ನ್ಯೂಯಾರ್ಕ್‌ನಲ್ಲಿ ಯುವತಿ ಜೊತೆ ಸಿಕ್ಕಿ ಬಿದ್ದ ನಟ ವಿಶಾಲ್!: ಮುಖ ಮುಚ್ಚಿಕೊಂಡು ಓಡಿದ ನಟ!

ತಮಿಳು ನಟ ವಿಶಾಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಕಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ವಿಶಾಲ್ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಬಂದ 'ಮಾರ್ಕ್ ಆಂಟನಿ' ಸಿನಿಮಾ ಕೂಡ ಹಿಟ್ ಆಗಿತ್ತು. ಇನ್ನು ವಿಶಾಲ್ ಮದುವೆ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ.

ಕೆಲ ನಟಿಯರ ಜೊತೆಗೂ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ವರಲಕ್ಷ್ಮಿ ಶರತ್‌ಕುಮಾರ್, ಲಕ್ಷ್ಮಿ ಮೆನನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಇನ್ನು ಇತ್ತೀಚೆಗೆ ನಟಿ ಅಭಿನಯ ಜೊತೆ ಮದುವೆ ಆಗುತ್ತಾರೆ ಎನ್ನುವ ವದಂತಿಗಳನ್ನು ಹರಿಬಿಡಲಾಗಿತ್ತು.

tamil actor Vishals video with a mystery woman in newyork goes viral

ಈ ಹಿಂದೆ ಅನಿಶಾ ಎಂಬಾಕೆಯ ಜೊತೆ ನಟ ವಿಶಾಲ್ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ಅದು ಮುರಿದುಬಿದ್ದಿತ್ತು. ಸದ್ಯ ವಿಶಾಲ್ ನ್ಯೂಯಾರ್ಕ್‌ನಲ್ಲಿದ್ದಾರೆ. ವಿಶಾಲ್ ಮಾಲ್‌ವೊಂದರ ಒಳಗಿಂದ ಹುಡುಗಿಯ ಜೊತೆ ಹೊರಗೆ ಬರುವುದು. ನೀವು ವಿಶಾಲ್ ಅಲ್ವಾ? ಎನ್ನುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಿ ಹೋಗುವಂತಹ ವಿಡಿಯೋ ವೈರಲ್ ಆಗುತ್ತಿದೆ.

ವಿಶಾಲ್ ಜೊತೆ ಕಾಣಿಸಿಕೊಂಡ ಆ ಯುವತಿ ಯಾರು? ಏನ್ ಕಥೆ? ಎಂದು ಕೆಲವರು ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರೋದು ವಿಶಾಲ್ ಹೌದೋ ಅಲ್ವೋ ಎಂದು ಚರ್ಚಿಸುವವರು ಇದ್ದಾರೆ. ಕೆಲವರು ಇದು ಫೇಕ್ ವಿಡಿಯೋ ಎನ್ನುತ್ತಿದ್ದಾರೆ. ಸಿನಿಮಾ ಪಬ್ಲಿಸಿಟಿಗಾಗಿ ಈ ರೀತಿಯ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

tamil actor Vishals video with a mystery woman in newyork goes viral

ಇದು ಸಿನಿಮಾ ಚಿತ್ರೀಕರಣದ ವಿಡಿಯೋ? ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಸರಿಯಾಗಿ ಗಮನಿಸಿದರೆ ಇದು ಫೇಕ್, ಪಬ್ಲಿಸಿಟಿ ಗಿಮಿಕ್ ಎನ್ನುವುದು ಅರ್ಥವಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸ್ವತಃ ವಿಶಾಲ್ ಮಾತನಾಡಬೇಕಿದೆ.

ಇತ್ತೀಚೆಗೆ ಮುಂಬೈ CBFC ಬಗ್ಗೆ ವಿಶಾಲ್ ಗಂಭೀರ ಆರೋಪ ಮಾಡಿ ಸುದ್ದಿಯಾಗಿದ್ದರು. ತಮ್ಮ 'ಮಾರ್ಕ್ ಆಂಟನಿ' ಚಿತ್ರದ ಹಿಂದಿ ವರ್ಷನ್‌ ಸೆನ್ಸಾರ್ ಕಾಪಿ ಪಡೆಯಲು ಅಲ್ಲಿನ ಸೆನ್ಸಾರ್ ಮಂಡಳಿಗೆ ಲಂಚ ನೀಡಿದ್ದಾಗಿ ವಿಶಾಲ್ ಹೇಳಿದ್ದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.

ಮುಂಬೈನಲ್ಲಿರುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಕಚೇರಿಯಲ್ಲಿ ಇಂತಹ ಸಮಸ್ಯೆ ಎದುರಾಗಿತ್ತು ಎಂದು ವಿಶಾಲ್ ವಿಡಿಯೋ ಮಾಡಿ ಹೇಳಿದ್ದರು. ವಿಶಾಲ್ ತನ್ನಿಂದ ಹಣ ಪಡೆದವರ ಹೆಸರು, ಖಾತೆ ಸಂಖ್ಯೆ ಮತ್ತು ಪಾವತಿಸಿದ ಮೊತ್ತವನ್ನು ಕೂಡ ವಿವರಿಸಿದ್ದರು. ಸಿನಿಮಾಗಳಲ್ಲಿ ಭ್ರಷ್ಟಾಚಾರದ ವಿಚಾರ ತೋರಿಸುತ್ತಾರೆ. ಆದರೆ ನಾನು ನನ್ನ ಚಿತ್ರದ ಸೆನ್ಸಾರ್‌ಗಾಗಿ 6.5 ಲಕ್ಷ ರೂ. ಹಣ ಲಂಚವಾಗಿ ಕೊಟ್ಟೆ ಎಂದಿದ್ದರು.

'ಮಾರ್ಕ್‌ ಆಂಟನಿ' ಸಿನಿಮಾ ನೂರು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಅಧಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ಎಸ್.ಜೆ ಸೂರ್ಯ, ಸೆಲ್ವ ರಾಘವನ್ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮಿನಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿನೋದ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ರಿತು ವರ್ಮಾ ನಾಯಕಿಯಾಗಿ ಮಿಂಚಿದ್ದರು. ಸೆಪ್ಟೆಂಬರ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು.

ಸದ್ಯ ವಿಶಾಲ್ 'ರತ್ನಂ' ಹಾಗೂ 'ತುಪ್ಪಾರಿವಾಲನ್- 2' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ತುಪ್ಪಾರಿವಾಲನ್- 2' ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳುತ್ತಿದ್ದಾರೆ. ಸದ್ಯ ವೈರಲ್ ವಿಡಿಯೋದಿಂದ ಭಾರೀ ಸುದ್ದಿಯಲ್ಲಿದ್ದಾರೆ.

More from Filmibeat

English summary
actor Vishal gets Caught with his Girlfriend?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X