ತಮಿಳು ನಟ ವಿಶಾಲ್ ಬದುಕಿಗೆ ಬಂದ ಐವರು ಚೆಲುವೆಯರು!

ಬಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಮದುವೆ ಎಲ್ಲವೂ ಬೇಗ ನಡೆದುಬಿಡುತ್ತದೆ. ಇತ್ತೀಚೆಗೆ ಡಿವೋರ್ಸ್‌ ಕೂಡ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ. ಇತ್ತೀಚೆಗೆ ತಮಿಳು ನಟ ವಿಶಾಲ್ ತಮ್ಮ ಮದುವೆ ವಿಚಾರ ಘೋಷಿಸಿದ್ದಾರೆ. ನಟಿ ಧನ್ಸಿಕಾ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನ ಮೂವರ ಜೊತೆ ವಿಶಾಲ್ ಮದುವೆ ಎಂದು ಚರ್ಚೆ ನಡೆದಿತ್ತು.

ಚಿತ್ರರಂಗದಲ್ಲಿ ನಟ-ನಟಿಯರ ನಡುವೆ ಲವ್ ಆಗುವುದು ಹೊಸದೇನು ಅಲ್ಲ. ಒಟ್ಟಿಗೆ ಒಂದು ಸಿನಿಮಾಗಳಲ್ಲಿ ನಟಿಸಿ ಕದ್ದು ಮುಚ್ಚಿ ಓಡಾಡಿದರೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿ ಬಿಡುತ್ತದೆ. ಅದು ಸಾಕಷ್ಟು ಬಾರಿ ನಿಜವಾಗಿರುವುದು ಇದೆ. ಪ್ರಚಾರಕ್ಕಾಗಿ ಇಂತಹ ಗಾಳಿಸುದ್ದಿಗಳಿಗೆ ಬೇಕಂತಲೇ ಪ್ರತಿಕ್ರಿಯೆ ನೀಡದೇ ಸುಮ್ಮನಿರುವುದು ಇದೆ. ಹಾಗಾಗಿ ಆ ಊಹಾಪೋಹ ಮುಂದೆ ದೊಡ್ಡದಾಗಿ ಸದ್ದು ಮಾಡುತ್ತದೆ.

Tamil Actor Vishal to Marry Actress Dhanshika Amid Past Rumors and Breakups

ವಿಶಾಲ್- ವರಲಕ್ಷ್ಮಿ ಡೇಟಿಂಗ್?

ಶರತ್‌ ಕುಮಾರ್ ಪುತ್ರಿ ವರಲಕ್ಷ್ಮಿ ಹಾಗೂ ವಿಶಾಲ್ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. 7 ವರ್ಷಗಳ ಹಿಂದೆ ಈ ಬಗ್ಗೆ ವರಲಕ್ಷ್ಮಿ ತಮಿಳು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು. ನಾವಿಬ್ಬರು ಸ್ನೇಹಿತರು ಮಾತ್ರ ಎಂದು ಹೇಳಿದ್ದರು.

"ವಿಶಾಲ್ ಮದುವೆಗೆ ಸಿದ್ಧನಿದ್ದರೆ, ಅವನಿಗೆ ಸೂಕ್ತವಾದ ವಧುವನ್ನು ಹುಡುಕಲು ನಾನು ಸಿದ್ಧ. ಅವನು ಮದುವೆಯಾದರೆ ನನಗೆ ಸಂತೋಷವಾಗುತ್ತದೆ. ಎಲ್ಲರೂ ನಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಏಕೆ ಹರಡುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ" ಎಂದು ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದರು.

ವಿಶಾಲ್-ಅನಿಶಾ ನಿಶ್ಚಿತಾರ್ಥ

ಬರೀ ಡೇಟಿಂಗ್ ವದಂತಿ ಮಾತ್ರವಲ್ಲ ಹೈದರಾಬಾದ್ ಮೂಲಕ ಅನಿಶಾ ಅಲ್ಲ ಎಂಬಾಕೆ ಜೊತೆ ವಿಶಾಲ್ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. 2019ರ ಏಪ್ರಿಲ್‌ನಲ್ಲಿ ಇಬ್ಬರ ಮದುವೆ ನಿಶ್ಚಯವಾಗಿತ್ತು. ಅದ್ಧೂರಿಯಾಗಿ ಸಮಾರಂಭ ನಡೆದಿತ್ತು. ಅದೇ ವರ್ಷ ಅಕ್ಟೋಬರ್‌ನಲ್ಲಿ ಮದುವೆ ಎನ್ನಲಾಗಿತ್ತು. ಆದರೆ ಬಳಿಕ ತಮ್ಮ ವಿಶಾಲ್-ಅನಿಶಾ ಎಂಜೇಗ್‌ಮೆಂಟ್ ಬ್ರೇಕಪ್ ಮಾಡಿಕೊಂಡಿದ್ದರು. ಮೋಹನ್ ಲಾಲ್, ಖುಷ್ಬೂ, ಕಾರ್ತಿ ಸೇರಿದಂತೆ ಚಿತ್ರರಂಗದ ಕೆಲವೇ ಆಪ್ತರು ಇವರಿಬ್ಬರ ನಿಶ್ಚಿತಾರ್ಥಕ್ಕೆ ಹಾಜರಾಗಿದ್ದರು.

