ವೈರಲ್ ಆದ ಹಾಟ್ ವಿಡಿಯೋ ಬಗ್ಗೆ ತಲಾ ಅಜಿತ್ 'ವಿಶ್ವಾಸಂ' ನಟಿ ಅನಿಕಾ ಬೇಸರ

ಕಾಲಿವುಡ್ ನ ಯುವ ನಟಿ ಅನಿಕಾ ಸುರೇಂದರ್ ಯಾರಿಗೆ ತಾನೆ ಗೊತ್ತಿಲ್ಲ. ತಲಾ ಅಜಿತ್ ನಟನೆಯ 'ವಿಶ್ವಾಸಂ' ಸಿನಿಮಾದಲ್ಲಿ ಅಜಿತ್ ಮತ್ತು ನಯನತಾರಾ ಮಗಳಾಗಿ ನಟಿಸಿದ್ದ ಅನಿಕಾಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಬಾಲ ನಟಿಯಾಗಿ ಮಲಯಾಳಂ ಸಿನಿಮಾರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನಿಕಾ, ಸದ್ಯ ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. 2007ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿಕಾ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ತಲಾ ಅಜಿತ್ ನಟನೆಯ ಎನೈ ಅರಿಂದಾಲ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಅಜಿತ್ 'ವಿಶ್ವಾಸಂ' ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಟಿ

ಅಜಿತ್ 'ವಿಶ್ವಾಸಂ' ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಟಿ

ತಮಿಳಿನಲ್ಲಿ ನಾಲ್ಕೈದು ಸಿನಿಮಾಗಳನ್ನು ಮಾಡಿರುವ ಅನಿಕಾಗೆ ವಿಶ್ವಾಸಂ ಸಿನಿಮಾ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದೆ. ಸದ್ಯ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿರುವ ಅನಿಕಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಆಗಾಗ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅನಿಕಾ ಹಾಟ್ ವಿಡಿಯೋ ವೈರಲ್

ಅನಿಕಾ ಹಾಟ್ ವಿಡಿಯೋ ವೈರಲ್

ಅನಿಕಾ ಅವರ ಹಾಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಪ್ಪು ಬಟ್ಟೆ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ.

ವಿಡಿಯೋ ಬಗ್ಗೆ ಅನಿಕಾ ಬೇಸರ

ವಿಡಿಯೋ ಬಗ್ಗೆ ಅನಿಕಾ ಬೇಸರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಅನಿಕಾ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ತನ್ನದಲ್ಲ ಎಂದು ಹೇಳಿದ್ದಾರೆ. 'ವಿಡಿಯೋದಲ್ಲಿ ನೃತ್ಯ ಮಾಡಿರುವುದು ನಾನಾಲ್ಲ. ಅದು ಎಡಿಟ್ ಮಾಡಿರುವ ವಿಡಿಯೋ ಆಗಿರಬಹುದು. ಇದು ನನಗೆ ತುಂಬಾ ನೋವುಂಟು ಮಾಡಿದೆ. ಈ ರೀತಿ ಯಾವುದೇ ಹುಡುಗಿಗೂ ಆಗಬಾರದು. ಈ ವಿಡಿಯೋ ಬಗ್ಗೆ ಗಂಭೀರವಾಗಿ ಚಿಂತಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಹೇಳಿದ್ದಾರೆ.

Recommended Video

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada
ತಮಿಳು ಸಿನಿಮಾದಲ್ಲಿ ನಟನೆ

ತಮಿಳು ಸಿನಿಮಾದಲ್ಲಿ ನಟನೆ

ಅನಿಕಾ ಸದ್ಯ ತಮಿಳಿನ ಮಮಾನಿಥನ್ ಸಿನಿಮಾದಲ್ಲಿ ನಿಟಿಸದ್ದು, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ಗಾಯತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Tamil Actress Anikha Surendran clarifies about viral hot video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X