48ನೇ ವರ್ಷದಲ್ಲಿ ನಟಿ ಸಾಯಿ ಧನ್ಷಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಶಾಲ್; ಫೋಟೊ ವೈರಲ್

ತಮಿಳು ನಟರಾದ ವಿಶಾಲ್ ಮತ್ತು ಸಾಯಿ ಧನ್ಷಿಕಾ ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು (ಆಗಸ್ಟ್ 29) ಶುಕ್ರವಾರದಂದು ತಮ್ಮ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಬದುಕಿನ ಈ ವಿಶೇಷ ಕ್ಷಣಗಳ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ.

ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ, ವಿಶಾಲ್ ಮತ್ತು ಸಾಯಿ ಧನ್ಷಿಕಾ ಇಬ್ಬರೂ ಪಕ್ಕಾ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನ್ಷಿಕಾ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದರೆ, ವಿಶಾಲ್ ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಹಂಚಿಕೊಂಡಿರುವ ಫೋಟೊಗಳಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ನಿಂತು ಖುಷಿಯಲ್ಲಿ ಸ್ಮೈಲ್ ಕೊಟ್ಟಿದ್ದಾರೆ. ಪೋಟೊ ಒಂದರಲ್ಲಿ ವಿಶಾಲ್‌ ಭಾವಿ ಪತ್ನಿ ಧನ್ಷಿಕಾರನ್ನು ಅಪ್ಪಿಕೊಂಡಿರುವ ಫೋಟೊ ವೈರಲ್ ಆಗಿದೆ.

Tamil Actor Vishal finaly Gets Engaged to Sai Dhanshika Couple Stuns in Traditional Outfits

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜೋಡಿ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಕ್ಲೋಸ್-ಅಪ್ ಫೋಟೊವನ್ನೂ ಶೇರ್ ಮಾಡಿದೆ. ಕೊನೆಯ ಫೋಟೊದಲ್ಲಿ, ವಿಶಾಲ್ ಮತ್ತು ಧನ್ಷಿಕಾ ತಮ್ಮ ಕುಟುಂಬದ ಸದಸ್ಯರ ಜೊತೆಯಲ್ಲಿ ಪೋಸ್ ನೀಡಿದ್ದಾರೆ. ಈ ವಿಶೇಷ ಸಮಾರಂಭವು ವಿಶಾಲ್ ಅವರ 48ನೇ ಹುಟ್ಟುಹಬ್ಬದಂದೇ ನಡೆದಿರುವುದು ಮತ್ತೊಂದು ವಿಶೇಷ.

ನಿಶ್ಚಿತಾರ್ಥದ ಬಳಿಕ ಪೋಸ್ಟ್ ಹಂಚಿಕೊಂಡಿರುವ ವಿಶಾಲ್, ತಮ್ಮ ಹುಟ್ಟುಹಬ್ಬದ ಶುಭಾಶಯ ಕೋರಿದವರಿಗೆ ಧನ್ಯವಾದ ತಿಳಿಸಿದ್ದಾರೆ. "ಇಡೀ ವಿಶ್ವದ ಪ್ರತಿ ಮೂಲೆಯಿಂದಲೂ ನನ್ನ ವಿಶೇಷ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಮತ್ತು ಆಶೀರ್ವದಿಸಿದವರಿಗೆ ಪ್ರೀತಿಯ ಧನ್ಯವಾದಗಳು" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, "ನಮ್ಮ ಕುಟುಂಬಗಳ ನಡುವೆ ಇಂದು ನಡೆದ ನನ್ನ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ" ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

Tamil Actor Vishal finaly Gets Engaged to Sai Dhanshika Couple Stuns in Traditional Outfits

ವಿಶಾಲ್ ತಮ್ಮ ಪೋಸ್ಟ್‌ನಲ್ಲಿ, "ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. ಈ ವೇಳೆ ನಾನು ನಮ್ಮಲ್ಲಿ ಪಾಸಿಟಿವ್ ಭಾವನೆಗಳಿವೆ. ಎಂದಿನಂತೆ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ವಿಶಾಲ್ ತಮ್ಮ ನಿಶ್ಚಿತಾರ್ಥದ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, "ನೀವು ಜೀವನ ಸುಖಮಯವಾಗಿರಲಿ", "ನಿಮಗೆ ಸದಾ ಸಂತೋಷ ಸಿಗಲಿ" ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

ವಿಶಾಲ್ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಹಾಗೇ ಸಿನಿಮಾ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಥ್ರಿಲ್ಲರ್ 'ಚೆಲ್ಲಮೆ' ಸಿನಿಮಾದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. 'ಸಂಡಕೋಳಿ', 'ತಿಮೂರು', 'ತಾಮಿರಭರಣಿ' ಮತ್ತು 'ಮಲೈಕೋಟೈ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. 2013ರಲ್ಲಿ 'ಪಾಂಡಿಯ ನಾಡು', 2014ರಲ್ಲಿ 'ನಾನ್ ಸಿಗಪ್ಪು ಮಣಿತನ್' ಮತ್ತು 'ಪೂಜೈ' ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2006ರಲ್ಲಿ ಅವರಿಗೆ ಕಲಾಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಧನ್ಷಿಕಾ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ತಮಿಳು ಚಿತ್ರ 'ತಿರುಡಿ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ 'ಪೆರನ್ಮೈ' (2009), 'ಅರವಾನ್' (2012), 'ಪರದೇಶಿ' (2013) ಮತ್ತು 'ಕಬಾಲಿ' (2016) ಯಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Tamil actor Vishal got engaged to actress Sai Dhanshika in a private ceremony. The couple looked elegant in traditional outfits—Dhanshika in a beautiful saree and Vishal in a classic white shirt with vesti. Fans are eagerly waiting for their wedding announcement.
Read more about: vishal tamil actor engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X