For Quick Alerts
  ALLOW NOTIFICATIONS  
  For Daily Alerts

  ಆಟೋರಿಕ್ಷಾದಲ್ಲಿ ಮೃತದೇಹವಾಗಿ ಪತ್ತೆಯಾದ ತಮಿಳು ಹಾಸ್ಯ ನಟ

  |

  ತಮಿಳಿನ ಹಾಸ್ಯನಟ ವಿ ಬಾಬು ಚೆನ್ನೈ ಆಟೋರಿಕ್ಷಾದಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸುದ್ದಿಯನ್ನು ಇಂಡಿಯಾ ಟುಡೇ ವರದಿ ಮಾಡಿದೆ.

  ತಮಿಳು ನಟ ಭರತ್ ನಟಿಸಿದ್ದ 'ಕಾದಲ್' ಚಿತ್ರದಲ್ಲಿ ವಿ ಬಾಬು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅದಾದ ಮೇಲೆ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ. ಆದ್ರೀಗ, ಚೆನ್ನೈನ ಆಟೋವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

  'ಬಿಲ್ಲಾ-2' ಖ್ಯಾತಿಯ ನಟ ಥೀಪೆಟ್ಟೆ ಗಣೇಶನ್ ನಿಧನ

  ವಿ ಬಾಬು ಅವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಮಾನಸಿಕವಾಗಿ ಬಹಳ ನೊಂದಿದ್ದರು ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಪೋಷಕರನ್ನು ಕಳೆದುಕೊಂಡಿದ್ದ ಬಾಬು ಮಾನಸಿಕವಾಗಿ ನೊಂದಿದ್ದರು. ಸರಿಯಾದ ಉದ್ಯೋಗವೂ ಇಲ್ಲದೇ ಆಟೋರಿಕ್ಷಾದಲ್ಲಿ, ದೇವಸ್ಥಾನಗಳಲ್ಲಿ ಮಲಗುತ್ತಿದ್ದರು.

  2014ರಲ್ಲಿ ಬಿಡುಗಡೆಯಾಗಿದ್ದ 'ಕಾದಲ್' ಸಿನಿಮಾದಲ್ಲಿ ಬಾಬು ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಬಾಬು ಹೆಚ್ಚು ಅವಕಾಶಗಳು ಸಿಗಲಿಲ್ಲ. ಇದು ಆರ್ಥಿಕವಾಗಿ ಬಾಬುಗೆ ಸಂಕಷ್ಟ ಎದುರಿಸುವಂತಾಯಿತು.

  Yuvarathna film team lands in trouble!

  ಎರಡು ವರ್ಷಗಳಿಂದ ಸಾಹಸ ನಿರ್ದೇಶಕ ಸಾಯಿ ಧೀನಾ ದೇವಸ್ಥಾನದಲ್ಲಿ ಮೃತಪಟ್ಟಿದ್ದರು. ನಂತರ ಅವರನ್ನು ಸಾಯಿ ಧೀನಾ ಎಂದು ಗುರುತಿಸಿ ಮನೆಗೆ ಪಾರ್ಥಿವ ಶರೀರ ರವಾನಿಸಲಾಗಿತ್ತು.

  English summary
  Kaadhal movie Fame actor Virutchagakanth Babu found dead in an autorickshaw in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X