸಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದರು. ಹೀರೊ ಆಗಿ ಮಾತ್ರವಲ್ಲದೇ ನೆಗೆಟಿವ್ ರೋಲ್‌ಗಳಲ್ಲಿ ಕೂಡ ಅಬ್ಬರಿಸಿ ಗೆದ್ದಿದ್ದಾರೆ. 17 ವರ್ಷಗಳ ಹಿಂದೆ ಕನ್ನಡದ 'ಅಖಾಡ' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ನಿಂತು ಹೋಯಿತು.

Tamil Actor Vijay Sethupathi s Son Surya Debuts as Action Hero in Phoenix

ಇದೀಗ ವಿಜಯ್ ಸೇತುಪತಿ ಮಗನ ಸರದಿ. ತಂದೆ ಹಾದಿಯಲ್ಲಿ ಪುತ್ರ ಸೂರ್ಯ ಕೂಡ ಹೀರೊ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸೂರ್ಯ ವಿಜಯ್ ಸೇತುಪತಿ ನಟನೆಯ 'ಫೀನಿಕ್ಸ್' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ ಆ ಚಿತ್ರದ ಟ್ರೈಲರ್ ಹೊರಬಂದು ಸದ್ದು ಮಾಡುತ್ತಿದೆ. ಅನಲ್ ಅರಸು ನಿರ್ದೇಶನದ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಪತ್, ದೇವದರ್ಶನಿ, ಮುತ್ತುಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ನಟ ವಿಜಯ್ ಸೇತುಪತಿಗೆ ಶ್ರೀಜ ಎಂಬ ಮಗಳು ಇದ್ದಾಳೆ. ಇದೀಗ ಮಗ ಬಣ್ಣದಲೋಕಕ್ಕೆ ಬಂದಿದ್ದಾನೆ. ಮೊದಲ ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಅಬ್ಬರಿಸಿರುವುದನ್ನು ನೋಡಬಹುದು. ಚಿತ್ರದಲ್ಲಿ ಸೂರ್ಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಫೈಟರ್ ಆಗಿ ಅಬ್ಬರಿಸಿದ್ದಾನೆ. ಪಾತ್ರಕ್ಕಾಗಿ ತೂಕ ಇಳಿಸಿ ಮಾರ್ಷಲ್ ಆರ್ಟ್ಸ್ ಕಲಿತ್ತಿದ್ದಾನೆ. ಹೃತಿಕ್ ಹಾಗೂ ಸಿಂಬು ಅವರನ್ನು ನೋಡಿ ದೇಹ ದಂಡಿಸಿ ಪಾತ್ರಕ್ಕೆ ಸಿದ್ಧತೆ ನಡೆಸಿದ್ದಾಗಿ ಸೂರ್ಯ ಹೇಳಿದ್ದಾನೆ.

ಮುಂದಿನ ವಾರವೇ 'ಫೀನಿಕ್ಸ್' ಸಿನಿಮಾ ತೆರೆಗೆ ಬರಲಿದೆ. ಜೀವನದಲ್ಲಿ ಸೋತ ಯುವಕನೊಬ್ಬ ಬಳಿಕ ಫೀನಿಕ್ಸ್ ರೀತಿ ಎದ್ದು ಬರುವ ಕಥೆಯಿದು. ಅನಲ್ ಅರಸು ಸ್ಟಂಟ್ ಮಾಸ್ಟರ್ ಆಗಿ ಜನಪ್ರಿಯರಾಗಿದ್ದಾರೆ. ನಿರ್ದೇಶಕರಾಗಿ ಇದು ಅವರ ಚೊಚ್ಚಲ ಪ್ರಯತ್ನ. ಹೀಗೆ ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ ಇದು.

ಮಗನ ಮೊದಲ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ವಿಜಯ್ ಸೇತುಪತಿ ಹಾಜರಾಗಿದ್ದರು. 6 ವರ್ಷಗಳ ಹಿಂದೆಯೇ ಅರಸು ಈ ಕಥೆ ನನಗೆ ಹೇಳಿದ್ದರು. ಆಗ ನಾನು ಬಹಳ ಬ್ಯುಸಿಯಾಗಿದ್ದೆ. ಬಳಿಕ ಬಂದು ನನ್ನ ಮಗ ಸೂರ್ಯನಿಗೆ ಈ ಕಥೆ ಸೂಕ್ತ ಎಂದರು. ಹಾಗಾಗಿ ಒಪ್ಪಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ಅನಲ್ ಅರಸು ಸ್ಟಂಟ್ ಮಾಸ್ಟರ್ ಆಗಿರುವುದರಿಂದ ಆಕ್ಷನ್‌ ಸನ್ನಿವೇಶಗಳಿಗೆ ಹೆಚ್ಚಿನ ಮಹತ್ವ ನೀಡಿ ಸಿನಿಮಾ ಮಾಡಿದ್ದಾರೆ. ಟ್ರೈಲರ್ ನೋಡಿದರೆ ಇದು ದೊಡ್ಡ ಸಿನಿಮಾ ಎನಿಸುವುದಿಲ್ಲ. ವಿಜಯ್ ಸೇತುಪತಿ ಮಗನಾಗಿದ್ದರೂ ಒಂದು ಸಣ್ಣ ಸಿನಿಮಾ ಮೂಲಕ ಸೂರ್ಯ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆತನ ಸಿನಿಭವಿಷ್ಯ ಹೇಗಿರುತ್ತದೆ ಕಾದು ನೋಡಬೇಕಿದೆ.

More from Filmibeat

English summary
Surya, son of Tamil star Vijay Sethupathi, makes his debut in the film Phoenix
Read more about: vijay sethupathi kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X