ಸ್ಟಾರ್ ನಿರ್ದೇಶಕನ ಕಚೇರಿಗೆ ಭೇಟಿ ನೀಡಿದ ತಮಿಳು ನಟ ವಿಜಯ್, ಕಾರಣವೇನು?
ತಮಿಳು ನಟ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಮೊದಲ ಸಲ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಬಳಿಕ ವಿಜಯ್ ಮತ್ತು ಎಆರ್ ಮುರುಗದಾಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬೇಕಿತ್ತು.
ಆದ್ರೆ, ಈ ಚಿತ್ರದಿಂದ ಮುರುಗದಾಸ್ ಹೊರಗುಳಿದಿದ್ದಾರೆ. ಮುರುಗದಾಸ್ ಜಾಗಕ್ಕೆ ಯುವ ನಿರ್ದೇಶಕರ ಆಯ್ಕೆಯಲ್ಲಿ ತೊಡಗಿಕೊಂಡಿರುವ ನಿರ್ಮಾಪಕರ ಪ್ರತಿಭಾನ್ವಿತ ಡೈರೆಕ್ಟರ್‌ಗೆ ಅವಕಾಶ ಕೊಡುವ ತಯಾರಿ ನಡೆಸಿದ್ದಾರೆ. ಈ ನಡುವೆ ನಟ ವಿಜಯ್ ಕಳೆದ ರಾತ್ರಿ ಸ್ಟಾರ್ ನಿರ್ದೇಶಕನ ಕಚೇರಿಯಲ್ಲಿ ಕಾಣಿಸಿಕೊಂಡಿರುವುದು ಹಲವು ಕುತೂಹಲಕ್ಕೆ ಜಾಗ ಮಾಡಿದೆ. ಮುಂದೆ ಓದಿ...

ಅಟ್ಲಿ ಭೇಟಿ ಮಾಡಿದ ವಿಜಯ್
ಕಳೆದ ರಾತ್ರಿ (ಡಿಸೆಂಬರ್ 3) ಚೆನ್ನೈನಲ್ಲಿರುವ ನಿರ್ದೇಶಕ ಅಟ್ಲಿ ಅವರ ಕಚೇರಿಗೆ ಭೇಟಿ ನೀಡಿದ ನಟ ವಿಜಯ್, ಸುಮಾರು ಹೊತ್ತು ಇದ್ದರು ಎಂದು ತಿಳಿದು ಬಂದಿದೆ. ಅಟ್ಲಿ ಮತ್ತು ವಿಜಯ್ ಅವರ ಈ ಭೇಟಿ ಹೊಸ ಸಿನಿಮಾಗೆ ಸಂಬಂಧಪಟ್ಟಿದ್ದು, ಚಿತ್ರದ ಕಥೆ ಕೇಳಲು ವಿಜಯ್ ಹೋಗಿದ್ದರು ಎಂಬ ಸುದ್ದಿ ವರದಿಯಾಗಿದೆ.

ವಿಜಯ್ 65ನೇ ಚಿತ್ರಕ್ಕೆ ಅಟ್ಲಿ?
ಮುರುಗದಾಸ್ ಮತ್ತು ವಿಜಯ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಬೇಕಿತ್ತು, ಮುರುಗದಾಸ್ ಈಗ ಹಿಂದೆ ಸರದಿದ್ದು ಈ ಚಿತ್ರವನ್ನು ನಿರ್ದೇಶಕ ಅಟ್ಲಿ ಅವರಿಂದ ಆಕ್ಷನ್ ಕಟ್ ಹೇಳಿಸಲು ಚರ್ಚೆಗಳು ನಡೆಯುತ್ತಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ.

ಶಾರೂಖ್ ಚಿತ್ರದಿಂದ ಅಟ್ಲಿ ಔಟ್!
'ಬಿಗಿಲ್' ಸಿನಿಮಾ ಬಳಿಕ ಶಾರೂಖ್ ಖಾನ್ ಜೊತೆ ಸಿನಿಮಾ ಮಾಡಲು ಅಟ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಯಿತು. ಈ ಸಂಬಂಧ ಶಾರೂಖ್ ಮತ್ತು ಅಟ್ಲಿ ಭೇಟಿ ಸಹ ಮಾಡಿದ್ದರು. ಸದ್ಯಕ್ಕೆ ಈ ಪ್ರಾಜೆಕ್ಟ್ ನಿಂತಿದೆ ಎನ್ನಲಾಗಿದೆ. ಹಾಗಾಗಿ, ಅಟ್ಲಿ ಯಾವ ಹೊಸ ಪ್ರಾಜೆಕ್ಟ್ ಸಹ ಘೋಷಣೆ ಮಾಡಿಲ್ಲ.
Recommended Video

ಅಂದಗಾರನ್ ಚಿತ್ರ
ನಿರ್ದೇಶನಕ್ಕೆ ಬ್ರೇಕ್ ನೀಡಿರುವ ಅಟ್ಲಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ಅರ್ಜುನ್ ದಾಸ್, ವಿನೋದ್ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಅಂದಗಾರನ್ ಚಿತ್ರವನ್ನು ಅಟ್ಲಿ ಅವರ ಪತ್ನಿ ಪ್ರಿಯಾ ನಿರ್ಮಾಣ ಮಾಡಿದ್ದರು. ನವೆಂಬರ್ 24 ರಂದು ಈ ಚಿತ್ರ ಬಿಡುಗಡೆಯಾಗಿದೆ.


Click it and Unblock the Notifications











