Breaking: ಶೂಟಿಂಗ್ ವೇಳೆ ತಮಿಳು ನಟ ವಿಶಾಲ್‌ಗೆ ಗಂಭೀರ ಪೆಟ್ಟು

'ಮಾರ್ಕ್ ಆಂಟನಿ' ಸಿನಿಮಾ ಚಿತ್ರೀಕರಣದ ವೇಳೆ ತಮಿಳು ನಟ ವಿಶಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೆ 'ಲಾಠಿ' ಸಿನಿಮಾ ಶೂಟಿಂಗ್‌ ವೇಳೆ ಸಹ ವಿಶಾಲ್ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಆಕ್ಷನ್ ಸಿನಿಮಾಗಳ ಮೂಲಕ ನಟ ವಿಶಾಲ್ ಕಾಲಿವುಡ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ರಿಸ್ಕಿ ಸ್ಟಂಟ್‌ಗಳಿಂದ ಅಭಿಮಾನಿಗಳನ್ನು ರಂಜಿಸುವ ನಟ ಇಂದು(ಆಗಸ್ಟ್ 11) ಬೆಳಗ್ಗೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಅದಿಕ್ ರವಿಚಂದ್ರನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾರ್ಕ್ 'ಆಂಟನಿ'. ಸದ್ಯ ಚೆನ್ನೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ನಟ, ನಿರ್ದೇಶಕ ಎಸ್. ಎ ಸೂರ್ಯ ಸಹ ಪ್ರಮುಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Tamil Actor Vishal gets injured while Mark Antony Movie shooting

ರಿತು ವರ್ಮ ನಾಯಕಿಯಾಗಿ ನಟಿಸುತ್ತಿದ್ದು, ಎಸ್. ವಿನೋದ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಕನ್ನಲ್ ಕಣ್ಣನ್, ಪೀಟರ್ ಹೀನ್ಸ್ ಹಾಗೂ ರವಿವರ್ಮಾ 'ಮಾರ್ಕ್ ಆಂಟನಿ' ಚಿತ್ರಕ್ಕೆ ಸ್ಟಂಟ್ ಕಂಪೋಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ.

Recommended Video

ಧಾರಾವಾಹಿ ಪ್ರಿಯರಿಗೆ ಇವರೆಂದರೆ ಬಹಳ ಅಚ್ಚುಮೆಚ್ಚು | Arjun Ramesh | Bigg Boss OTT *Bigg Boss

More from Filmibeat

English summary
Tamil Actor Vishal gets injured while Mark Antony Movie shooting. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X