ನಟಿ ಧನ್ಸಿಕಾ ಜೊತೆ ನಟ ವಿಶಾಲ್ ಮದುವೆ ಘೋಷಣೆ; ವೇದಿಕೆಯಲ್ಲೇ ಮುತ್ತಿಟ್ಟ ನಟ

ತಮಿಳು ನಟ ವಿಶಾಲ್ ಮದುವೆ ವಿಚಾರ ಪದೇ ಪದೆ ಸುದ್ದಿ ಆಗುತ್ತಲೇ ಇತ್ತು. ಕೆಲ ನಟಿಯರ ಜೊತೆಗೂ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಹೈದರಾಬಾದ್ ಮೂಲದ ಅನಿಶಾ ಅಲ್ಲಾ ರೆಡ್ಡಿ ಎಂಬಾಕೆ ಜೊತೆ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಅದು ಮುರಿದು ಬಿತ್ತು

ವಯಸ್ಸು 45 ದಾಟಿದರೂ ವಿಶಾಲ್ ಮದುವೆ ಬಗ್ಗೆ ಆಲೋಚಿರಲಿಲ್ಲ. ನಾನು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಶೀಘ್ರದಲ್ಲೇ ಆಕೆಯ ಜೊತೆ ಮದುವೆ ಆಗುತ್ತೇನೆ ಎಂದು ನಿನ್ನೆ(ಮೇ 18) ಹೇಳಿದ್ದರು. ಇದೀಗ ಸಿನಿಮಾ ಸುದ್ದಿಗೋಷ್ಠಿಯಲ್ಲೇ ವಿಶಾಲ್ ಮದುವೆ ಸುದ್ದಿ ಹೊರಬಿದ್ದಿದೆ. ತಮಿಳು ನಟಿ ಸಾಯಿ ಧನ್ಸಿಕಾ ಜೊತೆ ವಿಶಾಲ್ ಮದುವೆ ಆಗುತ್ತಿದ್ದಾರೆ.

Tamil Actor Vishal announces marriage to actress Sai Dhanshika

ಸಾಯಿ ಧನ್ಸಿಕಾ ನಟನೆಯ 'ಯೋಗಿ ಡ' ಎಂಬ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ವಿಶಾಲ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆಯಲ್ಲೇ ಇಬ್ಬರೂ ತಮ್ಮ ಪ್ರೀತಿ ಹಾಗೂ ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ. ನಾವಿಬ್ಬರು ಸ್ನೇಹಿತರಾಗಿದ್ದೆವು. ಬಳಿಕ ಪ್ರೀತಿಸಲು ಆರಂಭಿಸಿದೆವು. ಈಗ ಮದುವೆ ಆಗಲು ನಿರ್ಧರಿಸಿದ್ದೇವೆ. ಆಗಸ್ಟ್ 29ಕ್ಕೆ ನಮ್ಮ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.

ವೇದಿಕೆಯಲ್ಲೇ ಸಾಯಿ ಧನ್ಸಿಕಾಗೆ ವಿಶಾಲ್ ಮುತ್ತು ಕೊಟ್ಟು ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ತಂಜಾವೂರು ಮೂಲದ ಸಾಯಿ ಧನ್ಸಿಕಾ ಎರಡು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇಬ್ಬರ ನಡುವೆ 12 ವರ್ಷ ವಯಸ್ಸಿನ ಅಂತರವಿದೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಧನ್ಸಿಕಾ ಬಳಿಕ ನಾಯಕಿಯಾಗಿಯೂ ನಟಿಸಿದರು.

ತಮಿಳು ಸಿನಿಮಾ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಕೆಲಸ ಮುಗಿದ ಮೇಲೆ ನನ್ನ ಮದುವೆ ಎಂದು ವಿಶಾಲ್ ಹೇಳುತ್ತಾ ಬರುತ್ತಿದ್ದರು. ಇದೀಗ ಕಟ್ಟಡ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಆಗಸ್ಟ್ 29ರಂದು ವಿಶಾಲ್ ಹುಟ್ಟುಹಬ್ಬ. ಹಾಗಾಗಿ ಅದೇ ದಿನ ಮದುವೆ ಆಗಲು ಪ್ಲ್ಯಾನ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಕಳೆದೆರಡು ದಿನಗಳಿಂದ ವಿಶಾಲ್-ಧನ್ಸಿಕಾ ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು.

