ನಟಿಯ ಮೇಲೆ ಮಾಜಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ: ಬೆಂಗಳೂರಿನಲ್ಲೂ ದಾಖಲಾಗಿತ್ತು ಕೇಸ್

ತನ್ನ ಮಾಜಿ ಪ್ರಿಯಕರನಿಂದ ಚಿತ್ರಹಿಂಸೆ ಅನುಭವಿಸಿದ್ದಾಗಿ ತಮಿಳು ನಟಿ ಅನಿಕಾ ವಿಜಯಿ ವಿಕ್ರಮನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲ ಫೋಟೊಗಳನ್ನು ಆಕೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅನಿಕಾ ಎದೆ, ಕಣ್ಣು, ಭುಜ, ಎದೆಯ ಭಾಗಗಳಲ್ಲಿ ಗಾಯಗಳಾಗಿರುವುದನ್ನು ನೋಡಬಹುದು. ತಮ್ಮ ರಿಲೇಶನ್‌ಶಿಪ್‌ನಿಂದ ಎದುರಾದ ಕಹಿ ಅನುಭವವನ್ನು ನಟಿ ಬರೆದುಕೊಂಡಿದ್ದಾರೆ. ನನ್ನ ಮಾಜಿ ಪ್ರಿಯಕರನಿಂದ ನನಗೂ, ನನ್ನ ಕುಟುಂಬಕ್ಕೂ ಪ್ರಾಣಹಾನಿ ಇದೆ ಎಂದು ಅನಿಕಾ ತಿಳಿಸಿದ್ದಾರೆ.

"ಈ ಹಿಂದೆ ಅನೂಪ್ ಪಿಳ್ಳೈ ಎಂಬ ವ್ಯಕ್ತಿಯ ಜೊತೆ ರಿಲೇಶನ್‌ಶಿಪ್‌ನಲ್ಲಿ ಇದ್ದೆ. ಅದು ನನಗೆ ಕಹಿ ನೆನಪುಗಳನ್ನು ಉಳಿಸಿದೆ. ಆತ ನನಗೆ ಮಾನಸಿಕವಾಗಿ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದ. ಅಂತಹ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡಿಲ್ಲ. ನನಗೆ ಇಂತಹ ಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ನನಗೆ ಇಷ್ಟೆಲ್ಲಾ ಹಿಂಸೆ ನೀಡಿದರೂ ಆತನಲ್ಲಿ ಮಾತ್ರ ಬದಲಾವಣೆ ಆಗಲಿಲ್ಲ. ಇಂದಿಗೂ ನನಗೆ ನೋವು ಕೊಡುತ್ತಿದ್ದಾನೆ" ಎಂದು ಅನಿಕಾ ಬರೆದುಕೊಂಡಿದ್ದಾರೆ.

Tamil actress Anicka Vikraman was brutally beaten by her ex boyfriend Anoop Pillai

ಮತ್ತೊಂದು ಪೋಸ್ಟ್‌ನಲ್ಲಿ "ಮೊದಲ ಬಾರಿಗೆ ಹಲ್ಲೆ ಮಾಡಿದಾಗ, ನನ್ನ ಕಾಲಿನ ಮೇಲೆ ಬಿದ್ದು ಕ್ಷಮೆ ಕೇಳಿದ್ದ. ಅದಕ್ಕೆ ಬಿಟ್ಟುಬಿಟ್ಟೆ. ಆದರೆ ಎರಡನೇ ಬಾರಿ ಕೂಡ ಅದೇ ರಿಪೀಟ್ ಆಯಿತು. ತೀವ್ರವಾಗಿ ಹಲ್ಲೆ ಮಾಡಿದ್ದ. ಸಹಿಸಿಕೊಳ್ಳಲು ಸಾಧ್ಯವಾಗದೇ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪೊಲೀಸರಿಗೆ ಹಣ ನೀಡಿ ತನ್ನತ್ತ ಸೆಳೆದುಕೊಂಡ. ಮೊದಲಿಗೆ ನಾವಿಬ್ಬರು ಸ್ನೇಹಿತರಾಗಿ ಇದ್ದೆವು. ಹಾಗಾಗಿ ಆತನ ಮೇಲೆ ಅನುಮಾನ ಬರಲಿಲ್ಲ. ನನ್ನ ಫೋನ್ ಒಡೆದು ಹಾಕಿದ. ನಾನು ಶೂಟಿಂಗ್‌ಗೂ ಹೋಗಲು ಸಾಧ್ಯವಾಗಲಿಲ್ಲ."

"ರಿಲೇಶನ್‌ಶಿಪ್‌ನಲ್ಲಿ ಇದ್ದಾಗ ಆಗ್ಗಾಗ್ಗೆ ನನ್ನ ಫೋನ್ ಚೆಕ್ ಮಾಡುತ್ತಿದ್ದ. ಒಮ್ಮೆ ನನ್ನ ಮೇಲೆ ಹಲ್ಲೆ ಮಾಡಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಲು ಹೋದ. ನಾನು ಆ ನೋವು ತಾಳಲಾರದೇ ಅಳುತ್ತಿದ್ದರೆ ಡ್ರಾಮಾ ಚೆನ್ನಾಗಿ ಮಾಡುತ್ತೀಯಾ ಎಂದು ನಗುತ್ತಿದ್ದ. ನನಗೆ ಇದರಿಂದ ಹೊರ ಬರಲು, ನನ್ನ ಕುಟುಂಬ ಈ ಬಗ್ಗೆ ತಿಳಿಸಲು ಬಹಳ ಸಮಯ ಬೇಕಾಯಿತು. ಇನ್ನು ದೈಹಿಕವಾಗಿ ಮಾನಸಿಕವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಇದನ್ನು ಇಲ್ಲಿಗೆ ಬಿಡಲ್ಲ. ಆದರೆ ಏನು ಮಾಡುವುದು ಗೊತ್ತಿಲ್ಲ. ಆತ ಈಗ ನ್ಯೂಯಾರ್ಕ್‌ನಲ್ಲಿದ್ದಾನೆ" ಎಂದು ಅನಿಕಾ ವಿಕ್ರಮನ್ ನೋವು ತೋಡಿಕೊಂಡಿದ್ದಾರೆ.

Tamil actress Anicka Vikraman was brutally beaten by her ex boyfriend Anoop Pillai

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅನಿಕಾ 'ಜಾಸ್ಮಿನ್' ಎನ್ನುವ ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. 'ವಿಷಮಕಾರನ್' ಎನ್ನುವ ಮತ್ತೊಂದು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ನಟಿಯಾಗಿ, ರೂಪದರ್ಶಿಯಾಗಿ ಗುರ್ತಿಸಿಕೊಂಡಿರುವ ನಟಿ ಸದ್ಯ ಚೆನ್ನೈನಲ್ಲಿ ವಾಸವಾಗಿದ್ದಾರೆ.

More from Filmibeat

English summary
Tamil actress Anicka Vijayi Vikraman was brutally beaten by her ex boyfriend Anoop Pillai. Actress says that she was subjected to brutal mental and physical torture. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X