Tamil Actor Vishal to Marry Actress Dhanshika Amid Past Rumors and Breakups

ಅಭಿನಯ- ವಿಶಾಲ್ ಲವ್ವಿಡವ್ವಿ?

ವರ್ಷದ ಹಿಂದೆ ನಟಿ ಅಭಿನಯ ಹಾಗೂ ನಟ ವಿಶಾಲ್ ನಡುವೆ ಲವ್ವಾಗಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಇಬ್ಬರೂ 'ಮಾರ್ಕ್ ಆಂಟನಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಹಾಗಾಗಿ ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಬಳಿಕ ಅಭಿನಯ ಈ ಬಗ್ಗೆ ಪ್ರತಿಕ್ರಿಯಿಸಿ ಅದೆಲ್ಲಾ ಸುಳ್ಳು ಎಂದಿದ್ದರು. ನಾನು 15 ವರ್ಷಗಳಿಂದ ಒಬ್ಬರನ್ನು ಪ್ರೀತಿಸುತ್ತಿದ್ದೇನೆ, ಅವರನ್ನೇ ಮದುವೆ ಆಗ್ತೀನಿ ಎಂದಿದ್ದರು. ಇತ್ತೀಚೆಗೆ ಆಕೆಯ ಮದುವೆ ಸಹ ನೆರವೇರಿತು.

ಲಕ್ಷ್ಮಿ ಮೆನನ್ ಜೊತ ಮದುವೆ?

'ಪಾಂಡಿಯನಾಡು', 'ನಾನ್ ಸಿಗಪ್ಪು ಮನಿದನ್' ಚಿತ್ರಗಳಲ್ಲಿ ವಿಶಾಲ್ ಜೋಡಿಯಾಗಿ ಲಕ್ಷ್ಮಿ ಮೆನನ್ ನಟಿಸಿದ್ದರು. ಆಗ ಇಬ್ಬರು ಲವ್ ಮಾಡುತ್ತಿದ್ದಾರೆ. ಸೀಕ್ರೆಟ್ ಆಗಿ ಮದುವೆ ಕೂಡ ನಡೆದಿದೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಅಂತಿಮವಾಗಿ ಇದೆಲ್ಲಾ ಸುಳ್ಳು ಎಂದು ವಿಶಾಲ್ ಸ್ಪಷ್ಟನೆ ನೀಡಿದ್ದರು.

ರೀಮಾ ಸೇನ್, ಆಂಡ್ರಿಯಾ ಹಾಗೂ ಅಭಿರಾಮಿ ಜೊತೆಗೂ ನಟ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಕೀರ್ತಿ ಸುರೇಶ್ ಜೊತೆ ಮದುವೆಗೆ ನಿರ್ದೇಶಕರೊಬ್ಬರ ಮೂಲಕ ಮಾತುಕತೆ ನಡೆಸುವ ಪ್ರಯತ್ನವಾಗಿತ್ತು. ಆದರೆ ಅದ್ಯಾವುದು ನಿಜವಾಗಲಿಲ್ಲ. ಕೀರ್ತಿ ಸುರೇಶ್ ಕೈ ಹಿಡಿಯಲು ವಿಶಾಲ್ ಬಯಸಿದ್ದರು ಎಂದು ವರದಿಯಾಗಿದೆ.

ಈ ಹಿಂದೆ ನಟಿ ಧನ್ಸಿಕಾ ಒಂದು ವಿವಾದದಲ್ಲಿ ಸಿಲುಕಿದ್ದರು. ತಮಿಳು ನಟ, ನಿರ್ದೇಶಕ ಟಿ. ರಾಜೇಂದರ್ ವೇದಿಕೆಯಲ್ಲೇ ಆಕೆಯ ಮೇಲೆ ಗರಂ ಆಗಿದ್ದರು. ಆಕೆ ಕಣ್ಣೀರಾಕುವಂತಾಗಿತ್ತು. ಆ ಘಟನೆಯ ವೇಳೆ ವಿಶಾಲ್ ಆಕೆಯ ಬೆಂಬಲಕ್ಕೆ ನಿಂತಿದ್ದರು. ಆಗ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಇತ್ತೀಚೆಗೆ ಇಬ್ಬರೂ ಮದುವೆ ಆಗಲು ನಿಶ್ಚಯಿಸಿದ್ದರು. ಆಗಸ್ಟ್ 29ಕ್ಕೆ ಮದುವೆ ಎಂದು ಹೇಳಿದ್ದಾರೆ.

More from Filmibeat

English summary
Tamil actor Vishal is all set to marry actress Dhansika on August 29
Read more about: vishal kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X