'ಯೋಗಿ ಡ' ಚಿತ್ರದ ಆಡಿಯೋ ಲಾಂಚ್ ವೇದಿಕೆಯಲ್ಲಿ ಧನ್ಸಿಕಾ ಮಾತನಾಡುತ್ತಾ ಮದುವೆ ವಿಚಾರ ಪ್ರಸ್ತಾಪಿಸಿದರು. ಈ ವೇದಿಕೆಯನ್ನು ನಾವು ನಮ್ಮ ಮದುವೆ ಅನೌನ್ಸ್‌ಮೆಂಟ್ ವೇದಿಕೆ ಮಾಡಿಕೊಳ್ಳಬೇಕು ಎಂದು ನಾವು ಅಂದುಕೊಂಡಿರಲಿಲ್ಲ. ಬೆಳಗ್ಗೆ ನಮ್ಮಿಬ್ಬರ ಮದುವೆ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. 15 ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ಇನ್ನು ಮುಚ್ಚಿಡುವುದು ಏನು ಇಲ್ಲ, "ಬೇಬಿ ಹೇಳಿಬಿಡ್ಲಾ" ಎಂದು ವಿಶಾಲ್ ಕಡೆ ತಿರುಗಿ ಕೇಳಿದ್ದಾರೆ. ವಿಶಾಲ್ ಕೂಡ ಸಹಮತ ವ್ಯಕ್ತಪಡಿಸುತ್ತಿದ್ದಂತೆ ಧನ್ಸಿಕಾ "ನಾವಿಬ್ಬರು ಆಗಸ್ಟ್ 29ಕ್ಕೆ ಮದುವೆ ಆಗ್ತೀವಿ" ಎಂದಿದ್ದಾರೆ.

ವಿಶಾಲ್ ಸದಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೆ ಸಮಸ್ಯೆ ಎಂದಾಗ ನಮ್ಮ ಮನೆಗೂ ಬಂದು ಜೊತೆ ನಿಂತರು. ಅವರ ಆ ನಡೆ ನನಗೆ ಬಹಳ ಇಷ್ಟವಾಯಿತು. ಇತ್ತೀಚೆಗೆ ಮಾತನಾಡಲು ಶುರು ಮಾಡಿದ್ದೆವು. ಆ ಸಮಯದಲ್ಲೇ ನಮ್ಮಿಬ್ಬರ ನಡುವೆ ಪ್ರೀತಿ ಮೂಡಿತ್ತು. ಇಬ್ಬರಿಗೂ ಅದೇ ಅಭಿಪ್ರಾಯ ಇತ್ತು. ಮದುವೆ ಆಗಬೇಕು ಎಂದುಕೊಂಡೆವು. ವಿಶಾಲ್ ಖುಷಿಯಾಗಿರಬೇಕು. 'ಐ ಲವ್ ಯು' ಎಂದು ಧನ್ಸಿಕಾ ಹೇಳಿದ್ದಾರೆ.

ಬಳಿಕ ವಿಶಾಲ್ ತಮ್ಮಿಬ್ಬರ ಮದುವೆ ಬಗ್ಗೆ ಅದೇ ವೇದಿಕೆಯಲ್ಲಿ ಮಾತನಾಡಿದರು. "ಧನ್ಸಿಕಾ ತಂದೆ ಇಲ್ಲೇ ಇದ್ದಾರೆ. ಅವರ ಅನುಮತಿ ಪಡೆದು ನಾನು ಮಾತನಾಡುತ್ತಿದ್ದೇನೆ. ಈ ವೇದಿಕೆಯನ್ನು ನಮ್ಮಿಬ್ಬರ ಮದುವೆ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಹೌದು ಇಲ್ಲೇ ಇದ್ದಾರೆ ಧನ್ಸಿಕಾ ನನ್ನ ಸೋಲ್‌ಮೇಟ್. ನೀವೆಲ್ಲರೂ ನನ್ನ ಕುಟುಂಬ. ನಿಮ್ಮ ಮುಂದೆ ಹೇಳ್ತಿದ್ದೀನಿ. ನಾನು ಧನ್ಸಿಕಾ ಅವರನ್ನು ಮನಸ್ಸಾರೆ ಪ್ರೀತಿಸುತ್ತಿದ್ದೇನೆ, ನಾವಿಬ್ಬರೂ ಮದುವೆ ಆಗುತ್ತಿದ್ದೇವೆ" ಎಂದಿದ್ದಾರೆ.

"ನಾನು ನಮ್ಮ ಪೋಷಕರಿಗೆ ಹಾಗೂ ಧನ್ಸಿಕಾ ತಂದೆಗೆ ಈ ವಿಚಾರ ಹೇಳಿದೆ. ಅವರೆಲ್ಲಾ ಒಪ್ಪಿದ್ದರು. ನಮ್ಮ ಸ್ನೇಹಿತರಿಗೆ ಮೊದ್ಲೆ ಈ ಗುಟ್ಟು ಗೊತ್ತಾಗಿತ್ತು. ಇವತ್ತು ನಿಮ್ಮೆಲ್ಲರ ಮುಂದೆ ಈ ವಿಚಾರ ಹೇಳಿಕೊಳ್ಳುತ್ತಿದ್ದೇನೆ. ಇವತ್ತೆ ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ ಅನ್ನಿಸುತ್ತೆ. ಎಲ್ಲರೂ ಮದುವೆಗೆ ಬಂದು ಹರಸಿ" ಎಂದು ಮಾಧ್ಯಮದವರ ಮುಂದೆ ವಿಶಾಲ್ ಮನವಿ ಮಾಡಿದ್ದಾರೆ.

More from Filmibeat

English summary
Tamil actor Vishal and actress Sai Dhanshika confirmed their relationship and announced their wedding date as August 29
Read more about: vishal kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X